ಕರ್ನಾಟಕದ ಹಿರಿಮೆ ಸಾರುವ 'ನಾವು' ತಂಡದ 'ನಮ್ಮೀ ನಾಡನು ನೋಡಾ'

ಮೈಸೂರಿನ 'ನಾವು' ತಂಡದ ನಮ್ಮೀ ನಾಡನು ನೋಡಾ ಎನ್ನುವ 5 ನಿಮಿಷದ ಹಾಡು ತನ್ನ ಸಾಹಿತ್ಯ ಮತ್ತು ಸಂಗೀತದ ಸಂಯೋಜನೆ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಹಾಡಿಗೆ ಮೆಚ್ಚುಗೆಯ ಸುರಿಮಳೆಗಳು ಹರಿದು ಬಂದಿವೆ.

Last Updated : Dec 3, 2020, 09:49 PM IST
ಕರ್ನಾಟಕದ ಹಿರಿಮೆ ಸಾರುವ 'ನಾವು' ತಂಡದ 'ನಮ್ಮೀ ನಾಡನು ನೋಡಾ'

ಬೆಂಗಳೂರು: ಮೈಸೂರಿನ 'ನಾವು' ತಂಡದ ನಮ್ಮೀ ನಾಡನು ನೋಡಾ ಎನ್ನುವ 5 ನಿಮಿಷದ ಹಾಡು ತನ್ನ ಸಾಹಿತ್ಯ ಮತ್ತು ಸಂಗೀತದ ಸಂಯೋಜನೆ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಹಾಡಿಗೆ ಮೆಚ್ಚುಗೆಯ ಸುರಿಮಳೆಗಳು ಹರಿದು ಬಂದಿವೆ.

ಪ್ರಗಾಥ ಮೋಹನ್ ರಚಿತ ಈ ಹಾಡು ಜನ ಜೀವನದ ಚಿತ್ರಣದ ಜೊತೆಗೆ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ತೋರಿಸುತ್ತಿದೆ. ಇದಕ್ಕೆ ಶಾಲೋಮ್ ಸನ್ನುತಾ ಮತ್ತು ಅನುಷ್ ಶೆಟ್ಟಿ ಅವರ ಹಿನ್ನಲೆ ಗಾಯನವು ಹಾಡನ್ನು ಮತ್ತಷ್ಟು ಮೆರಗುಗೊಳಿಸುತ್ತದೆ.ಸುಲಲಿತ ಸಾಹಿತ್ಯದ ಮೂಲಕ ಕನ್ನಡ ಮತ್ತು ಕರ್ನಾಟಕದ ಪರಂಪರೆಯನ್ನು ಸಾರುವುದು ಈ ಹಾಡಿನ ಇನ್ನೊಂದು ವೈಶಿಷ್ಟ್ಯವೆನ್ನಬಹುದು.

'ನಾವು' ತಂಡವು ತನ್ನ ವಿಶಿಷ್ಟ ಬಗೆಯ ಪ್ರಯೋಗಗಳಿಂದ ರಾಜ್ಯದ ಗಮನ ಸೆಳೆದಿರುವ ಬ್ಯಾಂಡ್ ಗಳಲ್ಲಿ ಒಂದಾಗಿದೆ. ಜನಪದ ಸಾಹಿತ್ಯ, ವಚನ, ದಾಸರ ಹಾಡುಗಳು, ಹೀಗೆ ತನ್ನ ಕನ್ನಡದ ಶ್ರೀಮಂತ ಸಾಹಿತ್ಯಕ್ಕೆ ಬ್ಯಾಂಡ್ ಸಂಗೀತದ ಮೂಲಕ ಮರುಜೀವ ನೀಡುವ ಪ್ರಯತ್ನವನ್ನು 'ನಾವು' ಮಾಡುತ್ತಿದೆ. ಇದುವರೆಗೆ ಸುಮಾರು 5 ಹಾಡುಗಳನ್ನು ತನ್ನ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದೆ. ಇವುಗಳಲ್ಲಿ ನಾಲ್ಕು ವರ್ಷದ ಹಿಂದೆ ಬಿಡುಗಡೆ ಮಾಡಿದ 'ಜಂಬೂ ಸವಾರಿ' ಹಾಡಂತೂ ಪ್ರತಿ ವರ್ಷ ದಸರಾ ಬಂದಾಗಲೆಲ್ಲಾ ನೆನಪಾಗುತ್ತದೆ ಅಷ್ಟರ ಮಟ್ಟಿಗೆ ಈ ಹಾಡು ಜನಪ್ರಿಯವಾಗಿದೆ.

'ನಾವು ಹುಟ್ಟಿದ್ದು ಹೀಗೆ'

2011 ರಲ್ಲಿ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮುನ್ನಾ, ಅನುಷ್ ಶೆಟ್ಟಿ, ಶ್ರುತಿ ರಂಜನಿ, ಎಮಿಲ್ ಅಬ್ರಹಾಂ, ಮತ್ತು ಪ್ರಗಾಥ ಮೋಹನ್ ರನ್ನು ಒಳಗೊಂಡ ತಂಡವು ಚೆನ್ನೈ ನಲ್ಲಿ ನಡೆದ ದಕ್ಷಿಣ ವಲಯದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ಪಡೆಯಿತು, ಅಲ್ಲಿಂದ ಹೊಸದಾಗಿ ಸಂಗೀತದಲ್ಲಿ ಏನಾದರೂ ಸೃಷ್ಟಿಸಬೇಕೆನ್ನುವ ಹಂಬಲವೇ ಮುಂದೆ 'ನಾವು' ತಂಡದ ರಚನೆಗೆ ಪ್ರೇರಣೆಯಾಯಿತು. ನಂತರದಲ್ಲಿ ಶಾಲೋಮ್ ಸನ್ನುತಾ, ಶ್ರೀಕಂಠಸ್ವಾಮಿ, ರೋಹಿತ್ ಶ್ರೀಧರ್ ಕೂಡ ಈ ತಂಡದ ಭಾಗವಾದರು.

'ಈ ಬ್ಯಾಂಡ್ ಆರಂಭಿಸುವಾಗ ನಮಗೆ ಸರಳ ಸಂಗೀತವೇ ನಮಗೆ ಪ್ರಮುಖ ಆಧ್ಯತೆಯಾಗಿತ್ತು, ಶಾಸ್ತ್ರೀಯ ಸಂಗೀತವಾಗಲಿ ಅಥವಾ ಪಾಶ್ಚಾತ್ಯ ಸಂಗೀತವಾಗಲಿ ಇದರಲ್ಲಿ ಯಾವುದೂ ಕೂಡ ಪ್ರಾಬಲ್ಯವನ್ನು ಸಾಧಿಸುವಂತಾಗಬಾರದು ಎನ್ನುವುದು ನಮ್ಮ ಮೂಲ ಆಶಯವಾಗಿತ್ತು. ಈ ವಿಚಾರದ ಹಿನ್ನಲೆಯಲ್ಲಿಯೇ 'ನಾವು' ತಂಡಕ್ಕೆ ಚಾಲನೆ ನೀಡಿದೆವು ಎನ್ನುತ್ತಾರೆ' ತಂಡದ ಸದಸ್ಯರಲ್ಲೊಬ್ಬರಾದ ಪ್ರಗಾಥ ಮೋಹನ್.

ಈಗ ಇವರೆಲ್ಲರ ಪ್ರಯತ್ನದಿಂದ ರೂಪುಗೊಂಡಿರುವ ನಾವು ತಂಡವು ಬೆಂಗಳೂರು ಹಾಗೂ ಮೈಸೂರಿನ ರಂಗಾಯಣ ಸೇರಿದಂತೆ ಹಲವಡೆ ತನ್ನ ಬ್ಯಾಂಡ್ ಸಂಗೀತದ ಪ್ರದರ್ಶನವನ್ನು ನೀಡಿದೆ. ವಚನ ಸಾಹಿತ್ಯ , ಜನಪದ ಸಾಹಿತ್ಯ, ದಾಸರ ಪದಗಳು ಸೇರಿದಂತೆ ಸುಮಾರು 22ಕ್ಕೂ ಅಧಿಕ ಹಾಡುಗಳನ್ನು 'ನಾವು' ತಂಡವು ಸಂಯೋಜಿಸಿ ಈಗ ರಾಜ್ಯದ ಗಮನ ಸೆಳೆದಿದೆ.

More Stories

Trending News