)
ಗದಗ: ಶ್ರಾವಣ ಮಾಸ.. ಮನೆಯಲ್ಲಿ ಮಾಂಸಾಹಾರ ಸೇವನೆ ಮಾಡ್ಬಾರ್ದು ಅಂತಾ ಆ ಯುವಕ ಆಚೆ ಹೋಟೆಲ್ ಗೆ ಹೋಗಿದ್ದ.. ಬಿರಿಯಾನಿ ಆರ್ಡರ್ ಮಾಡಿ ಊಟ ಮಾಡ್ತಿದ್ದ, ಅಷ್ಟರಲ್ಲಿ ಹೋಟೆಲ್ ಗೆ ಎಂಟ್ರಿಕೊಟ್ಟ ಮೂವರ ತಂಡ ಆ ಯುವನ ರಕ್ತ ಹರಿಸಿದ್ದಾರೆ.
ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಬುಧವಾರ ನಡೆದ ಕೊಲೆ ಘಟನೆ ಪಟ್ಟಣವನ್ನೇ ಬೆಚ್ಚಿ ಬೀಳಿಸಿದೆ. ಮಧ್ಯಾಹ್ನ 3 ಗಂಟೆಗೆ ಮಟ್ಟಣದ ತಾಜ್ ಬಿರಿಯಾನಿ ಹೋಟೆಲ್ ಗೆ ನುಗ್ಗಿದ್ದ ಮೂವರು ಬಸವರಾಜ್ ಮಮ್ಮಟಗೇರಿ ಎಂಬ 22 ವರ್ಷದ ಯುವಕನನ್ನ ಕೊಚ್ಚಿ ಕೊಲೆಮಾಡಿದ್ದಾರೆ.
ಬಿರಿಯಾನಿ ಹೋಟೆಲ್ ಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಬಸವರಾಜ್ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಉರಿಯಿಂದ ಬಿದ್ದು ಒದ್ದಾಡ್ತಿದ್ದವನಿಗೆ ಸುತ್ತಿಗೆ ಯಿಂದ ಹೊಡೆದು, ಕೊಯ್ತಾ ದಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.. ರಕ್ತದ ಮಡುವಿನಲ್ಲಿ ಒದ್ದಾಡಿ, ಬಸವರಾಜ್ ಪ್ರಾಣ ಬಿಟ್ಟಿದ್ದ. ವಿಷಯ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನರಗುಂದ ಪೊಲೀಸರು ಪರಿಶೀಲನೆ ನಡೆಸಿದ್ರು..
ಗದಗ ಎಸ್ಪಿ ರೋಹನ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ರು.. ಭೀಭತ್ಸ ಘಟನೆಯ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು 18 ಗಂಟೆಯಲ್ಲೇ ಆರೋಪಿಗಳನ್ನ ಲಾಕ್ ಮಾಡಿದ್ದಾರೆ. ಕಳೆದ ದಿನಗಳ ಹಿಂದೆ ನರಗುಂದದ ಪತ್ರೀವನ ಮಠದ ಜಾತ್ರೆ ನಡೆದಿರುತ್ತೆ.. ಜಾತ್ರೆಯಲ್ಲಿ ಬಸವರಾಜ್ ಸಹೋದರ ಭೀಮಪ್ಪನ ಜೊತೆ ನರಗುಂದ ಪಟ್ಟಣದ ರಾಚಯ್ಯ ಏರಿಯಾದ ಮಹಾಂತೇಶ್ ಎಂಬಾತನ ಗಲಾಟೆ ತೆಗೆದಿದ್ದ.
ವಿಷಯ ಗೊತ್ತಾಗಿ ಸಂಜೆ ಮಹಾಂತೇಶ್ ನನ್ನ ಕರೆಸಿ ಬಸವರಾಜ್ ಸಹ ಹೊಡೆದು ಕಳೆಸಿದ್ನಂತೆ.. ಇದ್ರಿಂದ ಕೋಪಗೊಂಡಿದ್ದ ಮಹಾಂತೇಶ್ ಆ್ಯಂಡ್ ಗ್ಯಾಂಗ್ ಗಲಾಟೆಗೆ ಮುಂದಾಗಿತ್ತು.. ಹಿಂದಿನಿಂದಲೂ ರಾಚಯ್ಯ ಏರಿಯಾ, ಕಸಬಾ ಏರಿಯಾ ಹುಡಗರ ಮಧ್ಯೆ ಸಣ್ಣಪುಟ್ಟ ಗಲಾಟೆ ನಡೆದಿತ್ತಂತೆ.. ಜಾತ್ರೆಯ ಗಲಾಟೆಯ ನಂತ್ರ ಎರಡೂ ಏರಿಯಾ ಯುವಕರನ್ನ ಕೂರಿಸಿ ಹಿರಿಯರು ರಾಜಿ ಸಂದಾನ ಮಾಡಿಸಿದ್ರಂತೆ.. ಕೆಲ ಕಾಲ ಎರಡು ಗುಂಪು ತಣ್ಣಗಾಗಿದ್ದವು.
ಈ ಮಧ್ಯೆ ಗಣೇಶ ಹಬ್ಬದ ನಂತ್ರ ಬಸವರಾಜ್, ಮಹಾಂತೇಶ್ ಮೇಲೆ ಹಲ್ಲೆ ಮಾಡಲಿದ್ದಾನೆ ಅನ್ನೋ ಸುದ್ದಿ ಎದ್ದಿತ್ತಂತೆ.. ಹೀಗಾಗಿ ಮಹಾಂತೇಶ್ ತನ್ನ ಸಹಚರರಾದ ರಾಚನಗೌಡ ಅಲಿಯಾಸ್ ಆನಂದ್, ಚಂತದ್ರಶೇಖರ್ ಅಲಿಯಾಸ್ ಚಂದನ್ ಜೊತೆಗೆ ಸೇರಿ ಬಸವರಾಜ್ನನ್ನ ಎತ್ತೋದಕ್ಕೆ ಪ್ಲ್ಯಾನ್ ಮಾಡ್ತಾರೆ.
ಬುಧವಾರ ಮಧ್ಯಾಹ್ನ ಊಟಕ್ಕೆ ಹೋಗಿದ್ದ ಬಸವರಾಜ್ ನಿಗೆ ಕಾಲ್ ಮಾಡಿದ್ದ ಮಹಾಂತೇಶ್ ಲೊಕೇಷನ್ ತಿಳಿದುಕೊಂಡಿದ್ದ.. ನಂತ್ರ ಆನಂದ್, ಚಂದನ್ ಜೊತೆಗೆ ಎಂಟ್ರಿಕೊಟ್ಟಿದ್ದ ಮಹಾಂತೇಶ್ ಸುತ್ತಿಗೆಯಿಂದ ಹಲ್ಲೆ ಮಾಡಿ ಕೊಯ್ತದಿಂದ ಕುತ್ತಿಗೆ ಮುಖಕ್ಕೆ ಹೊಡೆದು ಕೊಲೆ ಮಾಡಿದ್ರು..
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.