ಹೆತ್ತ ಮಗುವನ್ನೇ ಕೊಂ*ದು ಆತ್ಮಹ*ತ್ಯೆಗೆ ಯತ್ನಿಸಿದ ತಾಯಿ.. ಭೀಮನ ಅಮಾವಾಸ್ಯೆ ದಿನ ಭೀಕರ ಘಟನೆ

ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿಯೇ ತನ್ನ ಐದು ವರ್ಷದ ಮುದ್ದಾದ ಮಗುವನ್ನು ಸಾ*ವಿನ ಮನೆ ಸೇರಿಸಿರುವ ಮನಕಲಕುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಕೆ.ಜಿ ಲೆಕ್ಕೇನಹಳ್ಳಿ ಗ್ರಾಮದಲ್ಲಿ  ನಡೆದಿದೆ.

Written by - Yashaswini V | Last Updated : Jul 24, 2025, 04:03 PM IST
  • ಹೆತ್ತ ಮಗಳನ್ನೆ ಉಸಿರುಗಟ್ಟಿಸಿ ಕೊಂ*ದ ತಾಯಿ
  • ಮಗಳನ್ನ ಕೊಂ*ದ ಬಳಿಕ ತಾನು ಆತ್ಮಹ*ತ್ಯೆಗೆ ಯತ್ನ
  • ಗಂಡನ ಕಾಟಕ್ಕೆ ಬೇಸತ್ತು 5 ವರ್ಷದ ಮಗುವನ್ನು ಕೊಂ*ದ ತಾಯಿ
ಹೆತ್ತ ಮಗುವನ್ನೇ ಕೊಂ*ದು ಆತ್ಮಹ*ತ್ಯೆಗೆ ಯತ್ನಿಸಿದ ತಾಯಿ.. ಭೀಮನ ಅಮಾವಾಸ್ಯೆ ದಿನ ಭೀಕರ ಘಟನೆ

Nelamangala News: ಪತಿಯ ದಿನನಿತ್ಯದ ಕಿರುಕುಳಕ್ಕೆ ಬೇಸತ್ತು, ತಾಯಿ ತನ್ನ 5 ವರ್ಷದ ಮಗಳನ್ನು ಕೊಂ*ದು ತಾನೂ ಆತ್ಮಹ*ತ್ಯೆಗೆ ಯತ್ನಿಸಿದ ಮನಕುಲಕುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಕೆ.ಜಿ. ಲೆಕ್ಕೇನಹಳ್ಳಿ ಗ್ರಾಮದಲ್ಲಿ ಮನಕಲಕುವ ಘೋರ  ಘಟನೆಯೊಂದು ನಡೆದಿದೆ. 

Add Zee News as a Preferred Source

ಮಹಾಲಕ್ಷ್ಮಿ ಎಂಬ ಮಹಿಳೆ, ತನ್ನ ಮಗಳು ಸಿರಿಯನ್ನ ವೇಲ್‌ನಿಂದ (ದುಪ್ಪಟ್ಟದಿಂದ) ಉಸಿರುಗಟ್ಟಿಸಿ ಕೊಂ*ದು ಹಾಕಿದ ನಂತರ, ತಾನೂ ಮನೆಯ ಸೀಟ್ ಕಂಬಿಗೆ ನೇಣು ಹಾಕಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಶಬ್ದ ಕೇಳಿ ಓಡಿ ಬಂದು ನೋಡಿದ ಪತಿ ಜಯರಾಮ್, ಪಕ್ಕದ ಮನೆಯವರ ಸಹಾಯದಿಂದ ತಾಯಿಯನ್ನು ಬಚಾವ್ ಮಾಡಿದ್ದಾನೆ. ಆದರೆ ಮಗುವನ್ನು ರಕ್ಷಿಸಲು ಆಗಲಿಲ್ಲ. 

ಇದನ್ನೂ ಓದಿ- ವಿದ್ಯಾರ್ಥಿನಿಯರಿಗೆ ಲೈಂ*ಗಿಕ ಕಿರುಕುಳ:  ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು.. ಇದು Z ಕನ್ನಡ ನ್ಯೂಸ್ ಬಿಗ್ ಇಂಪ್ಯಾಕ್ಟ್ 

ಮಹಾಲಕ್ಷ್ಮಿ ಈಗ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತಿ ಜಯರಾಮ್ ಪೊಲೀಸ್ ವಶದಲ್ಲಿದ್ದಾರೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ- ಇಸ್ಪೀಟ್ ಅಡ್ಡೆ ಮೇಲೆ ದಾಳಿ: ₹49.50 ಲಕ್ಷ ನಗದು ವಶ

ಮಹಾಲಕ್ಷ್ಮಿ ಮತ್ತು ಜಯರಾಮ್ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಜಯರಾಮ್ ಬಿಬಿಎಂಪಿಯಲ್ಲಿ ದಿನಗೂಲಿ ನೌಕರನಾಗಿದ್ದು, ಮಹಾಲಕ್ಷ್ಮಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದರು. ಇತ್ತೀಚೆಗೆ ಇಬ್ಬರೂ ಕೆಲಸ ಬಿಟ್ಟು ಮನೆಯಲ್ಲಿದ್ರು. ಪತಿ ಜಯರಾಮ್ ಅತಿಯಾದ ಮದ್ಯಪಾನ ಚಟಕ್ಕೆ ಬಿದ್ದಿದ್ದು ಇದರ ಪತ್ನಿಗೆ ಶಂಕೆ ವ್ಯಕ್ತಪಡಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಕುರಿತಾಗಿ ಮಹಾಲಕ್ಷ್ಮಿ ಈ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಅದೇ ಕುಟುಂಬದ ಗಲಾಟೆಗೆ ಭೀಮನ ಅಮಾವಾಸ್ಯೆಯಂದು ಇಂತಹ ಭೀಕರ ಘಟನೆ ನಡೆದಿರುವುದು ಎಲ್ಲರಿಗೂ ಬೆಚ್ಚಿ ಬೀಳಿಸುವಂತಹ ಸಂಗತಿಯಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸರು ಈ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News