ಅಕ್ರಮವಾಗಿ ದಾಸ್ತಾನು ಮಾಡಿದ್ದ ಬಿಯರ್ ಸೀಜ್
ಅಕ್ರಮವಾಗಿ ದಾಸ್ತಾನು ಮಾಡಿದ್ದ 1,137 ಲೀಟರ್ ಬಿಯರ್ ಸೀಜ್ ಮಾಡಿದ ಅಬಕಾರಿ ಅಧಿಕಾರಿಗಳು
ಬನಶಂಕರಿ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಯಿಂದ ದಾಳಿ
ಕುಂಬಳಗೋಡು-ಕನಕಪುರ ರಸ್ತೆಯಲ್ಲಿರುವ ತಿಬ್ಬಾದೇವಿ ಟೆಂಟ್ ಹೌಸ್ ಗೋಡೌನ್ ಮೇಲೆ ರೇಡ್
KA 52 A 9114 ನಂಬರ್ ನ ವಾಹನದಲ್ಲಿ ಇರಿಸಲಾಗಿದ್ದ ಬಿಯರ್
ಎಸಿ ವಾಹನದ ಒಳಗೆ ಬಿಯರ್ ಬಾಟೆಲ್ ಗಳನ್ನು ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ತಂಡ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇಖರಣೆ ಮಾಡಲಾಗಿದ್ದ ಮದ್ಯವನ್ನು ವಶಪಡಿಸಿಕೊಂಡಿದೆ.
ವಾಹನ ಚಾಲಕ ಮತ್ತು ಟೆಂಟ್ ಹೌಸ್ ಉಸ್ತುವಾರಿಯನ್ನ ವಶಕ್ಕೆ ಪಡೆದು ವಿಚಾರಣೆ. ಬಿಯರ್ ಯಾರಿಗೆ ಸೇರಿದ್ದು ಅನ್ನೋದರ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು.