ಮನೆ ಮಾಲೀಕನ ಪತ್ನಿಯನ್ನೇ ಪಟಾಯಿಸಿದ್ದ ಭೂಪ! ಲವ್ ಮಾಡಿ ಮದುವೆಯಾಗಿದ್ದ ವ್ಯಕ್ತಿಯ ಬರ್ಬರ ಹತ್ಯೆ!

Crime News: ಬಾಡಿಗೆ ಮನೆಯ ಮಾಲೀಕನ ಹೆಂಡ್ತಿಯನ್ನೇ ಪಟಾಯಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರಿನ ಜಯಪುರದಲ್ಲಿ ನಡೆದಿದೆ

Written by - Puttaraj K Alur | Last Updated : Apr 28, 2025, 03:27 PM IST
  • ಮನೆ ಮಾಲೀಕನ ಪತ್ನಿಯನ್ನೇ ಪಟಾಯಿಸಿ ಲವ್ ಮಾಡಿ ಮದುವೆಯಾಗಿದ್ದ ಭೂಪ!
  • ಕಿಡ್ನಾಪ್‌ ಮಾಡಿ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿ ಎಸೆದು ಹೋದ ದುಷ್ಕರ್ಮಿಗಳು
  • ಮನೆ ಮಾಲೀಕನ ಹೆಂಡತಿ ಜೊತೆಗೆ ಸ್ನ್ಯಾಕ್ಸ್‌ ತಿನ್ನಲು ನೆಲಮಂಗಲಕ್ಕೆ ಬಂದಿದ್ದ ವೇಳೆ ಘಟನೆ
ಮನೆ ಮಾಲೀಕನ ಪತ್ನಿಯನ್ನೇ ಪಟಾಯಿಸಿದ್ದ ಭೂಪ! ಲವ್ ಮಾಡಿ ಮದುವೆಯಾಗಿದ್ದ ವ್ಯಕ್ತಿಯ ಬರ್ಬರ ಹತ್ಯೆ!

Tumakuru Crime News: ಮನೆ ಮಾಲೀಕನ ಪತ್ನಿಯನ್ನೇ ಪಟಾಯಿಸಿ ಲವ್ ಮಾಡಿ ಮದುವೆಯಾಗಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರಿನ ಜಯಪುರದಲ್ಲಿ ನಡೆದಿದೆ. ಸೋಲೂರು ಮೂಲದ ದಿಲೀಪ್ ಮೃತ ದುರ್ದೈವಿ. 

Add Zee News as a Preferred Source

ಕೊಲೆಯಾಗಿರುವ ದಿಲೀಪ್‌ ತಾನು ಬಾಡಿಗೆಗಿದ್ದ ಮನೆ ಮಾಲೀಕನ ಹೆಂಡತಿಯೊಂದಿಗೆ ಸ್ನ್ಯಾಕ್ಸ್‌ ತಿನ್ನಲು ಬಂದಿದ್ದ. ಈ ವೇಳೆ ಆತನನ್ನ ಕಿಡ್ಯ್ನಾಪ್‌ ಮಾಡಿ ಬರ್ಬರವಾಗಿ ಕೊಲೆ ಮಾಡಿ ಎಸೆದು ಹೋಗಲಾಗಿದೆ. ದಾಬಸ್ ಪೇಟೆಯಲ್ಲಿ ಕಾರ್ಗೋ ನಡೆಸುತ್ತಿದ್ದ ದಿಲೀಪ್, ಸೋಲೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಈ ವೇಳೆ ಮನೆ ಮಾಲೀಕನ ಪತ್ನಿ ಅಮೃತಳ ಪರಿಚಯವಾಗಿತ್ತು. 5 ವರ್ಷದ ಹಿಂದೆ ದಿಲೀಪ್ ವಿವಾಹಿತ ಮಹಿಳೆ ಅಮೃತಳನ್ನು ಲವ್‌ ಮಾಡಿ ಮದುವೆಯಾಗಿದ್ದ. ಇದು ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು.

ಇದನ್ನೂ ಓದಿ: ಭಾರತೀಯ ಸೇನೆಯಿಂದ ಆಪರೇಷನ್‌ ಟೆರರ್‌ ಹೌಸ್‌

ಭಾನುವಾರ ದಿಲೀಪ್ ಹಾಗೂ ಅಮೃತ ಸ್ನ್ಯಾಕ್ಸ್‌ ತಿನ್ನಲು ನೆಲಮಂಗಲಕ್ಕೆ ಬಂದಿದ್ದರು. ಈ ವೇಳೆ ಐದಾರು ಜನ ದುಷ್ಕರ್ಮಿಗಳು ದಿಲೀಪ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಆತನನ್ನು ಕಿಡ್ಯ್ನಾಪ್‌ ಮಾಡಿದ್ದರು. ಬಳಿಕ ಕೊಲೆ ಮಾಡಿ ತುಮಕೂರಿನ ಜಯಪುರ ಬಯಲು ಪ್ರದೇಶದಲ್ಲಿ ಬಿಸಾಕಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ ಅಂತಾ ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ನೆಲಮಂಗಲ ಬಳಿ ದಿಲೀಪ್‌ನನ್ನ ಹತ್ಯೆ ಮಾಡಿ, ರಾತ್ರಿ ತುಮಕೂರಿನ ಜಯಪುರ ಬಳಿ ಶವ ಎಸೆದು ಆರೋಪಿಗಳು ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ತಿಲಕ್ ಪಾರ್ಕ್ ಪೋಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಜಿಲ್ಲಾ ಶವಗಾರಕ್ಕೆ ರವಾನಿಸಲಾಗಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಖಾಕಿಪಡೆ ಬಲೆ ಬೀಸಿದೆ.

ಇದನ್ನೂ ಓದಿ: ಪಹಲ್ಗಾಮ್‌ ಉಗ್ರ ದಾಳಿ ತನಿಖೆಗೆ ಇಳಿದ ಎನ್‌ಐಎ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News