ಗಂಡ ಹೆಂಡತಿ ನಡುವೆ ಯಾವಾಗಲೂ ಜಗಳ, ಜಗಳಗಳು ನಡೆಯುತ್ತಲೇ ಇರುತ್ತವೆ. ಆದರೆ ಅವು ಉಂಡು ಮಲಗುವ ವರೆಗೆ ಇರಬೇಕು. ಕೆಲವು ಪ್ರಕರಣದಲ್ಲಿ ಹೆಂಡತಿ ತನ್ನ ಗಂಡನನ್ನು ಕೊಂದು, ಅವನಿಗೆ ಮೋಸ ಮಾಡಿದ ಸಂಗತಿಗಳೂ ಸಹ ವರದಿಯಾಗಿವೆ. ಆದರೆ ಈ ಘಟನೆ ಬಹಳ ವಿಭಿನ್ನವಾಗಿದೆ..

ಉತ್ತರ ಪ್ರದೇಶ : ಬುಲಂದ್ಶಾ ಜಿಲ್ಲೆಯ ಮೌ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆ ಇದು. ರಾಜಾ ರಿಷಿಪಾಲ್ ಎಂಬುವ ವ್ಯಕ್ತಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದ. ಕೆಲಸದ ನಿಮಿತ್ತ ದೆಹಲಿಗೆ ಹೋಗಿ ಬಂದಿದ್ದ. ಅಂದು ಆಗಸ್ಟ್ 6, 2025 ರ ಶನಿವಾರ ತಡರಾತ್ರಿ, ದೆಹಲಿಯಿಂದ ಬಂದಿದ್ದ ರಿಷಿಕೇಶ್ ಊಟ ಮಾಡಲು ಕುಳಿತರು. ಪತ್ನಿ ಆರತಿ ಅವನಿಗೆ ಊಟ ಬಡಿಸಿದಳು, ಆದರೆ ಊಟ ಮಾಡಿದ ನಂತರ ರಾಜಾ ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ರಿಷಿಕೇಶ್ ಅವರ ತಾಯಿ ದುಲಾರಿ ಪೊಲೀಸರಿಗೆ ತಮ್ಮ ಸೊಸೆ ತಮ್ಮ ಮಗನಿಗೆ ಆಹಾರದಲ್ಲಿ ಮಾತ್ರೆ ನೀಡಿರುವುದಾಗಿ ತಿಳಿಸಿದ್ದಾರೆ.
ಪತಿ ಪ್ರಜ್ಞೆ ತಪ್ಪಿದ ನಂತರ, ಆರತಿ ರಾತ್ರಿ 11 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ತನ್ನ ಮನೆಗೆ ಕರೆಸಿಕೊಂಡರು. ಅವರು ರಿಷಿಪಾಲ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದಿದ್ದಾರೆ. ನಂತರ ಅವನ ಕುತ್ತಿಗೆಗೆ ಹಗ್ಗ ಕಟ್ಟಿ ಕೊಲ್ಲಲು ಪ್ರಯತ್ನಿಸಿದರು ಎನ್ನಲಾಗಿದೆ.
ಜೀವ ಉಳಿಸಿಕೊಳ್ಳಲು ರಿಷಿಪಾಲ್ ಜೋರಾಗಿ ಕಿರುಚಲು ಪ್ರಾರಂಭಿಸಿದ್ದಾನೆ. ಅವನ ಕಿರುಚಾಟ ಕೇಳಿ ನೆರೆಹೊರೆಯವರು ಓಡಿ ಬಂದಿದ್ದಾರೆ. ಜನರು ಜಮಾಯಿಸುತ್ತಿದ್ದಂತೆ ಆರೋಪಿ ಕೊಲೆ ಬೆದರಿಕೆ ಹಾಕಿ ಓಡಿಹೋಗಿದ್ದಾನೆ. ರಾಜಾ ರಿಷಿಪಾಲ್ನನ್ನು ತಕ್ಷಣ ಅನುಪ್ಶಹರ್ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಅವನನ್ನು ಬುಲಂದ್ಶಹರ್ಗೆ ಕರೆದೊಯ್ಯಲಾಯಿತು. ಪ್ರಸ್ತುತ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.
ಆಗಸ್ಟ್ 7, ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕುಟುಂಬವು ಗ್ರಾಮಸ್ಥರೊಂದಿಗೆ ಪೊಲೀಸ್ ಠಾಣೆಗೆ ಹೋಗಿದೆ. ಪೊಲೀಸರಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದೆ. ರಿಪಬ್ಲಿಕ್ ಭಾರತ್ ಪ್ರಕಾರ, ವೈದ್ಯಕೀಯ ವರದಿ ಮತ್ತು ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಧರ್ಮೇಂದ್ರ ಕುಮಾರ್ ಶರ್ಮಾ ತಿಳಿಸಿದ್ದಾರೆ ಎನ್ನಲಾಗಿದೆ.