)
ಬೆಳಗಾವಿ : ಮಸೀದಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಮೌಲ್ವಿಯಿಂದಲೇ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲಿಈ ಅಮಾನವೀಯ ಘಟನೆ ನಡೆದಿದೆ. ಎರಡು ವರ್ಷಗಳ ನಂತರ ಹೊರಬಂದ ಈ ಘಟನೆ ಕುರಿತ ಮಾಹಿತಿ ಹೊರಬಂದಿದೆ.
ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಮೂಲಕ ಈ ಹೀನ ಕೃತ್ಯ ಹೊರ ಬಂದಿದೆ. ಮಗಳಿಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಪುನೀತ್ ಗೆ ಅಪ್ರಾಪ್ತ ಬಾಲಕಿ ತಂದೆ ಕರೆ ಮಾಡಿದ್ದರಂತೆ.
ಬಾಲಕಿಯ ತಂದೆಯ ಜೊತೆ ಮಾತನಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪುನೀತ್ ಕೆರೆಹಳ್ಳಿ ಪೋಸ್ಟ್ ಮಾಡಿದ್ದರು. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿದ್ದರು.
ಉತ್ತರ ವಲಯ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದರು. ಎಕ್ಸ್ ಖಾತೆಯ ವಿಡಿಯೋ ಸಾಕ್ಷಿಯನ್ನಾಗಿರಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿ ಒಂದರಲ್ಲಿ ಬಾಲಕಿಯ ಮೇಲೆ ಮೌಲ್ವಿಯೇ ದೌರ್ಜನ್ಯ ಎಸಗಿರುವ ಆರೋಪ ಇದಾಗಿದೆ. ಅತ್ಯಾಚಾರದ ವಿಡಿಯೋ ಮಸೀದಿಯೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ವಿಡಿಯೋ ಸಮೇತ ಎಕ್ಸ್ ಖಾತೆಯಲ್ಲಿ ಪುನೀತ್ ಕರೆಹಳ್ಳಿ ಪೋಸ್ಟ್ ಮಾಡಿದ್ದರು. ಅಪ್ರಾಪ್ತೆಯ ಭವಿಷ್ಯಕ್ಕಾಗಿ ಹಿಂಜರಿದು ಕುಟುಂಬಸ್ಥರು ದೂರು ನೀಡಿರಲಿಲ್ಲ. ಆದರೂ ಸಹ ತಂಡ ರಚಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬಂಧನದ ನಂತರ ಸಿಡಿಪಿಒ ಮುಖಾಂತರ ದೂರು ಪಡೆದುಕೊಂಡಿದ್ದಾರೆ. ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದ ಮೌಲ್ವಿಯನ್ನು ಬಂಧಿಸಿದ್ದಾಗಿ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.