Chamarajanagar suicide Case: ಬೋಳು ತಲೆ ಅಂತಾ ಪದೇ ಪದೇ ಪತ್ನಿ ಗೇಲಿ ಮಾಡಿದ್ದರಿಂದ ಮನನೊಂದ ಪತಿಯೊಬ್ಬ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಆಘಾತಕಾರಿ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಪರಶಿವಮೂರ್ತಿ (32) ಎಂದು ಗುರುತಿಸಲಾಗಿದೆ. ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಗೇಲಿ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಕಳೆದ ಎರಡು ವರ್ಷದ ಹಿಂದೆ ಮಮತಾಳ ಜೊತೆಗೆ ಪರಶಿವಮೂರ್ತಿ ಮದುವೆಯಾಗಿದ್ದ.
ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಬಿರಿಯಾನಿ, ಹಣ್ಣು ನೀಡುವಂತೆ ಮುಸ್ಲಿಂ ಕೈದಿಗಳ ಪ್ರತಿಭಟನೆ
ಲಾರಿ ಚಾಲಕನಾಗಿದ್ದ ಪರಶಿವಮೂರ್ತಿಗೆ ಮದುವೆ ಬಳಿಕ ಕೂದಲು ಸಂಪೂರ್ಣ ಉದುರಿತ್ತು. ಹೀಗಾಗಿ ಮಮತಾ, ʼನಿನ್ನ ಎಲ್ಲಾ ಕೂದಲು ಉದುರಿ ಹೋಗಿವೆ. ನಿನ್ನ ಜೊತೆ ಹೊರಗಡೆ ಹೋಗಲು ನನಗೆ ನಾಚಿಕೆಯಾಗುತ್ತದೆʼ ಅಂತಾ ಗೇಲಿ ಮಾಡುತ್ತಿದ್ದಳಂತೆ.
ಇದಷ್ಟೇ ಅಲ್ಲದೇ ಪರಶಿವಮೂರ್ತಿ ವಿರುದ್ಧ ಮಮತಾ ಸುಳ್ಳು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಜೈಲಿಗೂ ಕಳುಹಿಸಿದ್ದಳಂತೆ. ಮದುವೆಯಾಗಿದ್ದರೂ ಸಹ ತಾಳಿ ಇಲ್ಲದ ಫೋಟೋಗಳನ್ನ ಮಮತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ.
ಇದನ್ನೂ ಓದಿ: ನಟಿಯರ ಜೊತೆಗೆ ಅನುಚಿತ ವರ್ತನೆ ತೋರಿದ ನಟ ಪ್ರಥಮ್ ವಿರುದ್ಧ ಆಕ್ರೋಶ!!
ಇದೇ ವಿಚಾರಕ್ಕೆ ಮನೆಯಲ್ಲಿ ಪದೇ ಪದೇ ಜಗಳ ಆಗುತ್ತಿತ್ತು. ಇದರಿಂದ ಬೇಸರಗೊಂಡಿದ್ದ ಪರಶಿವಮೂರ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮರಣೋತ್ತರ ಪರೀಕ್ಷೆ ನಂತರ ಪೊಲೀಸರು ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5 ನಲ್ಲೂ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









