ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಇರಬೇಕು.. ಇಲ್ಲ ಅಂದ್ರೆ ಆಗಬಾರದ್ದು ಆಗುತ್ತೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಹೆಂಡತಿಯೊಬ್ಬಳು ತನ್ನ ಗಂಡನ ಶಿಶ್ನವನ್ನು ಕತ್ತರಿಸಿದ್ದಾಳೆ. ಪ್ರಸ್ತುತ ಈ ಆಘಾತ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಲಕ್ನೋ : ನಗರದಲ್ಲಿ ಅನ್ಸಾರ್ ಅಹ್ಮದ್ ಎಂಬ ವ್ಯಕ್ತಿ ತನ್ನ ಇಬ್ಬರು ಹೆಂಡತಿಯರೊಂದಿಗೆ ವಾಸಿಸುತ್ತಿದ್ದ. ಹೆಂಡತಿಯರ ಜೊತೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಇತ್ತೀಚಿಗೆ ಈ ಪರಿಸ್ಥಿತಿಯಲ್ಲಿ, ಎರಡನೇ ಹೆಂಡತಿಯ ನಡುವಿನ ಜಗಳ ಅತಿರೇಕಕ್ಕೆ ಹೋಗಿದೆ. ಈ ವೇಳೆ ಎರಡನೇ ಪತ್ನಿ ಪತಿಯ ಜನನಾಂಗವನ್ನೇ ಕತ್ತರಿಸಿದ್ದಾಳೆ.
ಹೌದು.. ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಅನ್ಸಾರ್ ಅಹ್ಮದ್ಗೆ 38 ವರ್ಷ ವಯಸ್ಸಾಗಿದ್ದು, ಸಬಿಜೋಲ್ ಮತ್ತು ನಜ್ನೀನ್ ಎಂಬ ಇಬ್ಬರು ಪತ್ನಿಯರಿದ್ದಾರೆ. ಅವರಿಗೆ ಮಕ್ಕಳಿಲ್ಲ ಮೂವರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಕಾರಣದಿಂದಾಗಿ, ಅನ್ಸಾರ್ ಮತ್ತು ಅವರ ಇಬ್ಬರು ಪತ್ನಿಯರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು.
ಎಂದಿನಂತೆ ನಿನ್ನೆ (ಆಗಸ್ಟ್ 11, 2025) ಅನ್ಸಾರ್ ಅಹ್ಮದ್ ಮತ್ತು ಅವರ ಎರಡನೇ ಪತ್ನಿ ನಜ್ನೀನ್ ಬಾನು ನಡುವೆ ತೀವ್ರ ವಾಗ್ವಾದ ನಡೆಯಿತು. ಜಗಳ ತಾರಕಕ್ಕೇರಿದೆ. ಇದರಿಂದ ಕೋಪಗೊಂಡ ನಜ್ನೀನ್ ಬಾನು ಮನೆಯಿಂದ ಚಾಕು ತಂದು ತನ್ನ ಗಂಡನ ಜನನಾಂಗವನ್ನು ಕತ್ತರಿಸಿದ್ದಾಳೆ, ಗಂಭೀರವಾಗಿ ಗಾಯಗೊಂಡಿದ್ದ ಅಹ್ಮದ್ ಕಿರುಚಾಡಿದ್ದಾನೆ.
ಅಹ್ಮದ್ ಅವರ ಕಿರುಚಾಟ ಕೇಳಿ ಬಂದ ಮೊದಲ ಪತ್ನಿ ಮತ್ತು ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಸ್ರಿನ್ ಬಾನು ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.