ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಮೇಲೆ ರೌಡಿ ಶೀಟ್ ಓಪನ್

ಕೊಲೆ ಯತ್ನ ಸುಲಿಗೆ ಕಳ್ಳತನ ಜೀವ ಬೆದರಿಕೆ ಸೇರಿದಂತೆ ವಿವಿಧ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಮೇಲೆ ಬೆಂಗಳೂರು ಹೊರವಲಯದ ಆನೇಕಲ್ ಉಪ ವಿಭಾಗದ ಜಿಗಣಿ ಪೊಲೀಸರು ರೌಡಿ ಶೀಟ್ ತೆರೆದಿದ್ದಾರೆ.

Written by - Zee Kannada News Desk | Last Updated : Mar 26, 2023, 12:06 AM IST
  • ಮಂಜೇಶ್ ಕುಮಾರ್ ಅಲಿಯಾಸ್ ಗಾಯಲ್ ರೌಡಿ ಶೀಟರ್ ಪಟ್ಟಿಗೆ ಸೇರ್ಪಡೆಯಾಗಿರುವ ಖದೀಮನಾಗಿದ್ದು,
  • ಕರೆ ಮಾಡಿ ಜೀವ ಬೆದರಿಕೆ ಹಾಕಿರುವಂತಹ ಪ್ರಕರಣ ಸಹ ಇವನ ಮೇಲೆ ದಾಖಲಾಗಿದೆ
  • ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಜಿಗಣಿ ಪೊಲೀಸರು ಇವನನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಾರೆ
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಮೇಲೆ ರೌಡಿ ಶೀಟ್ ಓಪನ್

ಆನೇಕಲ್: ಕೊಲೆ ಯತ್ನ ಸುಲಿಗೆ ಕಳ್ಳತನ ಜೀವ ಬೆದರಿಕೆ ಸೇರಿದಂತೆ ವಿವಿಧ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಮೇಲೆ ಬೆಂಗಳೂರು ಹೊರವಲಯದ ಆನೇಕಲ್ ಉಪ ವಿಭಾಗದ ಜಿಗಣಿ ಪೊಲೀಸರು ರೌಡಿ ಶೀಟ್ ತೆರೆದಿದ್ದಾರೆ.

ಇದನ್ನೂ ಓದಿ: 40 ದಿನದ‌ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದ ಬುರ್ಖಾ ಲೇಡಿ ಅಂದರ್‌..!

ಮಂಜೇಶ್ ಕುಮಾರ್ ಅಲಿಯಾಸ್ ಗಾಯಲ್ ರೌಡಿ ಶೀಟರ್ ಪಟ್ಟಿಗೆ ಸೇರ್ಪಡೆಯಾಗಿರುವ ಖದೀಮನಾಗಿದ್ದು, ಈತ ಹಲವು ಬಾರಿ ಕಾರುಗಳ ಗಾಜನ್ನು ಹೊಡೆದು ದಾಂದಲೆ ಸೃಷ್ಟಿ ಮಾಡಿದ್ದ ಜೊತೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವಂತಹ ಪ್ರಕರಣ ಸಹ ಇವನ ಮೇಲೆ ದಾಖಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ

ಜೊತೆಗೆ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುತ್ತಿರುವಾಗ ಚಾಕು ತೊರಿಸಿ ರಾಬರಿ ಸಹ ಮಾಡಿದ್ದ, ಹೀಗೆ ಅನೇಕ ರೀತಿಯ ಪ್ರಕರಣಗಳನ್ನು ಜಿಗಣಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಜಿಗಣಿ ಪೊಲೀಸರು ಇವನನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News