ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟಿಯ ಸ್ನೇಹಿತ ಹಾಗೂ ಡ್ರಗ್ಸ್ ಕೇಸ್ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ‌. ಯಶವಂತಪುರ ಆರ್‌ಟಿಓನ ಎಸ್‌ಡಿಎ ರವಿಶಂಕರ್ ಬಂಧಿತ ಆರೋಪಿ. ರವಿಶಂಕರ್ ಸ್ಯಾಂಡಲ್‌ವುಡ್ ನಟಿಯೊಬ್ಬರ ಸ್ನೇಹಿತ. ಅಲ್ಲದೇ, ಈ ಹಿಂದೆ ಡ್ರಗ್ಸ್ ಕೇಸ್‌ನಲ್ಲಿ ಜೈಲು ಕಂಬಿ ಎಣಿಸಿದ್ದ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಂದು ನೀಟ್‌ ಪರೀಕ್ಷೆ: ಕೇಂದ್ರಕ್ಕೆ ತೆರಳುವ ಮುನ್ನ ಈ ನಿಯಮ ಪಾಲಿಸಿ


ಕಾರಿಗೆ ಲೈಫ್ ಟೈಮ್ ಟ್ಯಾಕ್ಸ್ ಕಟ್ಟುತ್ತೇನೆ ಎಂದು ಹೇಳಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿದ್ದಾನೆ. ಈ ಹಿನ್ನೆಲೆ ಯೋಗೇಶ್ ಎಂಬುವವರು ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದರು. ಹೀಗಾಗಿ ಪೊಲೀಸರು ರವಿಶಂಕರ್ ಹಾಗೂ ಅಜಯ್ ನನ್ನು ಬಂಧಿಸಿದ್ದಾರೆ. ಅಜಯ್ ಎಂಬ ಕಾರು ಡೀಲರ್ ನಿಂದ ಆಶಾ ಎಂಬವವರು ಕಾರು ಖರೀದಿಸಿದ್ದರು. 


ಲೈಫ್ ಟೈಮ್ ತೆರಿಗೆ ಕಟ್ಟಲು ಅಜಯ್‌ಗೆ ಆಶಾ-ಯೋಗೇಶ್ ದಂಪತಿ ಹಣ‌ ಕೊಟ್ಟಿದ್ರು. ಆದರೆ ಹಣ ಪಡೆದುಕೊಂಡ ಆರೋಪಿಗಳು ಆರ್‌ಟಿಓಗೆ ಟ್ಯಾಕ್ಸ್ ಕಟ್ಟದೇ ವಂಚಿಸಿದ್ದ. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.


ಇದನ್ನೂ ಓದಿ: ‘ನಾ ಖಾನೆದುಂಗಾ’ ಎನ್ನುತ್ತಿದ್ದ ಪ್ರಧಾನಿ ಮೋದಿ ‘ನಾ ಬಾತ್ ಕರೂಂಗಾ’ ಎಂಬಂತೆ ಮೌನ ವಹಿಸಿದ್ದಾರೆ'


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.