Janmasthami 2020:ನಿರ್ಮಾಣವಾಗಲಿದೆ ಈ ಶುಭ ಸಂಯೋಗ, ಇಲ್ಲಿದೆ ಶುಭ ಮುಹೂರ್ತ ಮತ್ತು ಪೂಜಾ ವಿಧಿ

ಹಿಂದೂ ಧರ್ಮದ ಮಾನ್ಯತೆಗಳ ಅನುಸಾರ, ಭಾದ್ರಪದ ಕೃಷ್ಣಪಕ್ಷದ ಅಷ್ಟಮಿ ತಿಥಿಯಂದು ಶ್ರೀಕೃಷ್ಣ ಜನಿಸಿದ್ದಾನೆ. ಶ್ರೀ ಕೃಷ್ಣ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರದಲ್ಲಿ ಜನಿಸಿದ್ದ.

Updated: Aug 10, 2020 , 09:20 PM IST
Janmasthami 2020:ನಿರ್ಮಾಣವಾಗಲಿದೆ ಈ ಶುಭ ಸಂಯೋಗ, ಇಲ್ಲಿದೆ ಶುಭ ಮುಹೂರ್ತ ಮತ್ತು ಪೂಜಾ ವಿಧಿ

ನವದೆಹಲಿ: ಶ್ರೀ ಕೃಷ್ಣನ ಜನ್ಮೊತ್ಸವಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಆದರೆ, ಕೊರೊನಾ ಸಂಕಷ್ಟದ ಹಿನ್ನೆಲೆ ಈ ಬಾರಿ ಪ್ರತಿವರ್ಷದಂತೆ ದೇವಾಲಯಗಳಲ್ಲಿ ಎಂದಿನಂತೆ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿಲ್ಲ. ಈ ಬಾರಿ ದೇಶದ ವಿವಿದ ಭಾಗಳಲ್ಲಿ ಆಗಸ್ಟ್ 11 ಮತ್ತು ಆಗಸ್ಟ್ 12 ರಂದು ಮಾನ್ಯತೆಗಳ ಅನುಸಾರ ಜನ್ಮಾಷ್ಟಮಿಯ ಉತ್ಸವ ಆಚರಿಸಲಾಗುತ್ತಿದೆ. ಹಿಂದೂ ಧರ್ಮದ ಮಾನ್ಯತೆಗಳ ಅನುಸಾರ, ಭಾದ್ರಪದ ಕೃಷ್ಣಪಕ್ಷದ ಅಷ್ಟಮಿ ತಿಥಿಯಂದು ಶ್ರೀಕೃಷ್ಣ ಜನಿಸಿದ್ದಾನೆ. ಶ್ರೀ ಕೃಷ್ಣ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರದಲ್ಲಿ ಜನಿಸಿದ್ದ. ಜೋತಿಷ್ಯ ಪಂಡೀತರ ಅನುಸಾರ ಶ್ರೀಕೃಷ್ಣನ ಜನ್ಮ ತಿಥಿ ಹಾಗೂ ನಕ್ಷತ್ರ ಹೊಂದಾಣಿಕೆಯಾಗುತ್ತಿಲ್ಲ ಎನ್ನಲಾಗಿದೆ.

ಈ ಬಾರಿ ಆಗಸ್ಟ್ 11ರಂದು ಬೆಳಗ್ಗೆ ಜನ್ಮಾಷ್ಟಮಿ ತಿಥಿ ಆರಂಭಗೊಳ್ಳಲಿದ್ದು, ಇದು ಆಗಸ್ಟ್ 12ರ ಬೆಳಗ್ಗೆ 11 ಗಂಟೆಯವರೆಗೆ ಇರಲಿದೆ. ಇನ್ನೊಂದೆಡೆ ರೋಹಿಣಿ ನಕ್ಷತ್ರ ಆಗಸ್ಟ್ 13ರಂದು ಬರಲಿದೆ. ಜೋತಿಷಿಗಳ ಪ್ರಕಾರ, ಉದಯಾ ತಿಥಿಯಲ್ಲಿ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಹೀಗಾಗಿ ಈ ಬಾರಿಯ ಜನ್ಮಾಷ್ಟಮಿಯ ದಾನ ಆಗಸ್ಟ್ 11 ರಂದು ಇರಲಿದ್ದರೆ, ಆಗಸ್ಟ್ 12ಕ್ಕೆ ಪೂಜೆ ಹಾಗೂ ವೃತ ಕೈಗೊಳ್ಳಲಾಗುತ್ತಿದೆ.

ಆದರೆ, ಆಗಸ್ಟ್ 12ರ ಪೂಜೆ ವಿಶೇಷ ಮತ್ತು ಶುಭಕರ ಎಂದು ಹೇಳಲಾಗುತ್ತಿದೆ. ಆಗಸ್ಟ್ 12ರಂದು ಪೂಜೆಯ ಸಮಯ 12ಗಂಟೆ 5 ನಿಮಿಷದಿಂದ 12ಗಂಟೆ 47 ನಿಮಿಷಗಳವರೆಗೆ ಇರಲಿದೆ. ಈ ಶುಭ ಮುಹೂರ್ತದಲ್ಲಿ ನೆರವೇರಿಸಲಾಗುವ ಬಾಲ ಗೋಪಾಲನ ಪೂಜೆ ಎರಡು ಪಟ್ಟು ಹೆಚ್ಚು ಫಲ ನೀಡಲಿದೆ. ಈ ಬಾರಿಯ ಜನ್ಮಾಷ್ಟಮಿಯಂದು ವೃದ್ಧಿ ಸಂಯೋಗ ಕೂಡ ನೆರವೇರಲಿದೆ.

ಪೂಜಾ ವಿಧಿ
ಬೆಳಗ್ಗೆ ಸ್ನಾನ ಮಾಡಿ ಹಾಗೂ ಪೂಜೆ ಅಥವಾ ವೃತದ ಸಂಕಲ್ಪ ಮಾಡಿ. ಜಲ ಆಹಾರ ಅಥವಾ ಫಲ ಆಹಾರ ಗ್ರಹಿಸಿ. ಮಧ್ಯರಾತ್ರಿ ಧಾತುವಿನಲ್ಲಿ ತಯಾರಾದ ಶ್ರೀ ಕೃಷ್ಣನ ವಿಗ್ರಹಕ್ಕೆ ಮೊದಲು ಹಾಲು, ಮೊಸರು, ಜೇನು, ಶರ್ಕರ ಹಾಗೂ ಕೊನೆಗೆ ಶುದ್ಧ ತುಪ್ಪದಿಂದ ಸ್ನಾನ ಮಾಡಿಸಿ. ಬಳಿಕ ಜಲದಿಂದ ಸ್ನಾನ ಮಾಡಿಸಿ. ನಂತರ ಶ್ರೀ ಕೃಷ್ಣನಿಗೆ ಪಿತಾಂಬರ, ಪುಷ್ಪ ಹಾಗೂ ನೈವೇದ್ಯವನ್ನು ಅರ್ಪಿಸಿ. ನಿಮ್ಮ ಮನೋಕಾಮನೆಯ ಅನುಸಾರ ಮಂತ್ರ ಪಠಿಸಿ ಹಾಗೂ ಕೊನೆಗೆ ಪ್ರಸಾದ ಸ್ವೀಕರಿಸಿ.