ನಕಲಿ ದಾಖಲೆ ಸೃಷ್ಟಿಸಿ ಸಬ್ ರಿಜಿಸ್ಟ್ರಾರ್ ಕಳ್ಳಾಟ.. 75 ಎಕರೆ ಜಮೀನು ಬೇರೆಯವರ ಹೆಸರಿಗೆ ರಿಜಿಸ್ಟರ್!!

ಆಕೆ ಸರ್ಕಾರಿ ಅಧಿಕಾರಿ. ಆದರೆ ತನಗಿರುವ ಹುದ್ದೆಯ ಮಹತ್ವ ಮರೆತು ಮಣ್ಣು ತಿನ್ನುವ ಕೆಲಸ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಹಾಗಾದ್ರೆ ಯಾಕೆ ಮಾಡಿದ ತಪ್ಪೇನೂ ಎಂಬುದನ್ನು ಹೇಳ್ತಿವಿ ನೋಡಿ.

Written by - Chetana Devarmani | Last Updated : Nov 12, 2025, 11:14 PM IST
  • ನಕಲಿ ದಾಖಲೆ ಸೃಷ್ಟಿಸಿ ಸಬ್ ರಿಜಿಸ್ಟ್ರಾರ್ ಕಳ್ಳಾಟ
  • 75 ಎಕರೆ ಜಮೀನು ಬೇರೆಯವರ ಹೆಸರಿಗೆ ರಿಜಿಸ್ಟರ್ ಮಾಡಿ ವಂಚನೆ
ನಕಲಿ ದಾಖಲೆ ಸೃಷ್ಟಿಸಿ ಸಬ್ ರಿಜಿಸ್ಟ್ರಾರ್ ಕಳ್ಳಾಟ.. 75 ಎಕರೆ ಜಮೀನು ಬೇರೆಯವರ ಹೆಸರಿಗೆ ರಿಜಿಸ್ಟರ್!!

ಬೆಂಗಳೂರು : ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚವತಾರದ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಸರ್ಕಾರಿ ಅಧಿಕಾರಿಯೊಬ್ಬರಿಂದ ಮಹಾವಂಚನೆ ಆಗಿರುವ ಆರೋಪ ಕೇಳಿ ಬಂದಿದೆ. 75 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಸೇಲ್ ಡೀಡ್ ಮೂಲಕ ಸಂಬಂಧವೇ ಇಲ್ಲದ ವ್ಯಕ್ತಿಯ ಹೆಸರಿಗೆ ರಿಜಿಸ್ಟ್ರಾರ್ ಮಾಡಿರುವ ಆರೋಪ ಕೇಳಿ ಬಂದಿದೆ.

Add Zee News as a Preferred Source

ಆಗಿರೋದಿಷ್ಟು, ಬೇಗೂರು ಬಳಿಯಲ್ಲಿ ಪ್ರಕರಣದ ದೂರುದಾರ ಮುಕುಂದ ಮತ್ತು ಅವರ ತಂದೆ ನಾಗರಾಜ್ ಶೆಟ್ಟಿ ಹೆಸರಿನಲ್ಲಿ 75 ಎಕರೆ ಜಮೀನು ಇತ್ತು. ಬಿಟಿಎಂ ಲೇಔಟ್ ನ ಈ ಸಬ್ ರಿಜಿಸ್ಟ್ರಾರ್ ರೂಪ
ನಕಲಿ ದಾಖಲೆ ಸೃಷ್ಟಿಸಿ, ಗಣೇಶ್ ಎನ್.ವೈ ಎಂಬಾತನನ್ನು ನಾಗರಾಜ್ ಶೆಟ್ಟಿಯವರ ಪುತ್ರನಂತೆ ನಕಲಿ ದಾಖಲೆ ಸೃಷ್ಟಿಸಿ ಸೇಲ್ ಡೀಡ್ ಮಾಡಿಬಿಟ್ಟಿದ್ದಾಳೆ.

ಅಸಲಿಗೆ ನಾಗರಾಜ್ ಶೆಟ್ಟಿಯವರಿಗೆ ಗಣೇಶ್ ಎಂಬ ಮಗನೇ ಇಲ್ಲ. ಅವರಿಗೆ ಇರೋದೆ ಒಬ್ಬನೇ ಮಗ  ಮುಕುಂದ.ಇನ್ನೂ ಮುಕುಂದಗೆ ಜಮೀನಿನ ದಾಖಲೆ ಪರಿಶೀಲನೆ ವೇಳೆ ತಮ್ಮ ಜಮೀನನ್ನು ಬೇರೆಯವರ ಹೆಸರಿಗೆ ಅಕ್ರಮವಾಗಿ ರಿಜಿಸ್ಟರ್ ಮಾಡಿರೋದು ಗೊತ್ತಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಅನುಮಾನ ಅವರಿಗೆ ಬಂದಿತ್ತು.‌ ತಮಗೆ ಆಗಿರುವ ವಂಚನೆ ಕುರಿತು  ಮುಕುಂದ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ರು.

ಪೊಲೀಸರು ಆರಂಭಿಕ ಹಂತದಲ್ಲಿ ತನಿಖೆ ನಡೆಸಿದಾಗ ದೊಡ್ಡ ಮೊತ್ತದ ಹಗರಣ ಎಂಬುದು ಗೊತ್ತಾಗಿತ್ತು. ಹೀಗಾಗಿ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ರು.ತನಿಖೆ ನಡೆಸಿದಾಗ ಈ ರೂಪಳಾ ಸಂಪೂರ್ಣ ಕಳ್ಳಾಟ ಬಯಲಾಗಿದ್ದು, ಸಬ್ ರಿಜಿಸ್ಟ್ರಾರ್ ರೂಪ ಮತ್ತು ಈಕೆಗೆ ಸಹಾಯ ಮಾಡಿದ ಆರೋಪದ ಮೇಲೆ ನವೀನ್ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು,150 ಕೋಟಿಗೂ ಅಧಿಕ ಮೌಲ್ಯದ ಜಮೀನಿನ ಅಕ್ರಮ ಸೇಲ್ ಡೀಡ್ ಪ್ರಕರಣ ಎಂಬುದು ಗೊತ್ತಾಗಿದೆ. ಇನ್ನೂ ಈ ಪ್ರಕರಣದಲ್ಲಿ ಇನ್ನೂ ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ಸಿಸಿಬಿ ತನಿಖೆ ಮುಂದುವರೆಸಿದೆ.

ಇದನ್ನೂ ಓದಿ : ಸೈಲೆಂಟಾಗಿಯೇ ದೆಹಲಿಗೆ ಭೇಟಿ ನೀಡಿದ ಸತೀಶ್ : ಡಿಕೆಶಿ ಸಿಎಂ ಕುರ್ಚಿಗೆ ಆಸೆಗೆ ಹಳ್ಳ ತೋಡ್ತಿದಾರಾ ಸಾವ್ಕಾರ್‌?

ಇದನ್ನೂ ಓದಿ : ನಾನು ಕೇವಲ ಕುರುಬರಿಗೆ ಅಷ್ಟೇ ಅಲ್ಲ ಎಲ್ಲಾ ಜಾತಿಗಳಿಗೂ ಕೆಲಸ ಮಾಡಿದ್ದೇನೆ-ಸಿಎಂ ಸಿದ್ದರಾಮಯ್ಯ

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News