Forgotten History: ಇತಿಹಾಸದ ಪುಟಗಳಲ್ಲಿ ಕೆಲವೊಮ್ಮೆ ಆಶ್ಚರ್ಯಕರ ಕಥೆಗಳು ಮರೆತುಹೋಗಿರುತ್ತವೆ. ಅಂತಹ ಒಂದು ರೋಚಕ ಕಥೆಯೇ ಮಲಿಕ್ ಅಂಬರ್ ಎಂಬ ಆಫ್ರಿಕಾದ ಇಥಿಯೋಪಿಯಾದ ಗುಲಾಮನದು. 1548ರಲ್ಲಿ ಜನಿಸಿದ ಈ ವ್ಯಕ್ತಿ, ಒಬ್ಬ ಸಾಮಾನ್ಯ ಗುಲಾಮನಾಗಿ ಜೀವನ ಆರಂಭಿಸಿ, ತನ್ನ ಬುದ್ಧಿವಂತಿಕೆ, ಶೌರ್ಯ ಮತ್ತು ಆಡಳಿತ ಕೌಶಲದಿಂದ ಭಾರತದ ದಕ್ಕನ್ ಪ್ರದೇಶದಲ್ಲಿ ಅಹ್ಮದ್‌ನಗರ ಸಂಸ್ಥಾನದ ಪ್ರಧಾನಿಯಾಗಿ ಆಡಳಿತ ನಡೆಸಿದ ಕೀರ್ತಿ ವ್ಯಕ್ತಿ ಮಲಿಕ್ ಅಂಬರ್ ಗೆ ಸಲ್ಲುತ್ತದೆ. ಈ ಸಾಹಸಗಾಥೆಯಿಂದಾಗಿಯೇ ಅವನ ಹೆಸರು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ.
ಗುಲಾಮನಿಂದ ಪ್ರಧಾನಿವರೆಗೆ..
ಇಥಿಯೋಪಿಯಾದ ಹರರ್‌ನಲ್ಲಿ ಜನಿಸಿದ ಮಲಿಕ್ ಅಂಬರ್ ಗೆ ಆರಂಭದಲ್ಲಿ ಚಾಪು ಎಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಇಥಿಯೋಪಿಯಾದಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ರಾಜ್ಯಗಳು ತಮ್ಮ ಗುಲಾಮರನ್ನು ದಕ್ಷಿಣದ ಕಂಬಾಟಾ ಪ್ರದೇಶದಂತಹ ಪ್ರಾಂತ್ಯಗಳಿಂದ ಸಂಗ್ರಹಿಸುತ್ತಿದ್ದವು. ಆಗ ಅವನು ಇಸ್ಲಾಂಗೆ ಮತಾಂತರಗೊಂಡನು. ಇದಾದ ನಂತರ ಯೆಮೆನ್‌ನ ಅಲ್-ಮುಖಾದಲ್ಲಿ ಮಾರಾಟ ಮಾಡಿ ಬಾಗ್ದಾದ್‌ನ ಗುಲಾಮರ ಮಾರುಕಟ್ಟೆಗೆ ಅವನನ್ನು ಕರೆತರಲಾಯಿತು. ಅಲ್ಲಿ ಮೆಕ್ಕಾದ ಕಾಜಿ ಅಲ್-ಕುದಾತ್‌ಗೆ ಮಾರಾಟವಾದ ಅವನಿಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡಲಾಯಿತು. ಇದೆ ವೇಳೆ ಅವನ ಬುದ್ಧಿವಂತಿಕೆಯನ್ನು ಗುರುತಿಸಿದ ಮೀರ್ ಕಾಸಿಮ್ ಅಲ್-ಬಾಗ್ದಾದಿ 'ಅಂಬರ್' ಎಂಬ ಹೆಸರನ್ನು ನೀಡಿ, ಅವನನ್ನು ಭಾರತದ ಡೆಕ್ಕನ್ ಪ್ರದೇಶಕ್ಕೆ ಕರೆತಂದನು.
![]()
ಫೋಟೋ: (ಮಲಿಕ್ ಅಂಬರ್ 1548–1626)
ಡೆಕ್ಕನ್ ನಲ್ಲಿ ಉದಯ
ಭಾರತಕ್ಕೆ ಆಗಮಿಸಿದ ಅಂಬರ್‌ನನ್ನು ಚಂಗೀಜ್ ಖಾನ್ ಎಂಬ ಮಾಜಿ ಹಬ್ಶಿ ಗುಲಾಮ ಖರೀದಿಸಿದನು. ಚಂಗೀಜ್ ಖಾನ್ ಅಹ್ಮದ್‌ನಗರ ಸುಲ್ತಾನೇಟ್‌ನ ಪೇಶ್ವಾ (ಪ್ರಧಾನ ಮಂತ್ರಿ) ಆಗಿದ್ದವನು. ಆದರೆ ಅವರ ಮರಣದ ನಂತರ ಅಂಬರ್ ಸ್ವತಂತ್ರನಾದನು ಮತ್ತು ಅಹ್ಮದ್‌ನಗರದ ಸೇನೆಯಲ್ಲಿ ಸೇವೆ ಸಲ್ಲಿಸತೊಡಗಿದನು. ತನ್ನ ಸಾಮರ್ಥ್ಯದಿಂದ ಅವನು ಶೀಘ್ರವಾಗಿ ಮೇಲೇರಿ 50,000ಕ್ಕೂ ಹೆಚ್ಚು ಸೈನಿಕರನ್ನೊಳಗೊಂಡ ಭಾಡಿಗೆ ಸೈನ್ಯವನ್ನು ಕಟ್ಟಿದನು. ಈ ಸಾಧನೆಯಿಂದಾಗಿ ಅವನಿಗೆ 'ಮಲಿಕ್' (ರಾಜ) ಎಂಬ ಬಿರುದು ಲಭಿಸಿತು. ದಕ್ಕನ್‌ನ ಸ್ಥಳೀಯ ರಾಜರು ಅವನ ಸೇವೆಯನ್ನು ಬಳಸಿಕೊಂಡರು, ಮತ್ತು ಅವನು ಅಹ್ಮದ್‌ನಗರ ಸುಲ್ತಾನೇಟ್‌ನ ಪ್ರಧಾನಿಯಾಗಿ ಆಯ್ಕೆಯಾದನು.
ಗೆರಿಲ್ಲಾ ಯುದ್ಧದ ಮಾಸ್ಟರ್‌ಮೈಂಡ್
1600 ರಿಂದ 1626 ರವರೆಗೆ ಮಲಿಕ್ ಅಂಬರ್ ಅಹ್ಮದ್‌ನಗರ ಸುಲ್ತಾನೇಟ್‌ನ ಸೈನ್ಯಾಧಿಕಾರಿಯಾಗಿ ಆಗಿ ಆಡಳಿತ ನಡೆಸಿದನು. ಈ ಅವಧಿಯಲ್ಲಿ ಅವನು ಮುರ್ತಜಾ ನಿಜಾಮ್ ಶಾ II ರ ಶಕ್ತಿಯನ್ನು ಹೆಚ್ಚಿಸಿದನು. ತನ್ನ ಸೈನ್ಯವನ್ನು 150 ಕುದುರೆ ಸೈನಿಕರಿಂದ 7000ಕ್ಕೆ ವಿಸ್ತರಿಸಿದ ಅವನು, ಮುಘಲರ ದಾಳಿಗಳನ್ನು ತಡೆಗಟ್ಟಲು ದೊಡ್ಡ ಸೈನ್ಯವನ್ನು ಸಿದ್ಧಪಡಿಸಿದನು. 1610 ರ ಹೊತ್ತಿಗೆ ಅವನ ಸೈನ್ಯದಲ್ಲಿ 10,000 ಹಬ್ಶಿಗಳು (ಆಫ್ರಿಕಾದವರು) ಮತ್ತು 40,000 ದಕ್ಕನಿಗಳು ಸೇರಿದ್ದರು. ಮುಘಲ್ ಚಕ್ರವರ್ತಿ ಜಹಾಂಗೀರ್‌ನ ಆಕ್ರಮಣಗಳನ್ನು ಅವನು ಯಶಸ್ವಿಯಾಗಿ ಎದುರಿಸಿದನು. ಜಹಾಂಗೀರ್ ಅಂಬರ್‌ನನ್ನು ತನ್ನ ಪ್ರಮುಖ ಶತ್ರುವೆಂದು ಭಾವಿಸಿ ಟೀಕಿಸಿದ್ದನು. ಅಂಬರ್ ದಕ್ಕನ್‌ನಲ್ಲಿ ಗೆರಿಲ್ಲಾ ಯುದ್ಧ ತಂತ್ರವನ್ನು ಪರಿಚಯಿಸಿದ್ದು ಮುಘಲರಿಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿತು.
ಆಡಳಿತ ಮತ್ತು ಕೊಡುಗೆಗಳು:
ಮಲಿಕ್ ಅಂಬರ್ ಕೇವಲ ಯೋಧನಾಗಿರದೆ ಒಬ್ಬ ಸಮರ್ಥ ಆಡಳಿತಗಾರನೂ ಆಗಿದ್ದನು. ಅವನು ದಕ್ಕನ್‌ನ ಭೂ ಆದಾಯ ವ್ಯವಸ್ಥೆಯನ್ನು ಸುಧಾರಿಸಿದನು, ಇದು ಮುಂದಿನ ಆಡಳಿತಗಳಿಗೆ ಮಾದರಿಯಾಯಿತು. ಅವನು ಖಡಕಿ (ಈಗಿನ ಔರಂಗಾಬಾದ್) ಎಂಬ ಹೊಸ ನಗರವನ್ನು ಸ್ಥಾಪಿಸಿದನು ಮತ್ತು ಅಹ್ಮದ್‌ನಗರದ ರಾಜಧಾನಿಯನ್ನು ಜುನ್ನಾರ್‌ಗೆ ಸ್ಥಳಾಂತರಿಸಿದನು. ಔರಂಗಾಬಾದ್‌ನ ನೆಹೆರ್ ನೀರಾವರಿ ವ್ಯವಸ್ಥೆಯು ಅವನ ಎಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿ ಎನ್ನುವಂತಿದೆ.ಈ ವ್ಯವಸ್ಥೆಯನ್ನು ಕೇವಲ 15 ತಿಂಗಳಲ್ಲಿ ಪೂರ್ಣಗೊಳಿಸಲಾಯಿತು ಮತ್ತು 321 ವರ್ಷಗಳವರೆಗೆ ಯಾವುದೇ ನಿರ್ವಹಣೆ ಇಲ್ಲದೆ ಕಾರ್ಯನಿರ್ವಹಿಸಿತು. ಇದಲ್ಲದೆ, ಜಂಜಿರಾ ಕೋಟೆಯ ನಿರ್ಮಾಣದಲ್ಲಿ ಅವನ ಪಾತ್ರವು ಮರಾಠರು, ಮುಘಲರು ಮತ್ತು ಪೋರ್ಚುಗೀಸರ ದಾಳಿಗಳನ್ನು ತಡೆಗಟ್ಟುವಲ್ಲಿ ಸಿದ್ದಿಗಳಿಗೆ ನೆರವಾಯಿತು.

(ಮಲಿಕ್ ಅಂಬಾರ್ ಮತ್ತು ಮುರ್ತಾಜಾ ನಿಜಾಮ್ ಶಾಹಿ)
1626 ರಲ್ಲಿ 77 ವರ್ಷದ ವಯಸ್ಸಿನಲ್ಲಿ ಮಲಿಕ್ ಅಂಬರ್ ಮರಾಠರ ದಧಿವಾಡಿಯಾ ಚಾರಣ್‌ನೊಂದಿಗಿನ ಯುದ್ಧದಲ್ಲಿ ಮೃತಪಟ್ಟನು. ಅವನ ಮರಣದ ನಂತರ, ಅವನ ಪುತ್ರ ಫತೇಖಾನ್ ಆಡಳಿತವನ್ನು ಮುಂದುವರಿಸಿದನಾದರೂ, ಅವನ ತಂದೆಯಂತಾಗಲಿಲ್ಲ. ಹತ್ತು ವರ್ಷಗಳಲ್ಲಿ ಅಹ್ಮದ್‌ನಗರ ಸುಲ್ತಾನೇಟ್ ಮುಘಲರ ಆಳ್ವಿಕೆಗೆ ಒಳಪಟ್ಟಿತು. ಆದರೆ, ಮಲಿಕ್ ಅಂಬರ್‌ನ ಕೊಡುಗೆಗಳು ಔರಂಗಾಬಾದ್‌ನ ಸ್ಥಾಪನೆ, ನೀರಾವರಿ ವ್ಯವಸ್ಥೆ ಮತ್ತು ಜಂಜಿರಾ ಕೋಟೆಯಂತಹ ಸ್ಮಾರಕಗಳಲ್ಲಿ ಇಂದಿಗೂ ಪ್ರತಿಧ್ವನಿಸುತ್ತವೆ.
ಮಲಿಕ್ ಅಂಬರ್‌ನ ಜೀವನವು ಒಬ್ಬ ಗುಲಾಮನಿಂದ ಸಾಮ್ರಾಜ್ಯದ ಪ್ರಧಾನಿಯಾಗಿ ಮೇಲೇರಿದ ಅಪೂರ್ವ ಕಥೆಯಾಗಿದೆ. ಆಫ್ರಿಕಾದ ಇಥಿಯೋಪಿಯಾದಿಂದ ಭಾರತದ ದಕ್ಕನ್‌ಗೆ ಬಂದ ಅವನು, ತನ್ನ ಶೌರ್ಯ ಮತ್ತು ಬುದ್ಧಿವಂತಿಕೆಯಿಂದ ಮುಘಲರಂತಹ ಶಕ್ತಿಶಾಲಿ ಶತ್ರುಗಳನ್ನು ಎದುರಿಸಿದನು. ಅವನ ಆಡಳಿತ, ಶಿಕ್ಷಣ ಮತ್ತು ಕಲೆಗಳ ಪೋಷಣೆಯ ಪರಂಪರೆಯು ಇತಿಹಾಸದಲ್ಲಿ ಒಂದು ಅಮರ ಕಥೆಯಾಗಿ ಉಳಿದಿದೆ.
![]()
(ಖುಲ್ದಾಬಾದ್‌ನಲ್ಲಿರುವ ಮಲಿಕ್ ಅಂಬರ್ ಅವರ ಸಮಾಧಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









