ಕರ್ನಾಟಕದ ಅತಿ ಪುಟ್ಟ ರಾಜ್ಯ ಮಡಿಕೇರಿ. ಮಡಿಕೇರಿಯನ್ನು 'ಕೊಡಗು', 'ಕೂರ್ಗ್' ಎಂದೂ ಸಹ ಕರೆಯುತ್ತಾರೆ. ವೀರತ್ವಕ್ಕೆ ಹೆಸರುವಾಸಿ ಕೊಡಗಿನ ಮಂದಿ. ಪುಣ್ಯ ನದಿ ಕಾವೇರಿಯ ಜನ್ಮ ಭೂಮಿ ಕೊಡಗು. ಕೊಡಗಿನ ಸಾಂಪ್ರದಾಯಿಕ ಹಬ್ಬ "ಹುತ್ತರಿ ಹಬ್ಬ". 


COMMERCIAL BREAK
SCROLL TO CONTINUE READING

'ಪುಥರಿ' ಎಂದರೆ ಹೊಸ ಭತ್ತ ಎಂದರ್ಥ. ಕೊಡಗಿನಲ್ಲಿ ನಡೆಯುವ ಸುಗ್ಗಿಯ ಆಚರಣೆಯೇ ಹುತ್ತರಿ ಹಬ್ಬ. ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಎಂದರೆ ಮಳೆಗಾಲ ಮುಗಿದು ಸಣ್ಣಗೆ ನಡುಕ ಹುಟ್ಟಿಸುವ ಚಳಿ ಆರಂಭವಾದ ನಂತರ ಗದ್ದೆಗಳಲ್ಲಿ ಭತ್ತವು ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತವೆ. 


ದೇವಾಲಯಗಳಲ್ಲಿ ಈ ಸಮಯದಲ್ಲಿ ಹಬ್ಬದ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಊರಿನಲ್ಲಿ ನೆರೆಕಟ್ಟುವುದು, ಕದಿರು ತೆಗೆಯುವುದು ಮತ್ತು ಭೋಜನಕ್ಕೆ ಏರ್ಪಾಟು ಮಾಡಲು ನಿರ್ಧಿಷ್ಟ ಸಮಯವನ್ನು ಹಿರಿಯರು ನಿರ್ಧರಿಸುತ್ತಾರೆ. ಪ್ರಸಾದಕ್ಕಾಗಿ ವಿಶೇಷವಾಗಿ ಹೊಸ ಅಕ್ಕಿಯಿಂದ 'ಪಾಯಸ' ತಯಾರಿಸಿ ಮೊದಲು ದೇವರಿಗೆ ಅರ್ಪಿಸಿ, ನಂತರ ಎಲ್ಲರಿಗೂ ಹಂಚುತ್ತಾರೆ. 


ಸಾಂಪ್ರದಾಯಿಕ ಉಡುಪು ತೊಟ್ಟು ಜನರೆಲ್ಲಾ ಒಂದೆಡೆ ಸೇರಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನಂತರ ರೈತರು ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕೊಯ್ದು ಒಂದೆಡೆ ಗುಡ್ಡೆ ಹಾಕುತ್ತಾರೆ.ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ಬರುವ ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನದಂದು ಉತ್ಸವವನ್ನು ಆಚರಿಸಲಾಗುತ್ತದೆ. ಆಚರಣೆಯ ಸಂದರ್ಭದಲ್ಲಿ ಕೊಡವ ಸಂಪ್ರದಾಯದ ಹಾಡು, ನೃತ್ಯವು ಎಲ್ಲರಲ್ಲೂ ಹೊಸ ಚೈತನ್ಯವನ್ನು ತುಂಬುತ್ತದೆ. 'ಎಲಕ್ಕಿ ಪುಟ್ಟುಥಾರ' ವು ಹುತ್ತರಿ ಹಬ್ಬದ ವಿಶೇಷ ಭಕ್ಷ್ಯವಾಗಿದೆ. ಈ ಆಚರಣೆಯು ಬೆಳೆದ ಕೊಯ್ಲು 'ತಲಿಯತ್ ಬೋಲಾಚ್,' ದುಡಿಕೋಟ್ ಪ್ಯಾಟ್, 'ಒಡೋಲಗಾ' ಎಂಬ ಸಾಂಪ್ರದಾಯಿಕ ಮೆರವಣಿಗೆಗಳನ್ನು ಒಳಗೊಂಡಿರುತ್ತದೆ.