POCSO Case Against Muruga Shri: ಚಿತ್ರದುರ್ಗ  ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ  (POCSO Case Against Muruga Shri) ಸಂತ್ರಸ್ತ ಬಾಲಕಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಚಿಕ್ಕಪ್ಪನ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ. 


COMMERCIAL BREAK
SCROLL TO CONTINUE READING

ಮೈಸೂರಿನ 'ಒಡನಾಡಿ' ಸೇವಾ ಸಂಸ್ಥೆಯ (Mysores Odanadi Service Organization) ನೆರವಿನೊಂದಿಗೆ ಚಿತ್ರದುರ್ಗದಲ್ಲಿ ಮಕ್ಕಳ ರಕ್ಷಣಾಧಿಕಾರಿ ಎದುರು ಹಾಜರಾದ ಸಂತ್ರಸ್ತ ಬಾಲಕಿಯನ್ನು (Victim Girl) ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿತ್ತು. ಈ ವೇಳೆ ಸಂತ್ರಸ್ತೆಯ ಅಳಲು ಆಲಿಸಿದ  ಮಕ್ಕಳ ಕಲ್ಯಾಣ ಸಮಿತಿಯು ಬಾಲನ್ಯಾಯ ಕಾಯ್ದೆಯ ಕಾಲಂ 75ರ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಮಕ್ಕಳ ರಕ್ಷಣಾಧಿಕಾರಿಗೆ ಆದೇಶಿಸಿದ್ದಾರೆ.


ಇದನ್ನೂ ಓದಿ- ಪ್ರೀತಿ ಹೆಸರಲ್ಲಿ ಓರ್ವ, ಬ್ಲಾಕ್ ಮೇಲ್ ಮಾಡಿ ಮತ್ತೋರ್ವನಿಂದ ಬಾಲಕಿಯ ಅತ್ಯಾಚಾರ: ಕೀಚಕರಿಗೆ 20 ವರ್ಷ ಜೈಲು


ತಂದೆಯ ಅನಾರೋಗ್ಯದ ಕಾರಣಕ್ಕೆ ಚಿಕ್ಕಪ್ಪನ ಆಶ್ರಯದಲ್ಲಿದ್ದ 17 ವರ್ಷದ ಬಾಲಕಿ ಮೇ 22ರಂದು ಮನೆ ತೊರೆದಿದ್ದಳು. ಪುತ್ರಿ ಕಾಣೆಯಾಗಿರುವ ಬಗ್ಗೆ ಮೇ 24ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದಾಗ ಬಳಿಕ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ಮರಳಿದ್ದ ಬಾಲಕಿ, ಸಂಸ್ಥೆಯ ನಿರ್ದೇಶಕ ಸ್ಪ್ಯಾನ್ಸಿ ಅವರೊಂದಿಗೆ ಮಂಗಳವಾರ (ಮೇ 28) ಚಿತ್ರದುರ್ಗಕ್ಕೆ ಬಂದಿದ್ದಳು. ಪೋಕ್ಸೋ ಪ್ರಕರಣದ (POCSO Case) ಸಾಕ್ಷ್ಯ ನುಡಿಯುವ ವೇಳೆ ಸಂತ್ರಸ್ತೆಯ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದೆ. 


ಇದನ್ನೂ ಓದಿ- ಹಿಂದಿ ಟೀಚರ್ ನಿಂದ ಹೀನಾಯ ಕೃತ್ಯ: ನೊಂದ ಬಾಲಕನಿಗೆ 1 ಲಕ್ಷ ರೂ. ಪರಿಹಾರ


ಮನೆ ತೊರೆದ ಬಾಲಕಿ ಒಡನಾಡಿ ಸೇವಾ ಸಂಸ್ಥೆಗೆ ಬಂದ ಬಳಿಕ ಮಕ್ಕಳ ಕಲ್ಯಾಣ ಸಮಿತಿ (Child Welfare Committee) ಎದುರು ಹಾಜರುಪಡಿಸಿ ಚಿಕ್ಕಪ್ಪನ ಕಿರುಕುಳದ ಬಗ್ಗೆ ವಿವರಿಸಲಾಗಿದೆ. ವ್ಯವಸ್ಥಿತವಾಗಿ ಪೋಕ್ಸೋ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದ್ದು, ಪ್ರಕರಣದಿಂದ ಹಿಂದೆ ಸರಿಯುವಂತೆ ಸಂತ್ರಸ್ತರನ್ನು ಬೆದರಿಸಲಾಗಿದೆ ಎಂಬುದು ತಿಳಿದುಬಂದಿದೆ. ಇದಕ್ಕಾಗಿ ಹಣ, ಚಿನ್ನಾಭರಣದ ಆಮಿಷ ಒಡ್ಡಲಾಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು' ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಪ್ಯಾನಿ ಒತ್ತಾಯಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.