ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಒಂದು ದಾರುಣ ಕೊಲೆ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 35 ವರ್ಷದ ವಿಜಯ್ ಕುಮಾರ್ ಎಂಬಾತನನ್ನು ಆರೋಪಿ ಧನಂಜಯ ಅಲಿಯಾಸ್ ಜಯರಾಮ ಮತ್ತು ಆತನ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿದ್ದಾರೆ.

ಕೈ ಕೈ ಹಿಡಿದು ಸಪ್ತಪದಿ ತುಳಿದಿದ್ರು.. ಅಗ್ನಿಸಾಕ್ಷಿಯಾಗಿ ಕೊನೆವರೆಗೂ ಜೊತೆಯಾಗಿ ಇರುತ್ತೇನೆ ಎಂದು ಪ್ರಮಾಣ ಮಾಡಿದ್ರು. ಆದ್ರೀಗ ಪತ್ನಿಯೇ ಪತಿಗೆ ಮಾರಕವಾಗಿದ್ದಾಳೆ. ಹೌದು ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಹಿಳೆ ಪತಿಯನ್ನ, ಪ್ರಿಯಕರ ಹಾಗೂ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಂದಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಈ ಬೀಕರ ಹತ್ಯೆ ನಡೆದಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿ ನಿವಾಸಿ ವಿಜಯ ಕುಮಾರ್ ಕೊಲೆಯಾಗಿರುವ ದುರ್ದೈವಿ. ಧನಂಜಯ ಅಲಿಯಾಸ್ ಜಯರಾಮ ಆ್ಯಂಡ್ ಗ್ಯಾಂಗ್ ಕೊಲೆಗೈದ ಅರೋಪಿಗಳು. ಕಳೆದ 10 ವರ್ಷಗಳ ಹಿಂದೆ ಕೊಲೆಯಾದ ವಿಜಯ ಕುಮಾರ್ ಜೊತೆ ಆಶಾಳ ಮದುವೆಯಾಗಿತ್ತು. ದಿನಕಳೆದಂತೆ ಪತ್ನಿ ಆಶಾ ಜೊತೆ ಆರೋಪಿ ಧನಂಜಯ್ ಸಲುಗೆ ಬೆಳೆಸಿಕೊಂಡು ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದಿದ್ದ ಆಶಾ ಪತಿ ವಿಜಯ್ ಪಿತ್ತ ನೆತ್ತಿಗೇರಿತ್ತು. ಮನೆಯಲ್ಲಿ ಗಲಾಟೆ ಮಾಡಿ ರಂಪಾಟ ಮಾಡಿದ್ದ. ನೀವೆ ಹೇಳಿ ತಾಳಿ ಕಟ್ಟಿದ್ದ ಹೆಂಡತಿ ಬೇರೊಬ್ಬನ ನೋಟ್ ಸಲುಗೆ ಬೆಳೆಸಿಕೊಂಡಿದ್ದನ್ನ ನೋಡಿ ಯಾವ ಪತಿ ತಾನೇ ಸುಮ್ಮನಿರ್ತಾನೆ.. ಇಲ್ಲೂ ಕೂಡ ನಡೆದಿದ್ದು ಇದೆ, ಕೆರೆಲ್ಲಿ ಕೆಂದವಾಗಿದ್ದ ಪತಿ ವಿಜಯ್ ಗಲಾಟೆ ಪೊಲೋಸ್ ಠಾಣೆವರೆಗೂ ಹೋಗಿತ್ತು. ಪೊಲೀಸ್ ಠಾಣೆಯಲ್ಲಿ ಸಂಧಾನ ಕೂಡ ಆಗಿತ್ತು.
ಇನ್ನೂ ಸ್ನೇಹಿತರಾಗಿದ್ದ ಮೃತ ವಿಜಯ ಕುಮಾರ್ ಹಾಗೂ ಆರೋಪಿ ಧನಂಜಯ, ಸಣ್ಣಪುಟ್ಟ ಪೈನಾಸ್ ಮಾಡಿಕೊಂಡಿದ್ರು. ಜೊತೆಗೆ ಆಟೋ ಚಲಕನಾಗಿದ್ರು. ಈ ನಡುವೆ ಸ್ನೇಹದಿಂದ ಸಲುಗೆ, ಸಲುಗೆ ಇಂದ ಸಂಬಂಧ ಬೆಳೆದಿದೆ. ಪತಿ ವಿಜಯ್, ಧನಂಜಯನನ್ನ ಕರೆದು ವಾರ್ನಿಂಗ್ ಕೊಟ್ಟಿದ್ದ. ಹೀಗಿರುವಾಗ ಸ್ನೇಹಿತ ವಿಜಯ್ ಪತ್ನಿ ಆಶಾಗೆ ಆರೋಪಿ ಧನಂಜಯ ತನ್ನೊಂದಿಗೆ ಸಂಪರ್ಕ ಬಿಟ್ರೆ ಇಡಿ ಕುಟುಂಬವನ್ನ ಸರ್ವನಾಶ ಮಾಡೋದಾಗಿ ಎಚ್ಚರಿಕೆ ನೀಡಿದ್ನಂತೆ. ಪತ್ನಿ ಆಶಾ ಮತ್ತು ಸ್ನೇಹಿತ ಧನಂಜಯನ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದ ವಿಜಯ್ ಧನಂಜಯನಿಗೆ ಕೊಲ್ಲುವುದಾಗಿ ಯಾರ ಬಳಿಯೋ ಹೇಳಿಕೊಂಡಿದ್ದಾನೆದ್ನಂತೆ. ಈ ವಿಷಯ ತಿಳಿದಿದ್ದ ಧನಂಜಯ ಅಂಡ್ ಗ್ಯಾಂಗ್ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ವಿಜಯ್ ಮನೆಯಿಂದ ಊಟ ಮುಗಿಸಿ ಈಚೆ ಬರುತ್ತಲೇ ಹೊಂಚು ಹಾಕಿ ಅಟ್ಯಾಕ್ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದಾರೆ.
ಸದ್ಯ ಕೊಲೆ ಪ್ರಕರಣ ಸಂಬಂಧ ಕೊಲೆಯಾದ ವಿಜಯ್ ಪತ್ನಿ ಆಶಾಳನ್ನ ವಶಕ್ಕೆ ಪಡೆದಿರುವ ಮಾದನಾಯಕನಹಳ್ಳಿ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ. ವಿಶೇಷ ತಂಡ ರಚಿಸಿ ಕೊಲೆ ಅರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.