Hindu ಧರ್ಮದಲ್ಲಿ 108 ಅಂಕ ಮಹತ್ವಪೂರ್ಣ ಎಂದು ಏಕೆ ಹೇಳಲಾಗುತ್ತದೆ? ಇಲ್ಲಿದೆ ಕಾರಣ

ಹಿಂದೂ ಧರ್ಮದಲ್ಲಿ 108  ಅಂಕಿ ತನ್ನದೇ ಆದ ಮಹತ್ವ ಹೊಂದಿದೆ. ರುದ್ರಾಕ್ಷದ ಜಪಮಾಲೆಯಲ್ಲಿ 108 ಮಣಿಗಳಿವೆ, ಮಂತ್ರಗಳನ್ನು 108 ಬಾರಿ ಜಪಿಸಲಾಗುತ್ತದೆ. ಹಾಗಾದರೆ, 108 ಸಂಖ್ಯೆಗೆ  ಹಿಂದೂ ಧರ್ಮದಲ್ಲಿ ಇಷ್ಟೊಂದು ಪ್ರಾಮುಖ್ಯತೆ ಹೊಂದಲು ಕಾರಣವೇನು?

Updated: Aug 9, 2020 , 09:58 PM IST
Hindu ಧರ್ಮದಲ್ಲಿ 108 ಅಂಕ ಮಹತ್ವಪೂರ್ಣ ಎಂದು ಏಕೆ ಹೇಳಲಾಗುತ್ತದೆ? ಇಲ್ಲಿದೆ ಕಾರಣ

108 ಅನ್ನು ಶಿವನ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಇದರ ಹಿಂದಿನ ಕಾರಣವೆಂದರೆ ಮುಖ್ಯ ಶಿವಲಿಂಗಗಳ ಸಂಖ್ಯೆ 108. ಎಲ್ಲಾ ಶೈವ ಪಂಥಗಳಲ್ಲಿ, ವಿಶೇಷವಾಗಿ ಲಿಂಗಾಯತ ಪಂಥಗಳಲ್ಲಿ ರುದ್ರಾಕ್ಷದ ಜಪಮಾಲೆಯಲ್ಲಿ 108 ಮಣಿಗಳಿವೆ.

ಗೌಡಿಯ ವೈಷ್ಣವ ಧರ್ಮದಡಿಯಲ್ಲಿ ವೃಂದಾವನದಲ್ಲಿ ಒಟ್ಟು 108 ಗೋಪಿಗಳನ್ನು ವಿವರಿಸಲಾಗಿದೆ. ಗೋಪಿಗಳ ಹೆಸರನ್ನು 108 ಮಣಿಗಳಿಂದ ಜಪಿಸಿದರೆ, ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.

ಶ್ರೀ ವೈಷ್ಣವ ಧರ್ಮದಡಿಯಲ್ಲಿ ವಿಷ್ಣುವಿನ 108 ದಿವ್ಯ ಕ್ಷೇತ್ರಗಳ  ಉಲ್ಲೇಖವಿದೆ, ಇವುಗಳನ್ನು 108 ದಿವ್ಯಾಧೇಶಂ ಎಂದು ಕರೆಯಲಾಗುತ್ತದೆ.

ಕಾಂಬೋಡಿಯಾದ ಪ್ರಸಿದ್ಧ ಅಂಕೋರ್ ವಾಟ್ ದೇವಾಲಯದ ಕೆತ್ತನೆಯು ಸಮುದ್ರ ಮಂಥನದ ವಿದ್ಯಮಾನವನ್ನು ತೋರಿಸಲಾಗಿದೆ. ಈ ಕೆತ್ತನೆಯಲ್ಲಿ ಮಂದಾರ್ ಪರ್ವತದ ಮೇಲೆ ಕಟ್ಟಿದ ವಾಸುಕಿ ನಾಗದ ಎರಡು ಬದಿಯಲ್ಲಿ  54 ದೇವ್ ಮತ್ತು 54 ರಾಕ್ಷಸರನ್ನು (108) ತೋರಿದಲಾಗಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳಿದ್ದು, ಈ ರಾಶಿಗಳಲ್ಲಿ 9 ರಾಶಿಗಳ ವರ್ಣನೆ ಇರುತ್ತದೆ.  ಈ ಎರಡು ಸಂಖ್ಯೆಗಳನ್ನು ಗುಣಿಸಿದಾಗ ನಿಮಗೆ 108 ಅಂಕಿ ಸಿಗುತ್ತದೆ.

ಹಿಂದೂ ಧರ್ಮವನ್ನು ಹೊರತುಪಡಿಸಿ ಇತರ  ಅನೇಕ ಧರ್ಮಗಳು ಮತ್ತು ಸಂಸ್ಕೃತಿಗಳಲ್ಲಿಯೂ ಕೂಡ  108 ಅಂಕಿಗೆ ವಿಶೇಷ ಪ್ರಾಮುಖ್ಯತೆ ಇದೆ. ಬೌದ್ಧಧರ್ಮದ ಅನೇಕ ಶಾಖೆಗಳಲ್ಲಿ ವ್ಯಕ್ತಿಯೊಳಗೆ 108 ವಿವಿಧ ರೀತಿಯ ಭಾವನೆಗಳು ಹುಟ್ಟುತ್ತವೆ ಎಂದು ನಂಬಲಾಗಿದೆ.

ಲಂಕಾವತ್ರ ಸೂತ್ರದಲ್ಲಿ ಒಂದು ಖಂಡದ ಉಲ್ಲೇಖವಿದ್ದು , ಇದರಲ್ಲಿ ಬೋಧಿಸತ್ವ ಮಹಾಮತಿ ಬುದ್ಧನಿಗೆ 108 ಪ್ರಶ್ನೆಗಳನ್ನು ಕೇಳುತ್ತಾರೆ. ಮತ್ತೊಂದು ಖಂಡದಲ್ಲಿ ಭಗವಾನ್ ಬುದ್ಧ 108 ನಿಷೇಧಗಳನ್ನು ವಿವರಿಸುತ್ತಾರೆ. ಅನೇಕ ಬೌದ್ಧ ದೇವಾಲಯಗಳಲ್ಲಿ 108 ಮೆಟ್ಟಿಲುಗಳನ್ನು ಸಹ ಇರಿಸಲಾಗಿರುವುದನ್ನು ನೀವು ಗಮನಿಸಬಹುದು.

ಜಪನೀಸ್ ಸಂಸ್ಕೃತಿಯಲ್ಲಿ ಬೌದ್ಧಧರ್ಮದ ಅನುಯಾಯಿಗಳು ಹಳೆ ವರ್ಷಕ್ಕೆ ವಿದಾಯ ಹೇಳಿ ,ಹೊಸ ವರ್ಷವನ್ನು ಸ್ವಾಗತಿಸಲು ಬೌದ್ಧ ದೇವಾಲಯದ ಘಂಟೆಯನ್ನು 108 ಬಾರಿ ಬಾರಿಸುತ್ತಾರೆ ಎಂದು ಹೇಳಲಾಗುತ್ತದೆ.