ಲಾಂಗ್ ಮಚ್ಚು ಹಿಡಿದು ರೀಲ್ಸ್ ಮಾಡಿ ಹವಾ ಮೇಂಟೈನ್..! ಪುಂಡರಿಗೆ ಪೊಲೀಸ್‌ ಭಯವೇ ಇಲ್ವಾ..

ಬರ್ತಾ ಬರ್ತಾ ಬೆಂಗಳೂರಲ್ಲಿ ಪುಡಿ ರೌಡಿಗಳು, ಮೀಸೆ ಚಿಗುರದ ಹುಡುಗ್ರ ಹಾವಳಿ ಜಾಸ್ತಿಯಾಗ್ತಿದೆ. ಪೊಲೀಸರು ಭಯ ಇಲ್ದಾಂಗೆ ಪುಡಾರಿಗಳು ವರ್ತಿಸಿ ಸೋಷಿಯಲ್ ಮೀಡಿಯಾದಲ್ಲಿ ಬಿಲ್ಡಪ್ ಕೊಡ್ತಾರೆ. ಈ ಠಾಣೆ ವ್ಯಾಪ್ತಿಯಲ್ಲಂತೂ ಪೊಲೀಸರ ಕೆಲಸದ ಬಗ್ಗೆನೇ ಡೌಟ್ ಬರೋ ರೀತಿ ಆಗಿಬಿಟ್ಟಿದ್ದೆ.

Written by - VISHWANATH HARIHARA | Last Updated : Mar 2, 2025, 11:33 PM IST
    • ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾದ ಪುಡಿ ರೌಡಿಗಳ ಹಾವಳಿ..
    • ಲಾಂಗು ಮಚ್ಚು ಹಿಡಿದು ಫೋಸ್ ಕೊಟ್ರು ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ..
    • ಭಯ ಇಲ್ದಾಂಗೆ ಪುಡಾರಿಗಳು ವರ್ತಿಸಿ ಸೋಷಿಯಲ್ ಮೀಡಿಯಾದಲ್ಲಿ ಬಿಲ್ಡಪ್
ಲಾಂಗ್ ಮಚ್ಚು ಹಿಡಿದು ರೀಲ್ಸ್ ಮಾಡಿ ಹವಾ ಮೇಂಟೈನ್..! ಪುಂಡರಿಗೆ ಪೊಲೀಸ್‌ ಭಯವೇ ಇಲ್ವಾ..

ಬೆಂಗಳೂರು : ಇತ್ತಿಚೇಗೆ ಮಾಧ್ಯಮಗಳಲ್ಲಿ ಸಿಟಿಯಲ್ಲಿ ಕ್ರೈಮ್ ರೇಟ್ ಜಾಸ್ತಿ ಆಗ್ತಿದೆ ಅಂತ ಸುದ್ದಿ ಆಗ್ತಿದೆ. ಇದನ್ನ ನೋಡಿ ಕೆಲ ಪೊಲೀಸ್ರಿಗೆ ಬೇಸರ ಕೂಡ ಆಗಿರ್ಬಹುದು. ಆದ್ರೆ ಈ ಫೊಟೋಗಳನ್ನ ನೋಡಿದ್ರೆ ನೀವೇ ಬೇಜಾರ್ ಆಗ್ಬಿಡ್ತೀರಾ. ಯಾಕಂದ್ರೆ ಒಂದೇ ಏರಿಯಾದಲ್ಲಿ ಪುಡಿ ರೌಡಿಗಳು ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಲಾಂಗ್ ಮಚ್ಚು ಹಿಡಿದು ರೀಲ್ಸ್ ಮಾಡಿ ಹವಾ ಮೇಂಟೈನ್ ಮಾಡಿದ್ರು ಇಲ್ಲಿ ಹೇಳೋರು ಕೇಳೋರು ಇಲ್ಲ.

Add Zee News as a Preferred Source

ಹೌದು ಕಳೆದವಾರ ರೌಡಿ ಶೀಟರ್ ಹೈದರ್ ನ ಅದೇ ಏರಿಯಾದ ನಾಜ್ ಅಂಡ್ ಟೀಮ್ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ರು. ಈಗ ಅದೇ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಸಂದ್ರ, ಆನೇಪಾಳ್ಯದ ಕೆಲ ಪುಂಡರ ನೋಡಿದ್ರೆ ಭಯ ಆಗೋದು ಪಕ್ಕಾ. ಅದೇನು ಇವ್ರು ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡೋಕೆ ಈ ರೀತಿ ಫೋಟೋಗೆ ಪೋಸ್ ಕೊಡ್ತಾರಾ, ಇಲ್ಲ ತಾನೂ ರೌಡಿ ಆಗಬೇಕು ಅಂತಾ ಅಪ್ಲಿಕೇಷನ್ ಹಾಕ್ತಿದ್ದಾರ ಗೊತ್ತಿಲ್ಲ. ದುರಂತ ಅಂದ್ರೆ ಪೊಲೀಸ್ರ ಕಣ್ಣಿಗೆ ಮಾತ್ರ ಈ ಫೋಟೋ ವಿಡಿಯೋ ಬೀಳಲ್ಲ‌. 

ಇದನ್ನೂ ಓದಿ:ಮದುವೆಗೂ ಮುನ್ನ ಮಹಿಳೆ ಲೈಂಗಿಕ ಕ್ರಿಯೆ ಏಕೆ ಮಾಡ್ಬಾರದು, ಹನಿಮೂನ್‌ನಲ್ಲಿ ಅಷ್ಟೇ ಮಾಡ್ಬೇಕಾ..!? ಹಿರಿಯ ನಟಿ ಸಂಚಲನ ಹೇಳಿಕೆ..

ಇವ್ರು ಬಾಲ ಬಿಚ್ಚುತ್ತಿದ್ದಂತೆ ಕಟ್ ಮಾಡಿದ್ರೆ ಇವ್ರು ಮುಂದೆ ದೊಡ್ಡ ರೌಡಿಗಳಾಗಲ್ಲ. ಆದ್ರೆ ಅಶೋಕನಗರ ಪೊಲೀಸ್ರಿಗೆ ಇವ್ರನ್ನ ಮಟ್ಟಹಾಕೋ ಮನಸ್ಸಿಲ್ಲ ಅನಿಸುತ್ತೆ. ಯಾರದ್ದೋ ಕೊಲೆ ಆದ್ಮೇಲೆ ಪೊಲೀಸ್ರು ಟೀಮ್ ಮಾಡ್ಕೊಂಡು ಆರೋಪಿಗಳನ್ನ ಹಿಡಿತಿವಿ ಅನ್ನೋ ರೀತಿ ಅವರ ಮನಸ್ಥಿತಿ ಇದೆ. ಆದರೆ ಇನ್ನೂ ಮೀಸೆನೆ ಬಂದಿರಲ್ಲ‌. ಆಗಲೇ ರೌಡಿಸಂ, ಹವಾ ಕ್ರಿಯೇಟ್ ಮಾಡೋಕೆ ಇವರು ಈ ಪುಂಡರು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡ್ಕೊಂಡು ಓಡಾಡ್ತಿದ್ದಾರೆ ಅಂದ್ರೆ ಇವರಿಗೆ ಪೊಲೀಸರ ಭಯ ಇಲ್ಲಾ ಅನ್ನಿಸುತ್ತೆ.

ಸದ್ಯ ನಗರದಲ್ಲಿ ಕೊಲೆ ಕೇಸ್ ಗಳು ಜಾಸ್ತಿಯಾಗ್ತಿವೆ. ಪೂರ್ವ ವಿಭಾಗದಲ್ಲೂ ಇತ್ತಿಚೇಗೆ ಹಬ್ಬದ ದಿನ ವಿಲೀಂಗ್ ಮಾಡ್ಕೊಂಡು ಮಚ್ಚು ಲಂಗು ಹಿಡ್ಕೊಂಡು ಹುಡುಗ್ರು ರಸ್ತೆಯಲ್ಲಿ ಹಾವಳಿ ಇಟ್ಟಿದ್ರು. ಈಗ ಕೇಂದ್ರ ವಿಭಾಗದ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ರೀತಿ ಹಾವಳಿ ಇಡ್ತಿದ್ದಾರೆ. ಕಮಿಷನರ್ ದಯಾನಂದ್ ಸರ್  ನಿಮ್ಮವರು ಹೇಗ್ ಕೆಲಸ ಮಾಡ್ತಿದ್ದಾರೆ ನೋಡಿ, ನೀವೇ ಒಂದು ಸರ್ಟಿಫಿಕೇಟ್ ಅವರಿಗೆ ಕೊಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News