OP Soni Arrest: ಪಂಜಾಬ್ ವಿಜಿಲೆನ್ಸ್ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಒಪಿ ಸೋನಿ ಅವರನ್ನು ಭಾನುವಾರ ಬಂಧಿಸಿದೆ. ಒಪಿ ಸೋನಿ ಕಾಂಗ್ರೆಸ್‌ನ ಹಿರಿಯ ನಾಯಕ. ಅವರನ್ನು ಸೋಮವಾರ ಅಮೃತಸರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆದೇಶದ ಮೇರೆಗೆ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಅಭಿಯಾನದ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಪಂಜಾಬ್‌ನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪಂಜಾಬ್ ವಿಜಿಲೆನ್ಸ್ ಬ್ಯೂರೋ ಮಾಜಿ ಉಪಮುಖ್ಯಮಂತ್ರಿ ಒಪಿ ಸೋನಿ ಅವರನ್ನು 2016 ರಿಂದ 2022 ರ ಅವಧಿಯಲ್ಲಿ ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಗಳಿಸಿದ ಆರೋಪದ ಮೇಲೆ ಬಂಧಿಸಿದೆ ಎಂದು ತಿಳಿಸಿದೆ.


ಅಮೃತಸರದಲ್ಲಿ ಎಫ್‌ಐಆರ್ ದಾಖಲು
ಈ ಕುರಿತು ಮಾಹಿತಿಯನ್ನು ನೀಡಿದ ವಿಜಿಲೆನ್ಸ್ ಬ್ಯೂರೋದ ಅಧಿಕೃತ ವಕ್ತಾರರು, ಒಪಿ ಸೋನಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (1) (ಬಿ) ಮತ್ತು 13 (2) ರ ಅಡಿಯಲ್ಲಿ ಅಮೃತಸರ ಪೊಲೀಸ್ ಠಾಣೆ ವಿಜಿಲೆನ್ಸ್ ಬ್ಯೂರೋದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ತನಿಖೆಯ ಆದೇಶದ ನಂತರ ಅಕ್ಟೋಬರ್ 10, 2022 ರಂದು ಎಫ್ಐಆರ್ ದಾಖಲಿಸಲಾಗಿದೆ.


ಇದನ್ನೂ ಓದಿ-ರಾತ್ರೋರಾತ್ರಿ 6000 ಕೆ.ಜಿ ತೂಕದ ಸೇತುವೆಯನ್ನೇ ಕಣ್ಮರೆ ಮಾಡಿದ ಕಳ್ಳರು, ಕೇಳಿ ಅಧಿಕಾರಿಗಳೂ ದಂಗಾಗಿದ್ದಾರೆ!


ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ವಿರುದ್ಧದ ಆರೋಪಗಳೇನು?
ಏಪ್ರಿಲ್ 1, 2016 ರಿಂದ ಮಾರ್ಚ್ 31, 2022 ರ ಅವಧಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಆದಾಯ 4.52 ಕೋಟಿ ರೂಪಾಯಿಗಳಾಗಿದ್ದರೆ, ಅವರ ಖರ್ಚು 12.48 ಕೋಟಿ ರೂಪಾಯಿಗಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಅಧಿಕಾರಿಯ ಪ್ರಕಾರ, ಈ ವೆಚ್ಚಗಳು ಅವರ ತಿಳಿದಿರುವ ಆದಾಯದ ಮೂಲಗಳಿಗಿಂತ ಸುಮಾರು 176.08% ಹೆಚ್ಚಾಗಿದೆ. ಆರೋಪಿ ಒಪಿ ಸೋನಿ ಈ ಅವಧಿಯಲ್ಲಿ ತನ್ನ ಪತ್ನಿ ಮತ್ತು ಮಗನ ಹೆಸರಿನಲ್ಲಿ ಆಸ್ತಿ ಸಂಪಾದಿಸಿದ್ದಋ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.


ಇದನ್ನೂ ಓದಿ-ಇದೆ ನೋಡಿ ಕಿಸ್ ನಲ್ಲಿ ನಿರ್ಮಾಣಗೊಂಡ ವಿಶ್ವ ದಾಖಲೆ, ಬರೋಬ್ಬರಿ ಇಷ್ಟು ಗಂಟೆ ಕಿಸ್ಸ್ ಮಾಡಿದ ದಂಪತಿ ಜೋಡಿ!


ಚರಂಜಿತ್ ಸಿಂಗ್ ಚನ್ನಿ ಅವರ ಸರ್ಕಾರದ ಅವಧಿಯಲ್ಲಿ ಓಂ ಪ್ರಕಾಶ್ ಸೋನಿ ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಓಂ ಪ್ರಕಾಶ್ ಸೋನಿ ಅವರು ಅಮೃತಸರದಿಂದ ಐದು ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಮತ್ತು ಕ್ಯಾಪ್ಟನ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.