ಹಾವೇರಿ : ಯವಕನಿಂದ ಚಾಕು ಇರಿತ ಎಂಟಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಓರ್ವನ ಸ್ಥಿತಿ‌ ಗಂಭೀರವಾಗಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾ ನಗರ (ತಡಸ ತಾಂಡಾ)ದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಮತ್ತೊಂದು ಗುಂಪಿನ ಯುವಕನಿಂದ ಚಾಕುವಿನಿಂದ ಇರಿದಿದ್ದು. ಘಟನೆಯಲ್ಲಿ ಓರ್ವ ಯುವಕನ ಸ್ಥಿತಿ ಗಂಭೀರವಾಗಿದ್ದು ಆತನನ್ನು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ : ಬಿಜೆಪಿ ಶಾಸಕನ ಕೊಲೆಗೆ ಸುಪಾರಿ : ವೈರಲ್‌ ಆಡಿಯೋ ಹಿಂದಿದೆಯಂತೆ ಮೂರನೇ ವ್ಯಕ್ತಿ ಕೈ..!


ಗಲಾಟೆಯಲ್ಲಿ ರವಿ ಲಾಮಣಿ, ಶಂಕರ್ ಲಮಾಣಿ, ರಾಜು ಲಮಾಣಿ, ಮಹೇಶ ಲಮಾಣಿ, ಲಾಲಪ್ಪ  ಲಮಾಣಿ, ಹನುಮಂತ ಪೂಜಾರಿ,ಅಕ್ಷಯ ಲಾಮಣಿ ಚಾಕುವಿನಿಂದ ಇರಿಯಲಾಗಿದೆ. ಅದೇ ಗ್ರಾಮದ ಸುರೇಶ ಲಮಾಣಿ, ರಾಜು ಲಮಾಣಿ, ಲಕ್ಷ್ಮಣ ಲಮಾಣಿ, ಅಶೋಕ ಲಮಾಣಿ, ಪ್ರವೀಣ ಲಾಮಣಿ, ರವಿ ಹನುಮಂತ ಸೇರಿ ಎಂಟು ಜನರಿಂದ ಹಲ್ಲೆ ಆರೋಪ ಕೇಳಿಬಂದಿದೆ. 


ಈ ಘಟನೆಯಲ್ಲಿ‌ ಓರ್ವನ ಕೈ ಬೆರಳು ಕಟ್ ಆದ್ರೆ ಮತ್ತೊಬ್ಬ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಮನಬಂದಂತೆ ಚಾಕುವಿನಿಂದ ಇರಿದ ಹಿನ್ನೆಲೆ ಎಂಟು ಜನರಿಗೂ ತಲೆಯ ಭಾಗ, ಕೈ, ಬೆನ್ನು ಸೇರಿ ದೇಹದ ಇತರ ಭಾಗದಲ್ಲಿ ಗಾಯಗಳಾಗಿವೆ. 


ಸುರೇಶ ಲಮಾಣಿ ಎಂಬಾತ ಚಾಕುವಿನಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಆದರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ರವಿ ಲಾಮಣಿ ಕುಟುಂಬಸ್ಥರ‌ ಹೇಳುತ್ತಿರುವ ಪ್ರಕಾರ, ಗಲಾಟೆ ಗ್ರಾಮದ ಬಸ್ ನಿಲ್ದಾಣ ಜಾಗದ ಸಂಬಂಧವಾಗಿ ಆಗಿದೆ ಎಂದು ಹೇಳಿದ್ದಾರೆ. 


ಏಕಾಏಕಿ ಬಂದು ಕೈಯಲ್ಲಿ ಚಾಕು, ಕೋಲು ಕಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆ ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಇದನ್ನೂ ಓದಿ : Pralhad Joshi : ನಾನು ರಾಜ್ಯ ರಾಜಕಾರಣದತ್ತ ಬರೋಲ್ಲ : ಪ್ರಲ್ಹಾದ್ ಜೋಶಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.