ಹೋಳಿ ಹಬ್ಬದ ಆಚರಣೆಯ ಹಿಂದಿರುವ ಈ ವೈಜ್ಞಾನಿಕ ಸತ್ಯದ ಬಗ್ಗೆ ನಿಮಗೆಷ್ಟು ಗೊತ್ತು?

ಹೋಳಿ' ಹಬ್ಬವು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ. ಪರಸ್ಪರ ಬಣ್ಣಗಳನ್ನು ಎಸೆಯುವುದು ಈ ಹಬ್ಬದ ಸಂಕೇತವಾಗಿದೆ. 

Written by - Manjunath Naragund | Last Updated : Mar 13, 2025, 02:34 PM IST
  • ಮತ್ತೊಂದೆಡೆ ವಸಂತಕಾಲದಲ್ಲಿ ಹೊಸ ಜೀವನಕ್ಕೆ ದಾರಿ ಮಾಡಿಕೊಡಲು ಕಾಮನನ್ನು ಸುಡುತ್ತಾರೆ
  • ಇದರಲ್ಲಿ ಒಣಗಿದ ಮತ್ತು ಕೊಳಕಾದ ಬಟ್ಟೆಗಳನ್ನು ಎಲ್ಲವನ್ನೂ ಸುಡಲಾಗುತ್ತದೆ
  • ಈ ರೀತಿ ಕಾಮನ ದಹನದಿಂದ ಹೊರಹೊಮ್ಮುವ ಶಾಖವು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ದೇಹವನ್ನು ಶುದ್ಧಗೊಳಿಸುತ್ತದೆ
ಹೋಳಿ ಹಬ್ಬದ ಆಚರಣೆಯ ಹಿಂದಿರುವ ಈ ವೈಜ್ಞಾನಿಕ ಸತ್ಯದ ಬಗ್ಗೆ ನಿಮಗೆಷ್ಟು ಗೊತ್ತು?

ರಂಗಿನ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಿದೆ, ಹೋಳಿ ಆಡಲು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಅಂಗಡಿ ಮುಂಗಟ್ಟುಗಳೆಲ್ಲ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿವೆ. ಬಣ್ಣಗಳ ಹಬ್ಬವಾದ ಹೋಳಿಯನ್ನು ಭಾರತದ ವಿವಿಧ ಮೂಲೆಗಳಲ್ಲಿ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಯಾವುದೇ ಹಬ್ಬಗಳನ್ನಾದರೂ ನಮ್ಮ ಹಿರಿಯರು ಸುಮ್ಮನೇ ಮಾಡಿರುವುದಿಲ್ಲ, ಅದರ ಹಿಂದೆ ಬಲವಾದ ಕಾರಣವಿರುತ್ತದೆ. ಹೋಳಿ ಹಬ್ಬದ ಆಚರಣೆಯ ಹಿಂದೆಯೂ ಸಹ ಇದೇ ರೀತಿಯ ಪ್ರಮುಖ ವೈಜ್ಞಾನಿಕ ಕಾರಣವಿದೆ.

Add Zee News as a Preferred Source

ಹೋಳಿ' ಹಬ್ಬವು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ. ಪರಸ್ಪರ ಬಣ್ಣಗಳನ್ನು ಎಸೆಯುವುದು ಈ ಹಬ್ಬದ ಸಂಕೇತವಾಗಿದೆ. ಆದ್ದರಿಂದ, ಇದನ್ನು ಹೆಚ್ಚಾಗಿ ಬಣ್ಣಗಳ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬದ ಹಿಂದೆ ಕಾಮದೇವ(ಮನ್ಮಥ) ನ ದಂತಕಥೆ ಇದೆ. ಪುರಾಣಗಳ ಹೊರತಾಗಿ, ಈ ಹಬ್ಬವು ವೈಜ್ಞಾನಿಕ ಮಹತ್ವವನ್ನು ಹೊಂದಿದೆ. 

ಹೋಳಿ ಹಬ್ಬದ ಹಿಂದಿರುವ ವೈಜ್ಞಾನಿಕ ಕಾರಣ:

ಸಾಮಾನ್ಯವಾಗಿ ಹೋಳಿ ಹಬ್ಬವನ್ನು ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ಆಗಮನದ ನಡುವಿನ ಅವಧಿಯಾದ ವಸಂತ ಋತುವಿನಲ್ಲಿ ಆಚರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಅಷ್ಟೇ ಅಲ್ಲದೆ ಈಗಲೂ ಸಹ, ಚಳಿಗಾಲದಲ್ಲಿ ದಿನನಿತ್ಯ ಸ್ನಾನ ಮಾಡುವ ಜನರ ಸಂಖ್ಯೆ ಕಡಿಮೆ, ಆದ ಕಾರಣ ಅನೇಕ ಚರ್ಮದ ಸಮಸ್ಯೆಗಳು ಮತ್ತು ತ್ವಚೆಯ ಮೇಲೆ ದದ್ದುಗಳು ಕಂಡುಬರುತ್ತವೆ, ಮುಂದೆ ಇದು ತೀವ್ರವಾದ ಸೋಂಕುಗಳಿಗೆ ಕಾರಣವಾಗುತ್ತದೆ.ಅಷ್ಟೇ ಅಲ್ಲದೆ ಮಾನವ ದೇಹದಲ್ಲಿ ಅನಗತ್ಯ ಕಣಗಳ ಶೇಖರಣೆಯಾಗುತ್ತದೆ.ಈ ಸಮಸ್ಯೆಯನ್ನು ನಿವಾರಿಸಲು ಹೋಳಿಯ ಹೆಸರಿನಲ್ಲಿ ಅರಿಶಿಣ ಮತ್ತು ಇನ್ನಿತರ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತದೆ. ಚರ್ಮದ ಅರೋಗ್ಯವನ್ನು ಸುಧಾರಿಸುವ ಬಣ್ಣಗಳನ್ನು ಎರಚುತ್ತಾರೆ.

ಮತ್ತೊಂದೆಡೆ ವಸಂತಕಾಲದಲ್ಲಿ ಹೊಸ ಜೀವನಕ್ಕೆ ದಾರಿ ಮಾಡಿಕೊಡಲು ಕಾಮನನ್ನು ಸುಡುತ್ತಾರೆ. ಇದರಲ್ಲಿ ಒಣಗಿದ ಮತ್ತು ಕೊಳಕಾದ ಬಟ್ಟೆಗಳನ್ನು ಎಲ್ಲವನ್ನೂ ಸುಡಲಾಗುತ್ತದೆ.ಈ ರೀತಿ ಕಾಮನ ದಹನದಿಂದ ಹೊರಹೊಮ್ಮುವ ಶಾಖವು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ದೇಹವನ್ನು ಶುದ್ಧಗೊಳಿಸುತ್ತದೆ.ಹಳೆಯ ಕಾಲದಲ್ಲಿ ನೈಸರ್ಗಿಕವಾಗಿ ಸಿಗುವ ಹೂವು ಮತ್ತು ಎಲೆಗಳಿಂದ ಆರೋಗ್ಯಕರ ಬಣ್ಣಗಳನ್ನು ತಯಾರಿಸಲಾಗುತ್ತಿತ್ತು, ಅದ್ದರಿಂದ ಹೋಳಿ ಹಬ್ಬ ಆಚರಿಸುವುದರಿಂದ ಅರೋಗ್ಯ ದೃಷ್ಟಿಯಿಂದ ಅನೇಕ ಪ್ರಯೋಜನಗಳು ಜನರಿಗೆ ಸಿಗುತ್ತಿದವು. ಆದರೆ ಈಗ ಎಲ್ಲವೂ ಬದಲಾಗಿದೆ, ರಾಸಾಯನಿಕಗಳನ್ನು ಬಣ್ಣಗಳಲ್ಲಿ ಕೂಡಿಸಲಾಗುತ್ತಿದೆ. ಚರ್ಮಕ್ಕೆ ಹಾನಿಯುಂಟುಮಾಡುವ ಬಣ್ಣಗಳನ್ನು ಬಳಕೆ ಎಲ್ಲೆಡೆ ಹಾಚ್ಚಾಗಿದೆ. ಇದರಿಂದ ಒಟ್ಟಾರೆಯಾಗಿ ಮನುಷ್ಯನ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. 

(ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE Kannada News ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

 

About the Author

Trending News