Forgotten History: ಇತಿಹಾಸದ ಪುಟಗಳಲ್ಲಿ ಕೆಲವೊಮ್ಮೆ ಅಪರೂಪದ ಮತ್ತು ಆಶ್ಚರ್ಯಕರ ಕಥೆಗಳು ಸಿಗುತ್ತವೆ. ಅಂತಹ ಒಂದು ಕಥೆಯೇ ಮರಾಠಿ ಮೂಲದ ಬ್ರಾಹ್ಮಣನೊಬ್ಬ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಮಹಾರಾಷ್ಟ್ರದಲ್ಲಿ ಸಾಮ್ರಾಜ್ಯವೊಂದನ್ನು ಸ್ಥಾಪಿಸಿದ ಕಥೆ.
ಹೌದು, ಅಷ್ಟಕ್ಕೂ ಈಗ ನಾವು ಹೇಳಹೊರಟಿರುವ ಕಥೆ ಬೇರೆ ಯಾರದ್ದೂ ಅಲ್ಲ ತಿಮಾ ಭಟ್..! ಇಸ್ಲಾಂ ಧರ್ಮಕ್ಕೆ ಮತಾಂತರವಾದ ನಂತರ ಮಲಿಕ್ ಹಸನ್ ಬಹ್ರಿ ಎಂದು ಕರೆಯಲ್ಪಟ್ಟ ತಿಮಾ ಭಟ್, ಮುಂದೆ ಅವರು ಸ್ಥಾಪಿಸಿದ ಅಹ್ಮದ್‌ನಗರ ಸಾಮ್ರಾಜ್ಯವು ಡೆಕ್ಕನ್ ಪ್ರದೇಶದಲ್ಲಿ ಮರಾಠರ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.
ತಿಮಾ ಭಟ್‌ರ ಆರಂಭಿಕ ಜೀವನ ಮತ್ತು ಮತಾಂತರ:
ಮರಾಠಿ ಮೂಲದ ಬ್ರಾಹ್ಮಣರಾಗಿದ್ದ ತಿಮಾ ಭಟ್ ಅವರು ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಬೆಳೆದವರು.1422ರಲ್ಲಿ ಬಹಮನಿ ಸಾಮ್ರಾಜ್ಯದ ಸೇನಾಪತಿ ಅಹ್ಮದ್ ಶಾ ವಾಲಿ ಅವರಿಗೆ ಒತ್ತೆಯಾಳಾಗಿ ಸೆರೆ ಸಿಕ್ಕ ಸಮಯದಲ್ಲಿ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಯಿತು.ಈ ಘಟನೆಯನ್ನು ತಿಮಾ ಭಟ್ ಅವರ ಜೀವನದಲ್ಲಿಯೇ ಮಹತ್ವದ ತಿರುವು ಎಂದು ಹೇಳಬಹುದು. ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾದ ನಂತರ ಅವರಿಗೆ ಮಲಿಕ್ ಹಸನ್ ಬಹ್ರಿ ಎಂಬ ಹೊಸ ಹೆಸರನ್ನು ನೀಡಿ ಅವರನ್ನು ಆರಂಭದಲ್ಲಿ ಅವರನ್ನು ಸೇನಾ ಗುಲಾಮರಾಗಿ ಸೇರಿಸಲಾಯಿತು, ಆದರೆ ಕಾಲಾಂತರದಲ್ಲಿ ಅವರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವನ್ನು ಗಮನಿಸಿದ ಆ ಸುಲ್ತಾನದ ರಾಜರು ಅವರಿಗೆ ಉನ್ನತ ಸ್ಥಾನವನ್ನು ನೀಡಿದರು.
ಬಹಮನಿ ಸಾಮ್ರಾಜ್ಯದಲ್ಲಿ ಉದಯ:
1463ರಲ್ಲಿ ಮಲಿಕ್ ಹಸನ್ ಬಹ್ರಿಯವರನ್ನು ಬಹಮನಿ ಸುಲ್ತಾನನ ವೈಯಕ್ತಿಕ ಸೇವಕರಾಗಿ ನೇಮಿಸಲಾಯಿತು. ತಮ್ಮ ಬುದ್ದಿಮತ್ತೆ ಮತ್ತು ಚಾಕ್ಯಚಕ್ಯತೆಯಿಂದಾಗಿ ಅವರು ಸುಲ್ತಾನನ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾದರು. 1471ರ ಹೊತ್ತಿಗೆ ಅವರನ್ನು ಅಮೀರ್ ಆಗಿ ನೇಮಿಸಿ 2000 ಕುದುರೆ ಸೈನಿಕರ ಸೇನೆಯ ಉಸ್ತುವಾರಿಯನ್ನು ವಹಿಸಲಾಯಿತು. 1475ರಲ್ಲಿ ಅವರು ತೆಲಂಗಾಣದ ಗವರ್ನರ್ ಆಗಿ ನೇಮಕಗೊಂಡರು ಮತ್ತು ನಂತರ ಬಹಮನಿ ಸಾಮ್ರಾಜ್ಯದ ಪ್ರಧಾನ ಮಂತ್ರಿ (ಪೇಶ್ವಾ) ಸ್ಥಾನವನ್ನು ಅಲಂಕರಿಸಿದರು. ಈ ರೀತಿ ಸಾಮಾನ್ಯ ಬ್ರಾಹ್ಮಣನಾಗಿ ಹುಟ್ಟಿದ ತಿಮಾ ಭಟ್, ಮುಂದೆ ಮಲಿಕ್ ಹಸನ್ ಬಹ್ರಿಯಾಗಿ ಇಸ್ಲಾಮಿಕ್ ಸಾಮ್ರಾಜ್ಯದಲ್ಲಿ ಉನ್ನತ ಸ್ಥಾನ ಪಡೆದಿದ್ದು ನಿಜಕ್ಕೂ ರೋಚಕ ಎಂದೇ ಹೇಳಬಹುದು.
ಅಹ್ಮದ್‌ನಗರ ಸಾಮ್ರಾಜ್ಯದ ಸ್ಥಾಪನೆ:
ಮಲಿಕ್ ಹಸನ್ ಬಹ್ರಿಯವರ ಮಗ ಅಹ್ಮದ್, ತಂದೆಯ ಮರಣದ ನಂತರ ಬಹಮನಿ ಸಾಮ್ರಾಜ್ಯದಿಂದ ಸ್ವಾತಂತ್ರ್ಯವನ್ನು ಘೋಷಿಸಿ, ಅಹ್ಮದ್‌ನಗರ ಸಂಸ್ಥಾನವನ್ನು ಸ್ಥಾಪಿಸಿದರು. ಈ ಸಂಸ್ಥಾನವು ಡೆಕ್ಕನ್ ಪ್ರದೇಶದಲ್ಲಿ ಗುಜರಾತ್ ಮತ್ತು ಬಿಜಾಪುರ ಸಂಸ್ಥಾನಗಳ ನಡುವೆ ಸ್ಥಾಪಿತವಾಯಿತು. ಅಹ್ಮದ್‌ನಗರ ಸಂಸ್ಥಾನವು ಮರಾಠರ ಸಂಸ್ಕೃತಿಯನ್ನು ತನ್ನ ಆಡಳಿತದಲ್ಲಿ ಸಂಪೂರ್ಣವಾಗಿ ಸ್ವೀಕರಿಸಿತು. ಅವರ ಆಸ್ಥಾನದಲ್ಲಿ ಮರಾಠರಾದ ಭೋಂಸಲೆ ಮತ್ತು ಜಾಧವ್ ಕುಟುಂಬಗಳು ಪ್ರಮುಖ ಸೇನಾಪತಿಗಳಾಗಿ ಸೇವೆ ಸಲ್ಲಿಸಿದರು.
The Brahmin Sultan of Maharashtra
In 1422, a young Marathi-speaking Brahmin called Tima Bhat, who had grown up in the Vijayanagara Empire, was taken hostage by the Bahmani general Ahmad Shah Wali and converted to Islam by force. pic.twitter.com/EIQXBUVOC1
— Sam Dalrymple (@SamDalrymple123) April 8, 2025
ವಾಸ್ತುಶಿಲ್ಪ:
ಅಹ್ಮದ್‌ನಗರ ಸುಲ್ತಾನತದ ವಾಸ್ತುಶಿಲ್ಪವು ಇಸ್ಲಾಮೀ ಮತ್ತು ಮರಾಠಿ ಸಂಸ್ಕೃತಿಗಳ ಸಂಗಮವನ್ನು ಪ್ರತಿಬಿಂಬಿಸುತ್ತದೆ. ಸುಲ್ತಾನತದ ಅವಧಿಯಲ್ಲಿ ನಿರ್ಮಿಸಲಾದ ಸಮಾಧಿಗಳು ಮತ್ತು ಕಟ್ಟಡಗಳು ಈ ಸಾಂಸ್ಕೃತಿಕ ಸಂಶ್ಲೇಷಣೆಯ ಸಾಕ್ಷಿಯಾಗಿವೆ. ಉದಾಹರಣೆಗೆ, ಶಿವಾಜಿ ಮಹಾರಾಜರ ಅಜ್ಜ ಮಾಲೋಜಿ ಭೋಂಸಲೆಯವರ ಸಮಾಧಿಯು ಎಲ್ಲೋರಾದಲ್ಲಿ ಕಂಡುಬರುತ್ತದೆ. ಇದೇ ರೀತಿ, ಸುಲ್ತಾನತದ ಮತ್ತೊಬ್ಬ ಪ್ರಮುಖ ಸೇನಾಪತಿ ಮಲಿಕ್ ಅಂಬರ್‌ನ ಸಮಾಧಿಯೂ ಇದೇ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಈ ಸಮಾಧಿಗಳು ಗುಮ್ಮಟಾಕಾರದ ಮೇಲ್ಛಾವಣಿ ಮತ್ತು ಸಂಕೀರ್ಣವಾದ ಕೆತ್ತನೆಗಳನ್ನು ಹೊಂದಿದ್ದು, ಇಸ್ಲಾಮೀ ವಾಸ್ತುಶಿಲ್ಪದ ಜೊತೆಗೆ ಸ್ಥಳೀಯ ಮರಾಠಿ ಪ್ರಭಾವವನ್ನು ಕಾಣಬಹುದಾಗಿದೆ.
ಮರಾಠ ಸಾಮ್ರಾಜ್ಯದ ಮೂಲ:
ಅಹ್ಮದ್‌ನಗರ ಸಂಸ್ಥಾನವು ಮರಾಠ ಸಾಮ್ರಾಜ್ಯದ ಉಗಮಕ್ಕೆ ಒಂದು ಆಧಾರ ಸ್ಥಂಬ ಎಂದೇ ಹೇಳಬಹುದು. ಈ ಸಾಮ್ರಾಜ್ಯದಲ್ಲಿ ಮರಾಠರ ಪ್ರಾಬಲ್ಯವು ಇಸ್ಲಾಮೀ ಸಂಸ್ಕೃತಿಯೊಂದಿಗೆ ಸ್ಥಳೀಯ ಸಂಪ್ರದಾಯಗಳನ್ನು ಮೇಳೈಸಿತು. ಈ ಸುಲ್ತಾನತದ ಸೇನಾಪತಿಗಳಾದ ಮಲಿಕ್ ಅಂಬರ್ ಮತ್ತು ಮಾಲೋಜಿ ಭೋಂಸಲೆ ಮೊಘಲರ ವಿರುದ್ಧ ದೊಡ್ಡ ಪ್ರತಿರೋಧವನ್ನು ಒಡ್ಡಿದರು. ಈ ಪ್ರತಿರೋಧವು ನಂತರ ಶಿವಾಜಿ ಮಹಾರಾಜರ ಮರಾಠ ಸಾಮ್ರಾಜ್ಯದ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು. ಇದರ ಜೊತೆಗೆ, ಅಹ್ಮದ್‌ನಗರ ಸುಲ್ತಾನತದಲ್ಲಿ ರಚಿಸಲಾದ ಮೊದಲ ಹೋಳಿ ಚಿತ್ರವು ಸುಲ್ತಾನನನ್ನು ಪಿಚಕಾರಿಗಳಿಂದ ಆಚರಿಸುತ್ತಿರುವ ದೃಶ್ಯವನ್ನು ಚಿತ್ರಿಸುತ್ತದೆ, ಇದು ಸಾಂಸ್ಕೃತಿಕ ಸಂಶ್ಲೇಷಣೆಯ ಮತ್ತೊಂದು ಉದಾಹರಣೆಯಾಗಿದೆ.
ತಿಮಾ ಭಟ್‌ರಿಂದ ಮಲಿಕ್ ಹಸನ್ ಬಹ್ರಿಯಾಗಿ, ಮತ್ತು ಅವರ ಮಗ ಅಹ್ಮದ್‌ರಿಂದ ಅಹ್ಮದ್‌ನಗರ ಸಾಮ್ರಾಜ್ಯದ ಸ್ಥಾಪನೆಯವರೆಗಿನ ಪಯಣವು ಡೆಕ್ಕನ್ ಪ್ರದೇಶದ ಸಂಕೀರ್ಣ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಬಿಂಬಿಸುತ್ತದೆ. ಒಬ್ಬ ಬ್ರಾಹ್ಮಣನಾಗಿ ಹುಟ್ಟಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಒಂದು ಸಾಮ್ರಾಜ್ಯವನ್ನು ಸ್ಥಾಪಿಸಿ, ಮರಾಠ ಸಾಮ್ರಾಜ್ಯದ ಉಗಮಕ್ಕೆ ಕಾರಣವಾದ ತಿಮಾ ಭಟ್ ಅವರ ಈ ಕಥೆ ಇತಿಹಾಸದಲ್ಲಿ ಒಂದು ಅಪರೂಪದ ರೋಚಕ ಅಧ್ಯಾಯವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









