ತುಮಕೂರು : ಕಲ್ಪತರು ನಾಡು ತುಮಕೂರು ನಗರದಲ್ಲಿ ಪುಡಿರೌಡಿಗಳ ಅಟ್ಟಹಾಸಕ್ಕೆ ಯುವಕನೊರ್ವ ಬೀದಿ ಹೆಣವಾಗಿದ್ದಾನೆ. ಶಾಂತವಾಗಿದ್ದ ಮಚ್ಚು ಲಾಂಗುಗಳಿಂದ ಯುವಕನ ಮುಖ ಮೂತಿ ನೋಡದೇ ಚಿಂದಿ ಚಿಂದಿಯಾಗಿ ಕೊಚ್ಚಿ ಕೊಲೈಗೈದಿದ್ದಾರೆ. ಇತ್ತ ಮಚ್ಚು ಬೀಸಿದ್ದ ರೌಡಿಶೀಟರ್ ಕೂಡ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ..
ಹೌದು ವೀಕ್ಷಕರೇ ಇಷ್ಟು ತುಮಕೂರು ನಗರದಲ್ಲಿ ಪೊಲೀಸರ ಅದ್ದುಬಸ್ತಿನಲ್ಲಿದ್ದ ರೌಡಿ ಆಕ್ಟಿವಿಟೀಸ್ ಕಳೆದ ರಾತ್ರಿ ಏಕಾಏಕಿ ಅದ್ದುಮೀರಿಬಿಟ್ಟಿದೆ.. ರಾತ್ರಿ 10.30ರ ವೇಳೆಗೆ ಈ ಫುಟ್ ಬಾಲ್ ಪ್ಲೇಯರ್ 28 ವರ್ಷದ ಈ ಯುವಕ ಅತ್ಯಂತ ಭೀಕರವಾಗಿ ಕೊಲೆಯಾಗಿದ್ದಾನೆ..
ಹೌದು ವೀಕ್ಷಕರೇ ಈ ಯುವಕನ ಹೆಸರು ಅಭಿಶೇಕ್ ಅಂತ ತುಮಕೂರಿನ ಕ್ಯಾತಸಂದ್ರದ ನಿವಾಸಿ, ಮೊನ್ನೆ ರಾತ್ರಿ ಸ್ನೇಹಿತನ ಬರ್ತ್ ಡೆ ಅಂತ ಈಚೆ ಹೋದ ಕೆಲವೇ ನಿಮಿಷಗಳಲ್ಲಿ ಹೀಗೆ ಭೀಕರವಾಗಿ ಕೊಲೆಯಾಗಿದ್ದಾನೆ..
ಅಭಿಶೇಕ್ ಹೀಗೆ ಭೀಕರವಾಗಿ ಕೊಲೆಯಾಗುವುದಕ್ಕೆ ಹಳೇ ವೈಶಮ್ಯ ಎನ್ನಲಾಗಿದೆ.. ಕಳೆದ ಒಂದು ವಾರದ ಹಿಂದೆ ಈ ರೌಡಿಶೀಟರ್ ಮನೋಜ್ ಅಲಿಯಾಸ್ ಪ್ಯಾಚ್ ನೊಂದಿಗೆ ಬಾರ್ ನೊಂದಿಗೆ ಸಣ್ಣ ಗಲಾಟೆ ಮಾಡಿಕೊಂಡಿದ್ದ,, ಸಣ್ಣ ವಿಚಾರ ಅಂತ ಅಷ್ಟೋಂದು ತಲೆ ಕೆಡಿಸಿಕೊಂಡಿರ್ಲಿಲ್ಲ.. ಆದ್ರೆ, ಈ ಕಿರಿಕನ್ನೇ ಮನಸಲ್ಲಿಟ್ಟುಕೊಂಡಿದ್ದ ಮನೋಜ ಏಕಾಏಕಿ ಅಭಿಶೇಕ ಒಂಟಿಯಾಗಿ ತಗ್ಲಾಕ್ಕೊಂಡ ಅಂತ ಮತ್ತೆ ಕಿರಿಕ್ ಮಾಡಿದ್ದ..
ಇನ್ನು ಯಾವಾಗ ಇವನ ಮೇಲ ಕಿರಿಕ್ ಆಯ್ತೋ ಅಭಿಶೇಕ್ ಏಕಾಏಕಿ ಕೈನಲ್ಲಿದ್ದ ಲಾಂಗ್ ನಲ್ಲಿ ಮನೋಜ್ ಕುತ್ತಿಗೆಗೆ ಬೀಸಿದ್ದ, ರಕ್ತದ ಮಡುವಿನಲ್ಲಿ ಬಿದ್ದು ತನ್ನಡುಗರಿಗೆ ಕರೆ ಮಾಡಿದ್ದ ಮನೋಜ್,, ಐದೇ ನಿಮಿಷಕ್ಕೆ ಸ್ಥಳಕ್ಕೆ ಬಂದಿದ್ದ ಮನೋಜ್ ಹುಡುಗರು ಅಭಿಶೇಕ್ ಮೇಲೆ ಮನಸೋ ಇಚ್ಚೆ ದಾಳಿ ಮಾಡಿದ್ರು..
ಅದ್ಯಾವ ಮಟ್ಟಕ್ಕೆ ಅಂದ್ರೆ ಅಭಿಶೇಕನ ಮುಖ ಗುರುತೇ ಸಿಗದಹಾಗೆ ಸೀಳಿಹಾಕಿದ್ದಾರೆ.. ಬಳಿಕ ಅವರೇ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸೇರಿಸಿ ಎಸ್ಕೇಪ್ ಆಗಿದ್ದಾರೆ.. ಮನೋಜ್ ಮೇಲೆ ಈಗಾಗಲೇ ರೌಡಿ ಶೀಟ್ ಇದ್ದು ಈತನೂ ಹಲವು ಕೇಸ್ ಗಳಲ್ಲಿ ಬೇಕಾಗಿದ್ದಾನೆ. ಸಧ್ಯ ಪ್ರಕರಣ ಬೆನ್ನತ್ತಿರುವ ಪೊಲೀಸರು, ತಲೆಮರೆಸಿಕೊಂಡಿರುವ ಎಲ್ಲಾ ಆರೋಪಿಗಳ ಪತ್ತೆಗ ಬಲೆ ಬೀಸಿದ್ದಾರೆ.. ಜೊತೆಗೆ ಬೀಬತ್ಸ ಘಟನೆಯಿಂದ ತುಮಕೂರಿಗರು ಬೆಚ್ಚಿಬಿದ್ದಿದ್ದು ಪೊಲೀಸರು ಮತ್ತೆ ಶಾಂತಿ ನೆಲಸುವಂತೆ ಮಾಡಬೇಕಿದೆ..
ಇದನ್ನೂ ಓದಿ : ಬಿಹಾರ ಚುನಾವಣೆಯಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಮೈಥಿಲಿ ಠಾಕೂರ್ ಯಾರು?
ಇದನ್ನೂ ಓದಿ : ಗೋಲ್ಡ್‌ಲೋನ್ ತೆಗೆದುಕೊಂಡವರಿಗೆ ಕೇಂದ್ರದ ಬಿಗ್ ಶಾಕ್! ಹಣ ಮರುಪಾವತಿಸುವಾಗ ಈ ತಪ್ಪು ಮಾಡಿದ್ರೆ ಕೈತಪ್ಪಿ ಹೋಗುತ್ತೆ ಚಿನ್ನ..









