)
Wife murder: ಪ್ರಿಯಕರನ ಜೊತೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದ ಪತ್ನಿಯ ರುಂಡವನ್ನ ಕಡಿದ ಪತಿಯೊಬ್ಬ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿರುವ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೆನ್ನಾಗರ ನಿವಾಸಿ ಶಂಕರ್(28) ಪತ್ನಿಯ ರುಂಡ ಕಡಿದ ಆರೋಪಿ. ಹೆಬ್ಬಗೋಡಿ ನಿವಾಸಿ ಮಾನಸ(26) ಮೃತ ಮಹಿಳೆ. ಪ್ರೀತಿಸಿ ಮದುವೆ ಆಗಿದ್ದ ಮಾನಸ ಮತ್ತು ಶಂಕರ್ ತಿಂಗಳ ಹಿಂದಷ್ಟೇ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಇದೇ ತಿಂಗಳು 3ನೇ ತಾರೀಖು ರಾತ್ರಿ ಕೆಲಸ ನಿಮಿತ್ತ ಶಂಕರ್ ತೆರಳಿದ್ದ. ನಾಳೆ ಬೆಳಗ್ಗೆ ಬರುವುದಾಗಿ ಪತ್ನಿಗೆ ಹೇಳಿದ್ದ. ಆದರೆ ಕೆಲಸ ಬೇಗ ಮುಗಿದ ಹಿನ್ನೆಲೆ ಅಂದು ತಡರಾತ್ರಿಯ ವಾಪಸ್ ಆಗಿದ್ದನಂತೆ.
ಪತ್ನಿ ಒಬ್ಬಳೇ ಇದ್ದಾಳೆಂದು ತಡರಾತ್ರಿ ಶಂಕರ್ ವಾಪಸ್ ಆಗಿದ್ದನಂತೆ. ಆದರೆ ಪತ್ನಿ ಮಾತ್ರ ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದಳು ಎಂದು ಹೇಳಲಾಗಿದೆ. ರೆಡ್ ಹ್ಯಾಂಡೆಡ್ ಆಗಿ ಪ್ರಿಯಕರನ ಜೊತೆ ಪತ್ನಿ ಸಿಕ್ಕಿಬಿದ್ದಿದ್ದಳಂತೆ. ಆಕ್ರೋಶಗೊಂಡ ಶಂಕರ್ ಇಬ್ಬರ ಮೇಲೂ ಹಲ್ಲೆ ಮಾಡಿದ್ದನಂತೆ. ʼನನಗೆ ನೀನು ಬೇಡ ಅಂತಾ ಹೇಳಿ ಪ್ರಿಯಕರನ ಜೊತೆಗೆ ಪತ್ನಿಯನ್ನ ಶಂಕರ್ ಕಳುಹಿಸಿದ್ದನಂತೆ.
ಆದರೆ ಪತ್ನಿ ಮಾನಸ ಪದೇ ಪದೇ ಮನೆಗೆ ಬಂದು ಶಂಕರ್ಗೆ ಟಾರ್ಚರ್ ಕೊಡುತ್ತಿದ್ದಳಂತೆ. ಅದರಂತೆ ಶುಕ್ರವಾರ ರಾತ್ರಿಯೂ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಾಳಂತೆ. ಇದರಿಂದ ಆಕ್ರೋಶಗೊಂಡ ಶಂಕರ್ ಪತ್ನಿಯ ತಲೆ ಕಡಿದು ಬೈಕ್ನಲ್ಲಿ ರುಂಡದ ಸಮೇತ ಸೂರ್ಯನಗರ ಪೊಲೀಸ್ ಠಾಣೆಗೆ ಬಂದಿದ್ದಾನೆ.
ಇದನ್ನೂ ಓದಿ: RCB, KSCA, DNA ಕಂಪನಿ ವಿರುದ್ಧ ದೂರು ನೀಡಿದ ಗಾಯಾಳು
ಅಕ್ರಮ ಸಂಬಂಧದ ಆರೋಪ ಹಿನ್ನೆಲೆ ಪತಿ ಶಂಕರ್ ತನ್ನ ಪತ್ನಿ ಮಾನಸಳ ರುಂಡವನ್ನು ಕಡಿದು ಪೊಲೀಸ್ಠಾಣೆಗೆ ಬಂದಿದ್ದಾನೆ. ಆರೋಪಿಯ ಕೈಯಲ್ಲಿ ಇದ್ದ ಮಹಿಳೆಯ ರುಂಡವನ್ನು ನೋಡಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಾರೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ