History of Bidriware: ನಮ್ಮ ರಾಜ್ಯದ ಬೀದರ್‌ನಿಂದ ಉಗಮವಾದ ಬಿದರಿ ಕಲೆ, ಭಾರತದ ಅತ್ಯಂತ ವಿಶಿಷ್ಟ ಲೋಹ ಕರಕುಶಲ ಕಲೆಗಳಲ್ಲಿ ಒಂದಾಗಿದೆ. ಈ ಕಲೆಯ ಹೆಸರು ಬೀದರ್ ನಗರದಿಂದ ಬಂದಿದ್ದು, 14ನೇ ಶತಮಾನದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಇದು ಜನ್ಮತಾಳಿತು. ಬಿದರಿ ಕಲೆಯ ವಿಶೇಷತೆಯೆಂದರೆ ತಾಮ್ರ ಮತ್ತು ಸತುವಿನ ಮಿಶ್ರಲೋಹದ ಮೇಲೆ ಬೆಳ್ಳಿಯ ಒಳಕೊರೆತ (ಇನ್‌ಲೇ) ಕೆಲಸ, ಇದು ಕಪ್ಪು ಹಿನ್ನೆಲೆಯಲ್ಲಿ ಆಕರ್ಷಕವಾಗಿ ಹೊಳೆಯುತ್ತದೆ. ಈ ಕಲಾಕೃತಿಗಳು ಸೂಕ್ಷ್ಮ ಕೆತ್ತನೆ ಮತ್ತು ಕಲಾತ್ಮಕತೆಯಿಂದ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿವೆ.
ಬಿದರಿ ಕಲೆ ಹುಟ್ಟಿದ್ದು ಹೇಗೆ?
ಬಿದರಿ ಕಲೆಯ ಇತಿಹಾಸವು ಪರ್ಷಿಯನ್ ಕರಕುಶಲಿಗಳಿಗೆ ಸಂಬಂಧಿಸಿದೆ ಎಂದು ಇತಿಹಾಸಕಾರರು ತಿಳಿಸುತ್ತಾರೆ. 14ನೇ ಶತಮಾನದಲ್ಲಿ, ಬಹಮನಿ ಸುಲ್ತಾನ್ ಅಹ್ಮದ್ ಶಾ (1422-1436) ಇರಾನ್‌ನಿಂದ ಕರಕುಶಲಿಯಾದ ಅಬ್ದುಲ್ಲಾ ಬಿನ್ ಕೈಸರ್‌ನನ್ನು ಆಹ್ವಾನಿಸಿದನು. ಅವನು ಪರ್ಷಿಯನ್ ಲೋಹಕಲೆಯ ತಂತ್ರಗಳಾದ ‘ತಾರಿಖ್’ ಮತ್ತು ‘ತಫ್ಶಿರ್ ಶೈಲಿಗಳನ್ನು ಸ್ಥಳೀಯ ಕರಕುಶಲಿಗಳಿಗೆ ಕಲಿಸಿದನು. ಇದು ಭಾರತೀಯ ಕಲಾತ್ಮಕತೆಯೊಂದಿಗೆ ಸಂಯೋಜನೆಗೊಂಡು ಬಿದರಿ ಕಲೆಗೆ ಜನ್ಮನೀಡಿತು. ಈ ಕಲೆಯಲ್ಲಿ ತಯಾರಾದ ಕನ್ನಡಿಗಳು, ಒಡವೆಗಳು, ದೀವಟಿಗೆ ಹಿಡಿಕೆಗಳು, ಧಾರ್ಮಿಕ ವಿಗ್ರಹಗಳು ಪರ್ಷಿಯನ್, ತುರ್ಕಿ ಮತ್ತು ಭಾರತೀಯ ಶೈಲಿಗಳ ಸಮ್ಮಿಲನವನ್ನು ಪ್ರತಿಬಿಂಬಿಸುತ್ತವೆ.
Bidri paperweight. This elegant art from Bidar in north Karnataka consists of fine silver inlay on darkened zinc-copper alloy. Traditionally, Bidri artists use soil from inside the centuries-old Bidar fort to blacken the surface of the material. #traditionalarts pic.twitter.com/caABDI9GZT
— Uma Mahadevan Dasgupta (@readingkafka) October 24, 2021
ಬಿದರಿ ಕಲೆಯ ತಯಾರಿಕೆಯ ಪ್ರಕ್ರಿಯೆಯೇ ಇದರ ವಿಶಿಷ್ಟತೆಯನ್ನು ಎತ್ತಿಹೇಳುತ್ತದೆ. ಕಲಾವಿದರು 80% ತಾಮ್ರ ಮತ್ತು 20% ಸತುವಿನ ಮಿಶ್ರಲೋಹವನ್ನು ತಯಾರಿಸಿ, ಅದರ ಮೇಲೆ ಸೂಕ್ಷ್ಮವಾಗಿ ಕೆತ್ತನೆ ಮಾಡುತ್ತಾರೆ. ಆನಂತರ, ಬೆಳ್ಳಿಯ ತಂತಿಗಳನ್ನು ಒಳಕೊರೆತು, ಬೀದರ್‌ನ ವಿಶಿಷ್ಟ ಕೆಂಪು ಮಣ್ಣಿನ ಮಿಶ್ರಣದಿಂದ ಕಪ್ಪು ಫಿನಿಶ್‌ನ್ನು ಸೃಷ್ಟಿಸುತ್ತಾರೆ. ಈ ಮಣ್ಣಿನ ರಾಸಾಯನಿಕ ಗುಣವು (ಅಮೋನಿಯಂ ಕ್ಲೋರೈಡ್‌ನಿಂದ ಉಂಟಾಗುವ) ವಸ್ತುಗಳಿಗೆ ಆಕರ್ಷಕ ಕಾಂತಿಯನ್ನು ನೀಡುತ್ತದೆ. ಈ ಪ್ರಕ್ರಿಯೆಗೆ ತಿಂಗಳುಗಟ್ಟಲೆ ಸಮಯ ಮತ್ತು ಅಪಾರ ಶ್ರಮ ಬೇಕಾಗುತ್ತದೆ.
16ನೇ ಶತಮಾನದಲ್ಲಿ ಬರಾಕಾ ಸುಲ್ತಾನರ ಆಳ್ವಿಕೆಯಲ್ಲಿ ಬಿದರಿ ಕಲೆ ಉತ್ತುಂಗಕ್ಕೇರಿತು. ಈ ಕಾಲದಲ್ಲಿ, ಈ ಕಲಾಕೃತಿಗಳು ರಾಜಮನೆತನಗಳಿಗೆ ಉಡುಗೊರೆಯಾಗಿ, ಯುರೋಪ್ ಮತ್ತು ಮಧ್ಯಪ್ರಾಚ್ಯಕ್ಕೆ ರಫ್ತಾಗುತ್ತಿದ್ದವು. 18ನೇ ಶತಮಾನದಲ್ಲಿ ಬೀದರ್ ಹೈದರಾಬಾದ್‌ನ ನಿಜಾಮರ ಆಳ್ವಿಕೆಗೆ ಒಳಪಟ್ಟಾಗಲೂ ಈ ಕಲೆ ಜನಪ್ರಿಯವಾಗಿತ್ತು. 2006ರಲ್ಲಿ, ಬಿದರಿ ಕಲೆಗೆ ಭೌಗೋಳಿಕ ಸೂಚಕ( ಜಿಐ ಟ್ಯಾಗ್) ಮಾನ್ಯತೆ ಲಭಿಸಿಸಿದ್ದರಿಂದಾಗಿ, ಇದರ ಸಾಂಸ್ಕೃತಿಕ ಮೌಲ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ.
ಕ್ಷೀಣಿಸುತ್ತಿರುವ ಬಿದರಿ ಕಲೆ:
ಆಧುನಿಕ ಕಾಲದಲ್ಲಿ ಈ ಕಲೆ ಕ್ಷೀಣಿಸುತ್ತಿದೆ. ಸೂಕ್ಷ್ಮ ಕೆಲಸಕ್ಕೆ ತಗಲುವ ಸಮಯ, ಕಡಿಮೆ ಆದಾಯ, ಯಂತ್ರೋತ್ಪಾದಿತ ವಸ್ತುಗಳ ಸ್ಪರ್ಧೆ ಮತ್ತು ಮಾರುಕಟ್ಟೆ ಕೊರತೆಯಿಂದ ಕರಕುಶಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬೀದರ್‌ನಲ್ಲಿ ಒಂದು ಕಾಲದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ಈ ಕಲೆಯಲ್ಲಿ ತೊಡಗಿದ್ದರೆ, ಈಗ ಕೇವಲ ಕೆಲವೇ ಉಳಿದಿವೆ. ಸರ್ಕಾರದಿಂದ ಸೂಕ್ತ ತರಬೇತಿ ಕೇಂದ್ರಗಳು ಮತ್ತು ಆರ್ಥಿಕ ಬೆಂಬಲದ ಕೊರತೆಯನ್ನು ಕಲಾವಿದರು ದೂರುತ್ತಾರೆ.
Unveil the beauty of bidri art, a mesmerizing ancient craft featuring intricate silver inlay on blackened alloy!
Explore Bidar's heritage through this exquisite form, celebrating tradition with creativity.#taajoo #bidriart #indiancraftsmanship #handmadeart #culturalheritage pic.twitter.com/zYekOgQlx9
— Taajoo (@Taajooindia) November 29, 2023
ಈಗಲೂ ನಮ್ಮ ರಾಜ್ಯದ ಕೆಲವು ಸಂಸ್ಥೆಗಳಾದ ಕರ್ನಾಟಕ ಚಿತ್ರಕಲಾ ಪರಿಷತ್, ಲಲಿತ ಕಲಾ ಅಕಾಡೆಮಿ ಮತ್ತು ಕರಕುಶಲ ಮೇಳಗಳು ಈ ಕಲೆಯ ಪುನರುತ್ಥಾನಕ್ಕೆ ಶ್ರಮಿಸುತ್ತಿವೆ. ಕಾರ್ಯಾಗಾರಗಳು, ಪ್ರದರ್ಶನಗಳು ಮತ್ತು ಆನ್‌ಲೈನ್ ಮಾರುಕಟ್ಟೆಗಳ ಮೂಲಕ ಈ ಕಲೆಗೆ ಜೀವ ತುಂಬಲು ಪ್ರಯತ್ನಗಳು ನಡೆಯುತ್ತಿವೆ.
ಬಿದರಿ ಕಲೆಯ ಇತಿಹಾಸವು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಒಂದು ಜೀವಂತ ಸಾಕ್ಷಿಯಾಗಿದೆ. ಇದರ ಸೌಂದರ್ಯ ಮತ್ತು ಕಲಾತ್ಮಕತೆಯನ್ನು ಉಳಿಸಲು ಸರ್ಕಾರ, ಕಲಾವಿದರು ಮತ್ತು ಸಾರ್ವಜನಿಕರ ಸಹಕಾರ ಅಗತ್ಯ. ಈ ಅಪರೂಪದ ಕಲೆಯನ್ನು ಭಾವಿಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









