ನೀವು ಆಧ್ಯಾತ್ಮಿಗಳೇ? ಹಾಗಾದರೆ ನೀವು ನೋಡಲೇಬೇಕಾದ ಭಾರತದ ಸ್ಥಳಗಳು ಇಲ್ಲಿವೆ

Last Updated : Sep 22, 2018, 04:23 PM IST
ನೀವು ಆಧ್ಯಾತ್ಮಿಗಳೇ? ಹಾಗಾದರೆ ನೀವು ನೋಡಲೇಬೇಕಾದ ಭಾರತದ ಸ್ಥಳಗಳು ಇಲ್ಲಿವೆ title=
ಸಾಂದರ್ಭಿಕ ಚಿತ್ರ

ಪ್ರತಿ ವರ್ಷ ನೂರಾರು ಭಕ್ತರು ಶಾಂತಿ ನೆಮ್ಮದಿಗಾಗಿ ಹಲವಾರು ಪವಿತ್ರ ಸ್ಥಳಗಳ ಹುಡುಕಾಟದಲ್ಲಿ ತೊಡಗುತ್ತಾರೆ.ಆ ಮೂಲಕ ಶಾಂತಿಯುತ ಪರಿಸರ ಮತ್ತು ಪವಿತ್ರ ಧಾರ್ಮಿಕ ಸ್ಥಳಗಳಿಗೆ ಭೇಟಿ ನಿಡುವ ಮೂಲಕ ಜನರು ತಮ್ಮ ಆಧ್ಯಾತ್ಮಿಕ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ.

ಹಾಗಾದರೆ ಈಗ  ನಾವು ನೀವು ಜೀವನದಲ್ಲಿ ನೋಡಲೇಬೇಕಾದ ಕೆಲವು ಮಹತ್ವದ ಧಾರ್ಮಿಕ ಸ್ಥಳಗಳ ಮಾಹಿತಿಯನ್ನು ನೀಡುತ್ತೇವೆ.ಈಗಲೇ ರೇಲ್ವೆ ಅಥವಾ ಫ್ಲೈಟ್ ಟಿಕೆಟ್ ನ್ನು ಈ ಸ್ಥಳಗಳನ್ನು ಭೇಟಿ ಮಾಡಲು ಕಾಯ್ದಿರಿಸಿ.

ಸ್ವರ್ಣ ಮಂದಿರ-

ಅಮೃತಸರ್ ದ ಸ್ವರ್ಣ ಮಂದಿರ ಪ್ರಪಂಚದಾದ್ಯಂತ ಯಾತ್ರಿಗಳನ್ನು ಆಕರ್ಷಿಸುತ್ತದೆ, ಇದು ಕೇವಲ ಸಿಖ್ಖರ ಕೇಂದ್ರ ಧಾರ್ಮಿಕ ಸ್ಥಳ ಮಾತ್ರವಲ್ಲ ಮಾನವ ಸಹೋದರತ್ವ ಮತ್ತು ಸಮಾನತೆಯ ಸಂಕೇತವಾಗಿದೆ. ದೇವಾಲಯದ ಸಂಕೀರ್ಣವನ್ನು ತಾಮ್ರ ಮತ್ತು ಅಮೃತಶಿಲೆಯಿಂದ ಕೆತ್ತಲಾಗಿದೆ.1830 ರಲ್ಲಿ ಮಹಾರಾಜ ರಂಜಿತ್ ಸಿಂಗ್ ನಿಜವಾದ ಗೋಲ್ಡ್ ಫಾಯಿಲ್ನೊಂದಿಗೆ ಈ ದೇವಾಲಯವನ್ನು ಸ್ಥಾಪಿಸಿದನು. ಇದು ರಾತ್ರಿಯಲ್ಲಿ ವಿಶೇಷವಾದ ಬೆಳಕಿನಿಂದ ಚಿನ್ನದ ಗುಮ್ಮಟವು ಹೊಳೆಯುತ್ತದೆ. ಈ ದೇವಾಲಯವು ಜನಾಂಗ, ಧರ್ಮ ಮತ್ತು ವರ್ಗವನ್ನು ಲೆಕ್ಕಿಸದೆ ಪ್ರತಿ ದಿನಕ್ಕೆ 100,000 ಜನರಿಗೆ ಸಸ್ಯಾಹಾರಿ ಭೋಜನವನ್ನು ನೀಡುತ್ತದೆ.

ಕೊನಾರ್ಕ್ ದೇವಾಲಯ-

ಕೋನಾರ್ಕ್ ಸೂರ್ಯ ದೇವಸ್ಥಾನವು ಸೂರ್ಯ ದೇವರಿಗೆ  ಬೃಹತ್ ರಥದ ರೂಪದಲ್ಲಿ ತೆಗೆದುಕೊಳ್ಳುತ್ತದೆ, 12 ಜೋಡಿ ಕಲ್ಲಿನಿಂದ ಕೆತ್ತಿದ ಚಕ್ರಗಳು ಮತ್ತು ಏಳು ಕುದುರೆಗಳು ಇದರಲ್ಲಿ ಸೇರಿವೆ. ಈ ದೇವಸ್ಥಾನವು ಸಮಯದ ಸೂಚಕವಾಗಿದೆ ಎಂದು ಹೇಳಲಾಗುತ್ತದೆ. ಈ ಸಮಯವನ್ನು ಸೂರ್ಯದೇವನು ನಿಯಂತ್ರಿಸುತ್ತಾನೆ ಎನ್ನುವ ಪ್ರತೀತಿ ಇದೆ. ಈ ದೇವಾಲಯವು ಸಂಪೂರ್ಣ ರಚನೆ ಅಂದವಾದ ಕಲ್ಲಿನ ಕೆತ್ತನೆಗಳಿಗಾಗಿ ಹೆಸರುವಾಸಿಯಾಗಿದೆ.

ತಿರುಪತಿ ದೇವಸ್ಥಾನ-

ಇಲ್ಲಿನ ದೇವರನ್ನು ಬಾಲಾಜಿ ಎಂದು ಕರೆಯಲಾಗುತ್ತದೆ  ಮತ್ತು ವಿಷ್ಣುವಿನ ಅವತಾರವೆಂದೆ ನಂಬಲಾಗಿರುವ ತಿರುಪತಿ ಬಾಲಾಜಿ ದೇವಸ್ಥಾನವು  ದೇಶಾದ್ಯಂತ ಲಕ್ಷಾಂತರ ಭಕ್ತರನ್ನು ಸ್ವಾಗತಿಸುತ್ತದೆ. ಮನೋಹರ ಮತ್ತು ಶಾಂತ ವಾತಾವರಣವನ್ನು ಹೊಂದಿರುವ ಈ ಪಟ್ಟಣವು ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ಪ್ರತೀಕ ಎನ್ನುವಂತಿದೆ. ಇದರ ಭವ್ಯವಾದ ನೋಟ ಮತ್ತು ವಾಸ್ತುಶಿಲ್ಪದ ಸೌಂದರ್ಯವು ಪ್ರತಿಯೊಬ್ಬ ಪ್ರವಾಸಿಗನಿಗೆ ಮೋಡಿ ಮಾಡುತ್ತದೆ.

ರಿಷಿಕೇಶ-

ಜ್ಞಾನ ಮತ್ತು ಶಾಂತಿಯನ್ನು ಅರಸಿ ಬರುವ ಲಕ್ಷಾಂತರ ಪ್ರವಾಸಿಗರನ್ನು ಅಸಂಖ್ಯಾತ ಆಶ್ರಮಗಳು ಮತ್ತು ಯೋಗ ಸಂಸ್ಥೆಗಳು ಋಷಿಕೇಶದಲ್ಲಿ ಸ್ವಾಗತಿಸುತ್ತವೆ. ಇದು ವಿಶೇಷವಾಗಿ ಆಧ್ಯಾತ್ಮಿಕ ಅನ್ವೇಷಣೆ ಮಾಡುವ ವಿದೇಶಿ ಪ್ರವಾಸಿಗರಿಗೆ ಅತ್ಯಂತ ಮೆಚ್ಚಿನ ತಾಣವಾಗಿದೆ. ಆದರೆ ಹರಿದ್ವಾರ ಹಿಂದೂ ಯಾತ್ರಾರ್ಥಿಗಳಿಗೆ ನೆಚ್ಚಿನ ಸ್ಥಳವಾಗಿದೆ.

ವಾರಣಾಸಿ-

ಗಂಗಾ ಆರತಿ ಎಂಬುದು ದಶಾಶ್ವಮೇಧ ಘಾಟ್ನಲ್ಲಿ ಪ್ರತಿ ದಿನ ನಡೆಯುವ ಅದ್ಭುತ ಸಮಾರಂಭವಾಗಿದ್ದು ಇದು ನದಿಗೆ ಕೃತಜ್ಞತೆಯನ್ನು ಪೂಜೆಯ ಮೂಲಕ ಸಲ್ಲಿಸಲಾಗುತ್ತದೆ. ಇಲ್ಲಿನ ಆರತಿಯು ನಮ್ಮ ಆಧ್ಯಾತ್ಮಿಕ ರೂಪಾಂತರದ ಪ್ರದರ್ಶನವಾಗಿದೆ. ಈ ನಗರದ ಇನ್ನೊಂದು ವಿಶೇಷವೆಂದರೆ ಗಂಗಾ ನದಿಯುದ್ದಕ್ಕೂ  ಹಲವು ಧಾರ್ಮಿಕ ವಿಧಿ ವಿಧಾನಗಳು ಪ್ರವಾಸಿಗರನ್ನು ಅಧ್ಯಾತ್ಮಿಕ ಲೋಕಕ್ಕೆ ಕರೆದೊಯ್ಯುತ್ತವೆ.

ಅಜ್ಮೀರ್ ಷರೀಫ್ ದರ್ಗಾ-

ಇದು ದೇಶದಲ್ಲೇ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಇದು ಸರ್ವ ಧರ್ಮ ಸಮನ್ವಯತೆಯನ್ನು ಸಾರುವ  ಯಾತ್ರಾ ಸ್ಥಳವಾಗಿದೆ. ದರ್ಗಾಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ಆಸೆಗಳು ಪೂರ್ಣಗೊಳ್ಳುತ್ತವೆ ಎನ್ನುವ ನಂಬಿಕೆ ಇದೆ. ಇಲ್ಲಿ ವಿವಿಧ ಧರ್ಮಗಳ ಜನರನ್ನು ಒಂದೆಡೆ ನೋಡುವುದೇ ನಿಜಕ್ಕೂ ಸುಂದರವಾದದ್ದು.

Trending News