ಪತ್ನಿಯ ಕಿರುಕುಳಕ್ಕೆ ಮದುವೆಯಾದ ಒಂದೇ ವರ್ಷಕ್ಕೆ ಪತಿ ಆತ್ಮಹತ್ಯೆ; ವಿಡಿಯೋ ಮಾಡಿ ಸಾವಿಗೆ ಶರಣು!!

Atul Subhash-like horror: ಐಟಿ ಕಂಪನಿ ಮ್ಯಾನೇಜರ್ ಮಾನವ್ ಶರ್ಮಾ ಎಂಬುವವರು ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಕುತ್ತಿಗೆಗೆ ನೇಣು ಬಿಗಿದುಕೊಂಡು ಅಳುತ್ತಿರುವ ಲೈವ್ ವಿಡಿಯೋ ಮಾಡಿರುವ ಅವರು, ತಮ್ಮ ಹೆಂಡತಿಯಿಂದ ಆಗುತ್ತಿದ್ದ ಚಿತ್ರಹಿಂಸೆಯ ಬಗ್ಗೆ ತಿಳಿಸಿದ್ದಾನೆ.

Written by - Puttaraj K Alur | Last Updated : Feb 28, 2025, 04:08 PM IST
  • ಪತ್ನಿಯ ಕಿರುಕುಳದಿಂದ ಬೇಸತ್ತು ಐಟಿ ಕಂಪನಿ ಮ್ಯಾನೇಜರ್‌ ಆತ್ಮಹತ್ಯೆಗೆ ಶರಣು
  • ಕುತ್ತಿಗೆಗೆ ನೇಣು ಬಿಗಿದುಕೊಂಡು ಅಳುತ್ತಿರುವ ಲೈವ್‌ ವಿಡಿಯೋ ಮಾಡಿದ ಐಟಿ ಮ್ಯಾನೇಜರ್
  • ಬೆಂಗಳೂರಿನ ಅತುಲ್ ಸುಭಾಷ್ ಪ್ರಕರಣ ಹೋಲುತ್ತಿರುವ ಮಾನವ್ ಶರ್ಮಾನ ಆತ್ಮಹತ್ಯೆ ಕೇಸ್‌
ಪತ್ನಿಯ ಕಿರುಕುಳಕ್ಕೆ ಮದುವೆಯಾದ ಒಂದೇ ವರ್ಷಕ್ಕೆ ಪತಿ ಆತ್ಮಹತ್ಯೆ; ವಿಡಿಯೋ ಮಾಡಿ ಸಾವಿಗೆ ಶರಣು!!
ಐಟಿ ಕಂಪನಿ ಮ್ಯಾನೇಜರ್‌ ಆತ್ಮಹತ್ಯೆ!

Suicide Case: ಪತ್ನಿಯ ಕಿರುಕುಳದಿಂದ ಬೇಸತ್ತು ಐಟಿ ಕಂಪನಿ ಮ್ಯಾನೇಜರ್‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಮಾನವ್‌ ಶರ್ಮಾ ಎಂಬಾತನೇ ಪತ್ನಿಯ ಕುರಿಕುಳಕ್ಕೆ ಬೇಸತ್ತು ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಅಳುತ್ತಿರುವುದನ್ನು ಲೈವ್‌ ವಿಡಿಯೋ ಮಾಡಿದ್ದಾನೆ. ಆ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

Add Zee News as a Preferred Source

ಮಾನವ್ ಶರ್ಮಾನ ಆತ್ಮಹತ್ಯೆ ಪ್ರಕರಣವು ಬೆಂಗಳೂರಿನ ಅತುಲ್ ಸುಭಾಷ್ ಪ್ರಕರಣವನ್ನೇ ಹೋಲುತ್ತಿದೆ. ಆತ್ಮಹತ್ಯೆಗೂ ಮುನ್ನ ಮಾನವ್ 6 ನಿಮಿಷ 57 ಸೆಕೆಂಡುಗಳ ವಿಡಿಯೋ ಮಾಡಿದ್ದು, ಪತ್ನಿಯಿಂದ ತನಗೆ ಆಗುತ್ತಿದ್ದ ಚಿತ್ರಹಿಂಸೆಯ ಬಗ್ಗೆ ವಿವರಿಸಿದ್ದಾನೆ. ಮೂಲತಃ ಆಗ್ರಾದ ಡಿಫೆನ್ಸ್ ಕಾಲೋನಿಯ ನಿವಾಸಿಯಾಗಿದ್ದ ಮಾನವ್ ಶರ್ಮಾ, ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅವರ ತಂದೆ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. 

ಇದನ್ನೂ ಓದಿ: ರೀಲ್ಸ್‌ ನೋಡುವಾಗ ಸ್ಕ್ರೀನ್‌ ಟಚ್‌ ಮಾಡದೇ Scroll ಮಾಡ್ಬೋಡು! ಈ ಟೆಕ್ನಿಕ್‌ ಬಳಸಿ

ಮಾನವ್ ಶರ್ಮರ ತಂದೆ ನರೇಂದ್ರ ಶರ್ಮಾರ ಹೇಳಿಕೆ ಪ್ರಕಾರ, ʼತಮ್ಮ ಪುತ್ರನಿಗೆ ಕಳೆದ ವರ್ಷ ಜನವರಿಯಲ್ಲಿ ಮದುವೆಯಾಗಿತ್ತು. ಮಗ-ಸೊಸೆ ಇಬ್ಬರೂ ಮುಂಬೈನಲ್ಲಿ ವಾಸವಾಗಿದ್ದರು. ಆದರೆ ಕೆಲವೇ ತಿಂಗಳ ಬಳಿಕ ಸೊಸೆ ತಮ್ಮ ಮಗನ ಜೊತೆ ಜಗಳ ಆರಂಭಿಸಿದ್ದಳು. ಅಲ್ಲದೆ ತಮ್ಮ ಕುಟುಂಬದ ಮೇಲೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡುವ ಬಗ್ಗೆಯೂ ಬೆದರಿಕೆ ಹಾಕಿದ್ದಳು. ಕೆಲ ಸಮಯದ ಬಳಿಕ ಮಗ-ಸೊಸೆ ಆಗ್ರಾಕ್ಕೆ ಬಂದಿದ್ದರು. ಕೆಲವು ದಿನಗಳ ಬಳಿಕ ಮಾನವ್‌ ಆತನ ಹೆಂಡತಿಯನ್ನ ತವರು ಮನೆಗೆ ಬಿಟ್ಟು ಬಂದಿದ್ದ. ಈ ವೇಳೆ ಅತ್ತೆ-ಮಾವ ಇಬ್ಬರೂ ಮಾನವ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಇದಾದ ಮರುದಿನವೇ ಅಂದರೆಫೆ.24ರ ಮುಂಜಾನೆ 5 ಗಂಟೆಗೆ ಮಾನವ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ನಾವು ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲʼವೆಂದು ಹೇಳಿದ್ದಾರೆ. 

ಆತ್ಮಹತ್ಯೆಗೂ ಮುನ್ನ ಮಾಡಿದ ಲೈವ್‌ನಲ್ಲಿ ಮಾನವ್​, ʼನನಗೆ ನನ್ನ ಹೆಂಡತಿಯಿಂದ ತುಂಬಾ ಬೇಸರವಾಗಿದ್ದು, ಸಾವು ಬಿಟ್ಟು ಬೇರೆ ದಾರಿಯಿಲ್ಲ. ಇಂದಿನ ಸಮಾಜದಲ್ಲಿ ಪುರುಷರನ್ನು ರಕ್ಷಿಸಲು ಕಾನೂನುಗಳನ್ನು ರಚಿಸಬೇಕು. ಅಪ್ಪಾ-ಅಮ್ಮ ನನ್ನನ್ನು ಕ್ಷಮಿಸಿ, ಹೆತ್ತವರಿಗೆ ಯಾರೂ ಸಹ ತೊಂದರೆ ಕೊಡಬೇಡಿ. ನಾನು ನನ್ನ ಕರ್ತವ್ಯಕ್ಕೆ ರಜೆ ತೆಗೆದುಕೊಳ್ಳುತ್ತಿದ್ದೇನೆʼ ಅಂತಾ ಕಣ್ಣೀರಿಟ್ಟು ಹೇಳಿದ್ದಾನೆ. 

ಇದನ್ನೂ ಓದಿ: ಸಹೋದರನನ್ನು ಕೊಂದು ಮಂಚೂರಿಯಂತೆ ಕಣ್ಣನ್ನು ತಿಂದಿದ್ದ ಆರೋಪಿ ಬಂಧನ..! ಸಾಕು ಬೆಕ್ಕನ್ನು ಸಹ ಸುಟ್ಟಿದ್ದ ಕೀಚಕ

ಆರೋಪ ನಿರಾಕರಿಸಿದ ಪತ್ನಿ!!

ಇನ್ನೂ ತಮ್ಮ ವಿರುದ್ಧದ ಆರೋಪಗಳಿಗೆ ಮಾನವ್‌ ಪತ್ನಿ ನಿಖಿತಾ ಪ್ರತಿಕ್ರಿಯಿಸಿದ್ದು, ʼತನ್ನ ಪತಿ ಮದ್ಯ ವ್ಯಸನಿಯಾಗಿದ್ದರು. ಈ ಹಿಂದೆ ಅನೇಕ ಬಾರಿ ಸ್ವಯಂ ಹಾನಿ ಮಾಡಿಕೊಂಡಿದ್ದರು. ಅತಿಯಾಗಿ ಕುಡಿಯುತ್ತಿದ್ದ ಮಾನವ್‌ ಆತ್ಮಹತ್ಯೆಗೂ ಯತ್ನಿಸಿದ್ದರು. ನಾನೇ ಅನೇಕ ಬಾರಿ ಅವರನ್ನ ರಕ್ಷಿಸಿದ್ದೆ. ಈ ವಿಷಯದ ಬಗ್ಗೆ ಅವರ ಪೋಷಕರಿಗೂ ತಿಳಿಸಿದ್ದೆ. ಆದರೆ ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದರು. ಗಂಡ-ಹೆಂಡತಿ ನೀವೇ ಈ ಸಮಸ್ಯೆಯನ್ನ ಬಗೆಹರಿಸಿಕೊಳ್ಳಿ ಅಂತಾ ಹೇಳಿದ್ದರು. ಕುಡಿದು ಬರುತ್ತಿದ್ದ ಮಾನವ್‌ ನನ್ನ ಮೇಲೂ ಅನೇಕ ಬಾರಿ ಹಲ್ಲೆ ಮಾಡಿದ್ದಾರೆ. ಕುಡಿತಕ್ಕೆ ದಾಸನಾಗಿದ್ದ ನನ್ನ ಪತಿಯನ್ನ ರಕ್ಷಿಸಲು ಪ್ರಯತ್ನಸಿದ್ದು ನನ್ನ ತಪ್ಪಾ? ಅಂತಾ ಪ್ರಶ್ನಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News