)
ಬೆಳಗಾವಿ : ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಗೆ 9 ಸಲ ಚಾಕುವಿನಿಂದ ಚುಚ್ಚಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಮದುವೆ ಬಳಿಕವೂ ವಿವಾಹಿತೆ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ.
ನನ್ನ ಪತ್ನಿಯಂತೆ ನೀನೂ ನನ್ನ ಮಾತು ಕೇಳಬೇಕು ಎಂದು ಪೀಡಿಸುತ್ತಿದ್ದ. ಖಾನಾಪುರ ತಾಲೂಕಿನ ಬೀಡಿ ಗ್ರಾಮದ ರೇಷ್ಮಾ ತಿರವಿರ (29) ಕೊಲೆಯಾದ ದುರ್ದೈವಿ. ಪ್ರೇಯಸಿ ಸಾವನಪ್ಪುತ್ತಿದ್ದಂತೆ ಭಯಗೊಂಡು ತಾನೂ ಅದೇ ಚಾಕುವಿನಿಂದ ಚುಚ್ಚಿಕೊಂಡ ಪ್ರಾಣ ಬಿಟ್ಟಿದ್ದಾನೆ.
ಸ್ಥಳೀಯರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆನಂದ ಸತಾರ್ನನ್ನು (31) ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಸುತಾರ್ ಸಾವನ್ನಪ್ಪಿದ್ದಾನೆ.
ಆನಂದ ಸುತಾರ್ ಮದುವೆ ಬಳಿಕವೂ ರೇಷ್ಮಾ ಜೊತೆಗೆ 3 ವರ್ಷಗಳಿಂದ ಸಲುಗೆ ಹೊಂದಿದ್ದರು. ಮೂರು ಮಕ್ಕಳನ್ನು ಹೊಂದಿದ್ದ ಆನಂದ, ಎರಡು ಮಕ್ಕಳನ್ನು ಹೊಂದಿರುವ ರೇಷ್ಮಾ ಒಂದೇ ಊರಿನ, ಒಂದೇ ಕಾಲನಿಯ ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಸ್ನೇಹ ಇತ್ತು.
ಮದುವೆ ಬಳಿಕ ಇಬ್ಬರ ಮಧ್ಯೆ ಸಲುಗೆ ಹೆಚ್ಚಾಗಿತ್ತು. 3 ವರ್ಷಗಳಿಂದ ಸಂಬಂಧ ಹೊಂದಿದ್ದರು. ಕಳೆದ ತಿಂಗಳಷ್ಟೇ ರೇಷ್ಮಾ ಪತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ನಂದಗಡ ಪೊಲೀಸರಿಗೆ ರೇಷ್ಮಾ ಪತಿ ಮಾಹಿತಿ ನೀಡಿದ್ದರು.
ಪೊಲೀಸರ ವಾರ್ನ್ ಬಳಿಕ ಆನಂದನಿಂದ ರೇಷ್ಮಾ ಅಂತರ ಕಾಯ್ದುಕೊಂಡಿದ್ದರು. ಇಷ್ಟಕ್ಕೆ ಸಿಟ್ಟಿಗೆದ್ದು ಮನೆಯ ಹಿಂಬಾಗಿಲಿನಿಂದ ಹೋಗಿ ರೇಷ್ಮಾಳನ್ನು ಬರ್ಬರ ಹತ್ಯೆ ಮಾಡಿದ್ದಾನೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.