LEAP YEAR 2020 ಕುರಿತ ಈ ರೋಚಕ ಸಂಗತಿ ನಿಮಗೆ ತಿಳಿದಿದೆಯೇ?

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಲೀಪ್ ಇಯರ್ ಆಚರಿಸಲಾಗುತ್ತಿದ್ದು ಇದು ಫೆಬ್ರುವರಿ ತಿಂಗಳಿನಲ್ಲಿ ಬರುತ್ತದೆ. ಲೀಪ್  ಇಯರ್ ನ ಫೆಬ್ರವರಿ ತಿಂಗಳಿನಲ್ಲಿ ಒಂದು ಹೆಚ್ಚುವರಿ ದಿನ ಬರುತ್ತದೆ.

Updated: Feb 27, 2020 , 05:52 PM IST
LEAP YEAR 2020 ಕುರಿತ ಈ ರೋಚಕ ಸಂಗತಿ ನಿಮಗೆ ತಿಳಿದಿದೆಯೇ?
IMAGE COURTESY: YOUTUBE

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಲೀಪ್ ಇಯರ್ ಆಚರಿಸಲಾಗುತ್ತಿದ್ದು ಇದು ಫೆಬ್ರುವರಿ ತಿಂಗಳಿನಲ್ಲಿ ಬರುತ್ತದೆ. ಲೀಪ್  ಇಯರ್ ನ ಫೆಬ್ರವರಿ ತಿಂಗಳಿನಲ್ಲಿ ಒಂದು ಹೆಚ್ಚುವರಿ ದಿನ ಬರುತ್ತದೆ. ಇದರಿಂದ ಪ್ರತಿವರ್ಷ ಫೆಬ್ರುವರಿ ತಿಂಗಳಿನಲ್ಲಿ 29 ದಿನಗಳು ಇರುತ್ತವೆ. ಹಾಗಿದ್ದರೆ ಬನ್ನಿ ಲೀಪ್ ಇಯರ್ ಕುರಿತ ಕೆಲ ರೋಚಕ ಸಂಗತಿಗಳನ್ನು ತಿಳಿದುಕೊಳ್ಳೋಣ.

ಲೀಪ್ ಇಯರ್ ಅಂದರೆ ಏನು?
ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂಬುದು ನಿಮ್ಮೆಲ್ಲರಿಗೂ ತಿಳಿದ ವಿಷಯ. ಈ ಕಾರಣದಿಂದ ಹಗಲು ಮತ್ತು ರಾತ್ರಿಗಳಾಗುತ್ತವೆ ಹಾಗೂ ಋತುಗಳು ಬದಲಾಗುತ್ತವೆ. ಭೂಮಿಗೆ ಸೂರ್ಯನ ಸುತ್ತ ಒಂದು ಸುತ್ತ ಸುತ್ತಲು 365.242 ದಿನ ಕಾಲಾವಕಾಶ ಬೇಕು. ಒಂದು ವರ್ಷದಲ್ಲಿ 365 ದಿನಗಳು ಇರುತ್ತವೆ.  ಅಂದರೆ, 0.242 ದಿನ ಕಾಲ ನಾಲ್ಕು ವರ್ಷಗಳಲ್ಲಿ ಸೇರಿಕೊಂಡರೆ ಒಂದು ದಿನವಾಗುತ್ತದೆ. ಇದೇ ಒಂದು ದಿನ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಫೆಬ್ರುವರಿ ತಿಂಗಳಿಗೆ ಸೇರಿಕೊಳ್ಳುತ್ತದೆ. ಹೀಗಾಗಿ 28 ದಿನಗಳ ಫೆಬ್ರುವರಿ ತಿಂಗಳು 29 ದಿನಗಳ ತಿಂಗಳಾಗಿ ಮಾರ್ಪಡುತ್ತದೆ. ಇದರಿಂದ ನಾಲ್ಕನೇ ವರ್ಷದಲ್ಲಿ 366 ದಿನಗಳು ಬರುತ್ತವೆ ಮತ್ತು ಈ ವರ್ಷವನ್ನು ಲೀಪ್ ಇಯರ್ ಎಂದು ಗುರುತಿಸಲಾಗುತ್ತದೆ.

ಒಂದು ಲೀಪ್ ಇಯರ್ ನಲ್ಲಿ ಎಷ್ಟು ದಿನಗಳು ಇರುತ್ತವೆ
ಸಾಮಾನ್ಯವಾಗಿ ಒಂದು ವರ್ಷದಲ್ಲಿ 365 ದಿನಗಳು ಇರುತ್ತವೆ. ಲೀಪ್ ಇಯರ್ ನಲ್ಲಿ 366 ದಿನಗಳು ಇರುತ್ತವೆ.

ಲೀಪ್ ಇಯರ್ ಏಕೆ ಆಚರಿಸಲಾಗುತ್ತದೆ
 ಭೂಮಿ ಸೂರ್ಯನನ್ನು ಒಂದು ಸುತ್ತು ಸುತ್ತಲು 365 ದಿನ ಹಾಗೂ 6 ಗಂಟೆ ಸಮಯ ತೆಗೆದುಕೊಳ್ಳುತ್ತದೆ.  ಹೀಗಾಗಿ ನಾಲ್ಕು ವರ್ಷಗಳಲ್ಲಿ ಒಂದು ಹೆಚ್ಚುವರಿ ದಿನ ಬರುತ್ತದೆ. ಹೀಗಾಗಿ ನಾಲ್ಕು ವರ್ಷಗಳಿಗೊಮ್ಮೆ ಲೀಪ್ ಇಯರ್ ಆಚರಿಸಲಾಗುತ್ತದೆ.

ಮುಂದಿನ ಲೀಪ್ ಇಯರ್ ಯಾವ ವರ್ಷ ಆಚರಿಸಲಾಗುವುದು
ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಲೀಪ್ ಇಯರ್ ಆಚರಿಸಲಾಗುತ್ತದೆ. ಹೀಗಾಗಿ ಮುಂದಿನ ಲೀಪ್ ಇಯರ್ 2024 ಕ್ಕೆ ಬೀಳಲಿದೆ.

ಲೀಪ್ ಇಯರ್ ಯಾವಾಗ ಆರಂಭಗೊಳ್ಳುತ್ತದೆ
ಎಂದಿನಿಂದ ವಿಶ್ವಾದ್ಯಂತ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಸ್ವೀಕರಿಸಲಾಗಿದೆಯೋ ಅಂದಿನಿಂದ ಲೀಪ್ ಇಯರ್ ಆಚರಣೆ ಆರಂಭಗೊಂಡಿದೆ. ಯೇಸು ಪ್ರಭು ಹುಟ್ಟಿದ ವರ್ಷದಿಂದ ಗ್ರೆಗೋರಿಯನ್ ಕ್ಯಾಲೆಂಡರ್ ಜಾರಿಗೆ ಬಂದಿದೆ.

ಮೊದಲ ಲೀಪ್ ಇಯರ್ ಯಾವಾಗ ಆಚರಿಸಲಾಯಿತು
ಯೇಸು ಪ್ರಭುವಿನ ಜನಿಸಿದ ನಾಲ್ಕು ವರ್ಷಗಳ ಬಳಿಕ ಮೊಟ್ಟಮೊದಲ ಲೀಪ್ ಇಯರ್ ಆಚರಿಸಲಾಯಿತು.

ಲೀಪ್ ಇಯರ್ ಆಚರಿಸದೆ ಹೋದಲ್ಲಿ ಏನಾಗುತ್ತದೆ
ಒಂದು ವೇಳೆ ಲೀಪ್ ಇಯರ್ ಆಚರಿಸದೆ ಹೋದಲ್ಲಿ ನಾವು ಪ್ರತಿ ವರ್ಷ ಸೌರ ಮಂಡಲದ ಕಾಲಮಾನಕ್ಕಿಂತ 6 ಗಂಟೆ ಮುಂದಕ್ಕೆ ಹೋಗುತ್ತೇವೆ. ಹೀಗಾಗಿ 10 ವರ್ಷಗಳ ಬಳಿಕ 25 ದಿನಗಳು ನಾವು ಮುಂದೆ ಹೋಗುತ್ತೇವೆ ಮತ್ತು ಹವಾಮಾನ ಬದಲಾವಣೆಯ ಕುರಿತು ನಮಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಲೀಪ್ ಇಯರ್ ಆಚರಿಸುವುದು ಅನಿವಾರ್ಯವಾಗಿದೆ.