Holi celebrations: ಬಣ್ಣಗಳ ಹಬ್ಬ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಬಹಳ ಸಂಭ್ರಮದಿಂದ ಆಚರಿಸುವ ಹಬ್ಬ. ಎಲ್ಲಿ ನೊಡಿದರೂ ಬಣ್ಣ.. ಬಣ್ಣ...! ಹೋಳಿ ಆಚರಣೆಗೆಂದೇ ಕಾತುರದಿಂದ ಕಾಯುವ ಜನರಿದ್ದಾರೆ. ಈ ವರ್ಷದ ಹೋಳಿ ಹಬ್ಬಕ್ಕೆ ಇನ್ನೆನು ಕೆಲವೇ ದಿನಗಳು ಬಾಕಿ ಉಳಿದಿವೆ.
ಹೋಳಿ ಹಬ್ಬದ ಹಿನ್ನಲೆ...
ವಿವಿಧ ಬಣ್ಣಗಳೊಂದಿಗೆ ಆಚರಿಸುವ ಹಬ್ಬವೇ ಹೋಳಿ. ಚಂದ್ರಮಾನ ಪಂಚಾಂಗದ ಪ್ರಕಾರ, ವರ್ಷದ ಕೊನೆಯ ಹುಣ್ಣಿಮೆಯಂದು ಹೋಳಿ ಹಬ್ಬವನ್ನ ಆಚರಿಸಲಾಗುತ್ತದೆ. ಈ ಹಬ್ಬವನ್ನು ರಂಗಿನ ಹಬ್ಬ, ಬಣ್ಣಗಳ ಹಬ್ಬ, ಹೋಳಿ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಪ್ರತಿ ಹಬ್ಬವು ವಿಶೇಷ ಹಾಗೂ ಅರ್ಥಪೂರ್ಣ ಹಿನ್ನಲೆ ಹೊಂದಿರುತ್ತವೆ. ಅದೇ ರೀತಿ ಹೋಳಿ ಸಹ ಹಲವಾರು ಕಥೆಗಳನ್ನು ಹೊಂದಿದೆ. ಹೋಳಿ ಹಬ್ಬದಂದು ಕಾಮ ದಹನ ಮಾಡಲಾಗವುದು. ಇದರ ಕುರಿತು ಪೂರಾಣದಲ್ಲಿಯೂ ಉಲ್ಲೇಖವಿದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಕಣ್ಣುಗಳು ಸದಾ ಮುಚ್ಚಿರಲು ಕಾರಣವೇನು? ಇದರ ಹಿಂದಿನ ರಹಸ್ಯ ತಿಳಿಯಿರಿ
ರೋಚಕ ಕಥೆ
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬವು ವಿಶೇಷ ಹಿನ್ನೆಲೆ ಹಾಗೂ ಕಥೆ ಒಳಗೊಂಡಿರುತ್ತದೆ. ಅದೇ ರೀತಿ ಹೋಳಿ ಹಬ್ಬಕ್ಕೂ ರೋಚಕ ಕಥೆ ಇದೆ. ಶಿವನು ಧ್ಯಾನ ಮಾಡುವಲ್ಲಿ ನಿರತನಾಗಿರುತ್ತಾರೆ. ಕಾಮದೇವ ಅಂದರೆ ಮನ್ಮಥನು ತನ್ನ ಹೂಬಾಣಗಳನ್ನು ಮಹಾದೇವನ ಮೇಲೆ ಬಿಡುವ ಮೂಲಕ, ಶಿವನ ತಪಸ್ಸನ್ನು ಭಂಗಗೊಳಿಸುತ್ತಾನೆ. ಇದರಿಂದ ಕ್ರೋಧಗೊಂಡ ಈಶ್ವರ ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟು ಭಸ್ಮಗೋಳಿಸುತ್ತಾನೆ. ಕಾಮನ ಅರಸಿ ರತಿದೇವಿಯು ಶಿವನಲ್ಲಿ ತನ್ನ ಪತಿಯನ್ನು ಮರಳಿಸುವಂತೆ ಬೇಡಿಕೊಳ್ಳುತ್ತಾಳೆ. ನಂತರ ಶಿವನು ರತಿದೇವಿಗೆ ಮಾತ್ರ ಕಾಮದೇವನು ಶರೀರಿಯಾಗಿ ಕಾಣಿಸುತ್ತಾನೆಂದು ಅಭಯ ನೀಡಿದ ಎಂದು ಉಲ್ಲೆಖವಿದೆ. ಆದ್ದರಿಂದ ಹೋಳಿ ದಿನದಂದು ಕಾಮನ ದಹನ ಮಾಡುವರೆಂಬ ಹಿನ್ನಲೆಯಿದೆ.
ಆಚರಣೆ
ಭಾರತ ಮತ್ತು ನೇಪಾಳಗಳಲ್ಲಿ ಹೆಚ್ಚಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುವುದು. ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಮೂಲಕ ಹಾಗೂ ಕೇಲವು ಕಡೆ ಜನರು ತಮ್ಮ ಪ್ರದೇಶದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸಿ ನಂತರ ಅದಕ್ಕೆ ಬೆಂಕಿ ಹಚ್ಚಿ ಕಾಮದಹನ ಮಾಡುವ ಮೂಲಕ ವಿಶೇಷವಾಗಿ ಆಚರಿಸುತ್ತಾರೆ.
ಇದನ್ನೂ ಓದಿ: 30 ವರ್ಷಗಳ ನಂತರ ಅಪರೂಪದ ತ್ರಿಗ್ರಹ ಯೋಗ; ಈ ಮೂರು ರಾಶಿಯವರಿಗೆ ಅಪಾರ ಸುಖ-ಸಂಪತ್ತು ಸಿಗಲಿದೆ!!
ರಂಗಿನ ಹಬ್ಬ ಬಂತೆಂದರೆ ಸಾಕು ಹಲವಾರು ಬಣ್ಣಗಳಿಂದ ಅಂಗಡಿಗಳು ಕಲರ್‌ಫುಲ್ ಆಗಿ ಕಂಗೊಳಿಸುತ್ತವೆ. ಹೋಳಿ ಹಬ್ಬದ ಆಚರಣೆಯಲ್ಲಿ ಆರೋಗ್ಯದ ಕುರಿತಾಗಿಯೂ ಗಮನಹರಿಸಬೇಕು. ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಯಾವುದೆ ರೀತಿ ಕೆಮಿಕಲ್ ಮಿಶ್ರಿತ ಬಣ್ಣಗಳನ್ನು ಬಳಸದೆ, ಆರೋಗ್ಯ ದೃಷ್ಠಿಯಿಂದ ಜಾಗರೂಕತೆಯಿಂದ ಆಚರಣೆ ಮಾಡಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









