Mother Love Story: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಂಡ್ರಾವ ಗ್ರಾಮದಲ್ಲಿ ಮದುವೆಯಾಗಿ ಐದು ಮಕ್ಕಳನ್ನು ಹಡೆದಿದ್ದ ಮಹಾತಾಯಿಯೊಬ್ಬಳು ಗಂಡನಿಂದ ವಿಚ್ಛೇದನ ಪಡೆದು ಪ್ರೀತಿ ಹರಸಿ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ದುರದೃಷ್ಟವೆಂದರೆ, ತಾಯಿ ಲವ್ ಕಹಾನಿಯಲ್ಲಿ ಪ್ರಾಣತೆತ್ತಿದ್ದು ಆಕೆಯ ಕೊನೆಯ ಮಗು, ಐದು ವರ್ಷದ ಪುಟ್ಟ ಕಂದಮ್ಮ. ಏನಿದು ಕಹಾನಿ ಮುಂದೆ ಓದಿ...
ಐದು ಮಕ್ಕಳ ತಾಯಿಯ ಲವ್ ಕಹಾನಿ..!
ಮದುವೆಯಾಗಿ ಐದು ಮಕ್ಕಳಾದ ಬಳಿಕ ಪ್ರೀತಿಯ ಅಂಕುಶದಲ್ಲಿದ್ದ ಲಕ್ಷ್ಮಿ ಎಂಬಾಕೆ ತನ್ನ ಪತಿ ಅಶೋಕ್ ಬಾಗಡಿಗೆ ಡಿವೋರ್ಸ್ ನೀಡಿ ಪ್ರಿಯಕರ ಪರಶುರಾಮನನ್ನು ನಂಬಿ ಹೋಗಿದ್ದಳು. ಹೋಗುವಾಗ 4 ಮಕ್ಕಳನ್ನು ಮೊದಲ ಪತಿಯೊಂದಿಗೆ ಬಿಟ್ಟು ಕೊನೆ ಮಗುವನ್ನು (5ವರ್ಷದ ಬಾಲಕ ಮಹೇಶ) ತನ್ನೊಂದಿಗೆ ಕರೆದೊಯ್ದಿದ್ದಳು. ಆದರೆ, ಮುಂದೆ ಆಗಿದ್ದೆ ಬೇರೆ...
ಇದನ್ನೂ ಓದಿ- ಪತ್ನಿ ಕಿರುಕುಳಕ್ಕೆ ಪತಿ ಆತ್ಮಹ*ತ್ಯೆ: ಶವ ಪೆಟ್ಟಿಗೆ ಮೇಲೆ ಹೀಗೆಯೇ ಬರೆಸಿ ಎಂದು ಡೆತ್ ನೋಟ್ನಲ್ಲಿ ಮನವಿ...
ತಾಯಿ ಲವ್ ಕಹಾನಿಯಲ್ಲಿ ಪುಟ್ಟ ಕಂದ ಬ*ಲಿ...!
ಮೊದಲ ಪತಿ ಅಶೋಕ ಬಾಗಡಿಯಿಂದ ವಿಚ್ಛೇದನ ಪಡೆದು ಪರುಶರಾಮ ಶ್ರೀಕಾಂತ ಜಾಧವನನ್ನು ಎರಡನೇ ಮದುವೆಯಾಗಿದ್ದ ಲಕ್ಷ್ಮಿ ಆಟನೊಂದಿಗೆ ರಾಯಬಾಗ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ಬಾಡಿಬೇ ಮನೆಯಲ್ಲಿದ್ದರು. ದಿನಾಂಕ 04 ಮೇ 2019ರಂದು ಲಕ್ಷ್ಮಿ ಮನೆಯಲ್ಲಿಲ್ಲದ ಸಮಯದಲ್ಲಿ ಆಕೆಯ ಎರಡನೇ ಪತಿ ಪರುಶರಾಮ ಆಕೆಯ ಮೊದಲ ಪತಿಗೆ ಜನಿಸಿದ್ದ ಮಹೇಶ ದೊಡ್ಡವನಾದ ಮೇಲೆ ಆಸ್ತಿಯಲ್ಲಿ ಪಾಲು ನೀಡಬೇಕಾಗುತ್ತದೆ. ಅಲ್ಲದೆ, ತನ್ನ ಸಾಂಸಾರಿಕ ಬದುಕಿನಲ್ಲೂ ಈ ಮಗು ಅಡ್ಡಿಯಾಗಿರುತ್ತದೆ ಎಂದು ಭಾವಿಸಿ ಲಟ್ಟಣಿಗೆಯಿಂದ ಬಡಿದು ಕೊ*ಲೆ ಮಾಡಿದ್ದಾನೆ. ಆ ಬಳಿಕ ಮನೆಗೆ ಬಂದ ಲಕ್ಷ್ಮಿಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನಗೂ ಇದೇ ಗತಿ ಎಂದು ಧಮ್ಕಿ ಹಾಕಿದ್ದ.
ಇದನ್ನೂ ಓದಿ- ಇನ್‌ಸ್ಟಾಗ್ರಾಮ್ ಪ್ರೀತಿಗೆ ಮನಸೋತ 24ರ ಯುವತಿ!; ಇತ್ತ ಪ್ರಿಯಕರನೂ ಇಲ್ಲ ಅತ್ತ ಗಂಡನೂ ಇಲ್ಲದೇ ಏನಾಯ್ತು?
ಮಗು ಮೃತಪಟ್ಟಿರುವ ವಿಷಯ ತಿಳಿದು ಆಘಾತಗೊಂಡ ಮಗುವಿನ ತಂದೆ ಅಶೋಕ್ ಬಾಗಡೆ ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಆಗಿನ ರಾಯಬಾಗ ಸಿ.ಪಿ.ಐ ಎನ್. ಮಹೇಶ್ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ತಾರಕೇಶ್ವರ ಗೌಡಾ ಪಾಟೀಲ ಅವರು, ಕೊಲೆ ಮಾಡಿದ ಆರೋಪಿ ಪರಶುರಾಮ ಜಾಧವಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.
ಏನೇ ಆಗಲಿ ತಾಯಿ ಪ್ರೇಮ ಕಹಾನಿಯಲ್ಲಿ ಮಗು ಪ್ರಾಣತೆತ್ತಿದ್ದು ಮಾತ್ರ ವಿಪರ್ಯಾಸ...
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









