Prajwal Revanna convicted in rape case: ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಬೆಂಗಳೂರು: ಕೆ.ಆರ್. ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾಗಿದೆ. ನ್ಯಾಯಾಲಯವು ಸಾಕ್ಷ್ಯ ಮತ್ತು ಪುರಾವೆಗಳನ್ನು ಪರಿಗಣಿಸಿ ಈ ತೀರ್ಪು ನೀಡಿದೆ.
ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಕೇಸ್ ನಲ್ಲಿ ಮಾಜಿ ಸಂಸದದ ಪ್ರಜ್ವಲ್ ರೇವಣ್ಣ ಅಪರಾಧಿ ಅನ್ನೋದು ಸಾಕ್ಷಿ ಆಧಾರಗಳಿಂದ ಧೃಡಪಟ್ಟಿದೆ. ಇಷ್ಟುದಿನ ವಿಚಾರಣಾಧಿನ ಕೈಧಿಯಾಗಿದ್ದ. ಇಂದಿನಿಂದ ಸಜಾ ಕೈದಿಯಾಗಿ ಜೈಲಿನಲ್ಲಿ ಇರಬೇಕಾಗುತ್ತೆ.ಇತ್ತ ತೀರ್ಪು ಹೊರಬೀಳುತ್ತಿಂದೆ ಕಣ್ಣೀರು ಹಾಕುತ್ತ, ಕೋರ್ಟ್ ಆವರಣದ ಹೊರಗಡೆ ತಲೆಯ ಮೇಲೆ ಕೈ ಹೊತ್ತುಕೂತಿದ್ದರು.
ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ನೊಂದಸಂತ್ರಸ್ತ ಮಹಿಳೆ ದೂರು ನೀಡಿದ್ದರು.ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸರ್ಕಾರ ಎಸ್ ಐಟಿ ರಚನೆ .ಮಾಡಿ ವಿಶೇಷ ಟೀಂ ಕೂಡ ರಚನೆ ಮಾಡಿತ್ತು. ತನಿಖೆ ಕೈಗೆತ್ತಿಕೊಂಡ ತಂಡ ಪ್ರಕರಣದಲ್ಲಿ ಸುಮಾರು 2 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ರೆ 123 ಸಾಕ್ಷ್ಯಗಳನ್ನ ಸಂಗ್ರಹಿಸಿ, ಸಿಐಡಿ ಎಸ್ಐಟಿ ನ್ಯಾಯಾಲಯಕ್ಕೆ 23 ಸಾಕ್ಷಿಗಳನ್ನು ಪ್ರೊಡ್ಯೂಸ್ ಮಾಡಿದ್ರು.2024 ಡಿಸೆಂಬರ್ 31 ರಿಂದ ಟ್ರಯಲ್ ಆರಂಭಿಸಿದ್ದ ಕೋರ್ಟ್.ಏಳು ತಿಂಗಳ ನಂತರ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿದೆ.
ಇನ್ನೂ ಪ್ರಜ್ವಲ್ ರೇವಣ್ಣ ವಿರುದ್ಧ 376(2)(k), 376(2)(n), 354(A), 354(B), 354(c), 506, 201 ಹಾಗೂ ಐಟಿ ಆಕ್ಟ್ 66 ಅಡಿಯಲ್ಲಿ ದಾಖಲಾಗಿದ್ದ ಕೇಸ್ ದಾಖಾಲಗಿತ್ತು. ಘಟನೆ ಬಗ್ಗೆ ತನಿಖೆ ನಡೆಸಿದ ಟೀಂ ವಿಡಿಯೋ ಕ್ಲಿಪ್ ಗಳ ಬಗ್ಗೆ ಎಫ್ಎಸ್ಎಲ್ ವರದಿಗಳ ಉಲ್ಲೇಖ. ಮಾಡಿತ್ತು, ಕೃತ್ಯ ನಡೆದ ಸ್ಥಳ ಮಹಜರು ವರದಿಗಳ ಪರಿಶೀಲನೆ.ನಡೆಸಿದ್ರು.ಕಳೆದ ಎರಡು ದಿನಗಳ ಹಿಂದೆ ಇಬ್ಬರ ಪರ ವಕೀಲರ ಸ್ಪಷ್ಟೀಕರಣ ಕೇಳಿದ್ದ ನ್ಯಾಯಾಲಯ ಇಂದಿಗೆ ತೀರ್ಪು ಪ್ರಕಟ ಮಾಡೋದಾಗಿ ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನ 1.33 ಕ್ಕೆ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಘೊಷಿಸಿ ಶಿಕ್ಷೆಯ ಪ್ರಮಾಣ ವನ್ನು ನಾಳೆ ಪ್ರಕಟ ಮಾಡೋದಾಗಿ ತಿಳಿಸಿದ್ರು.
ಇನ್ನೂ ತೀರ್ಪು ಪ್ರಕಟವಾದ ನಂತರ ಎರಡು ಕೈಗಳಿಂದ ಕಣ್ಣೀರು ಹೊರೆಸಿಕೊಳ್ಳುತ್ತ ಹೊರಬಂದು ಅಲ್ಲಿಯೂ ಕಣೀರು ಹಾಕುತ್ತ ಕುಳಿತ್ತಿದ್ದ ಇನ್ನು ಈ ದೃಶ್ಯ ನೋಡಲು ಅಲ್ಲಿದ್ದ ಮಹಿಳೆಯ ಇಣುಕಿ ನೋಡುತ್ತಿದ್ರು. ಸದ್ಯ ನಾಳೆಯಿಂದ ಸಜಾಖೈದಿ ಯಾಗಿ ಹೊಸ ಯೂನಿಫಾರ್ಮ್ ಹಾಕಿಕೊಂಡು ಕೆಲಸ ಮಾಡಬೇಕಾಗುತ್ತೆ ಇದಕ್ಕೆ ದಿನಗೂಲಿಯನ್ನು ನೀಡಲಾಗುತ್ತದೆ.ಇಷ್ಟುದಿನ ಮನೆಯೂಟ ತರಿಸಿಕೊಂಡು ಆರಾಮವಾಗಿ ಇದ್ದವನು ನಾಳೆಯಿಂದ ಜೈಲೂಟವೇ ಗಟ್ಟಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ..