ಕುಡಿಯಲು ದುಡ್ಡು ಕೊಡ್ಲಿಲ್ಲ ಅಂತಾ ಮನೆಗೆ ಬೆಂಕಿ ಇಟ್ಟ ನಿವೃತ್ತ ಮೇಜರ್; ಕುಡುಕನ ಕಿತಾಪತಿಗೆ ಬೆಚ್ಚಿಬಿದ್ದ ಜನ!!

Mysuru Crime News: ಕುಡಿಯಲು ಹಣ ಕೊಡಲಿಲ್ಲ ಎಂದು ನಿವೃತ್ತ ಮೇಜರ್ ಗುರು ಎಂಬಾತ ತನ್ನ ಮನೆ ಕೋಣೆಯಲ್ಲಿದ್ದ ಹಾಸಿಗೆಗೆ ಬೆಂಕಿ ಹಚ್ಚಿದ ಘಟನೆ ಮೈಸೂರಿನ ಮಧುವನ ಬಡವಾಣೆಯಲ್ಲಿ ನಡೆದಿದೆ

Written by - Puttaraj K Alur | Last Updated : Mar 1, 2025, 06:44 PM IST
  • ಕುಡಿಯಲು ದುಡ್ಡು ಕೊಡಲಿಲ್ಲ ಅಂತಾ ತನ್ನ ಮನೆಗೇ ಬೆಂಕಿ ಹಾಕಿದ ಭೂಪ!
  • ಮೈಸೂರಿನ ಮಧುವನ ಬಡವಾಣೆಯಲ್ಲಿ ನಡೆದಿರುವ ಘಟನೆ
  • ಕುಡುಕನ ಕಿತಾಪತಿಗೆ ಬೆಚ್ಚಿಬಿದ್ದ ಅಕ್ಕಪಕ್ಕದ ನಿವಾಸಿಗಳು
ಕುಡಿಯಲು ದುಡ್ಡು ಕೊಡ್ಲಿಲ್ಲ ಅಂತಾ ಮನೆಗೆ ಬೆಂಕಿ ಇಟ್ಟ ನಿವೃತ್ತ ಮೇಜರ್; ಕುಡುಕನ ಕಿತಾಪತಿಗೆ ಬೆಚ್ಚಿಬಿದ್ದ ಜನ!!
ಮೈಸೂರಿನಲ್ಲಿ ʼಕುಡುಕʼನ ಕಿತಾಪತಿ!!

Mysuru: ಕುಡಿಯಲು ದುಡ್ಡು ಕೊಡಲಿಲ್ಲ ಅಂತಾ ನಿವೃತ್ತ ಮೇಜರ್‌ ಒಬ್ಬ ಮನೆಗೆ ಬೆಂಕಿ ಇಟ್ಟಿರುವ ಆಘಾತಕಾರಿ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಕುಡುಕನ ಈ ಕಿತಾಪತಿಗೆ ಅಕ್ಕಪಕ್ಕದ ಜನರೇ ಬೆಚ್ಚಿಬಿದ್ದಿದ್ದಾರೆ. 

Add Zee News as a Preferred Source

ನಿವೃತ್ತ ಮೇಜರ್ ಗುರು ಎಂಬಾತನೇ ಬೆಂಕಿ ಹಚ್ಚಿದವ. ಈತ ತನಗೆ ಕುಡಿಯಲು ಹಣ ಕೊಡಲಿಲ್ಲ ಅಂತಾ ಮನೆಯ ಕೋಣೆಯಲ್ಲಿದ್ದ ಹಾಸಿಗೆಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆ ಮೈಸೂರಿನ ಮಧುವನ ಬಡವಾಣೆಯಲ್ಲಿ ನಡೆದಿದೆ. 

ಇದನ್ನೂ ಓದಿ: ಅಧಿಕೃತ ಸುತ್ತೋಲೆ ಹೊರಡಿಸಿದ ಸಿದ್ದರಾಮಯ್ಯ ಸರ್ಕಾರ

ಮಾಜಿ CRPF ನಿವೃತ್ತ ಯೋಧ ಎನ್.ಗುರು ಕುಡಿಯಲು ಹಣ ನೀಡುವಂತೆ ಹೆಂಡತಿಗೆ ಕೇಳಿದ್ದ. ಆದರೆ ಈತನ ಮಾತಿಗೆ ಸೊಪ್ಪು ಹಾಕದ ಹೆಂಡತಿ ಆತನನ್ನ ಮನೆಯಲ್ಲಿಯೇ ಕೂಡಿಹಾಕಿದ್ದರು. ನನಗೆ ಕುಡಿಯಲು ಹಣ ಕೊಡು ಅಂದ್ರೆ ಮನೆಯಲ್ಲಿ ಕೂಡಿ ಹಾಕ್ತೀಯಾ ಅಂತಾ ಮನೆಯ ರೂಂನಲ್ಲಿದ್ದ ಹಾಸಿಗೆಗೆ ಬೆಂಕಿ ಹಚ್ಚಿದ್ದಾನೆ.

ಮನೆಯ ತುಂಬಾ ಹೊಗೆ ಆವರಿಸಿದ ಹಿನ್ನೆಲೆ ಅಕ್ಕಪಕ್ಕದ ನಿವಾಸಿಗಳು ಗಾಬರಿಗೊಂಡು ಹೊರಗಡೆ ಓಡಿ ಬಂದಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ: ಕೆಎಎಸ್ ಅಧಿಕಾರಿ ಬಿ.ಕೆ,ಶ್ರೀನಿವಾಸ್ ಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ, ಮಹಿಳಾ ಸಿಬ್ಬಂದಿ ದೂರು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News