ನವದೆಹಲಿ: ವಾಸ್ತುಶಾಸ್ತ್ರ (Vastu Tips) ನಮ್ಮ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಯಾವುದೇ ಒಂದು ಮನೆಯ ವಾಸ್ತುಶಾಸ್ತ್ರದ ಕುರಿತು ನಾವು ಯೋಚಿಸುವಾಗ, ಪಂಚತತ್ವಗಳಲ್ಲಿ ಒಂದಾದ 'ಜಲ' ಅಥವಾ ನೀರಿನ ಕಡೆಗೆ ವಿಶೇಷ ಗಮನಹರಿಸುವುದು ಅತ್ಯಾವಶ್ಯಕವಾಗಿದೆ. ಒಂದು ವೇಳೆ ನೀವು ನಿಮ್ಮ ಮನೆಯಲ್ಲಿ ನೀರನ್ನು ಸರಿಯಾದ ದಿಕ್ಕಿನಲ್ಲಿಟ್ಟು ಅದಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಅನುಸರಿಸಿದರೆ, ನಿಶ್ಚಿತವಾಗಿ ನಿಮಗೆ ಶುಭಫಲಗಳು ಲಭಿಸುತ್ತವೆ. ಇದನ್ನು ನಿರ್ಲಕ್ಷ  ಮನೆಯಲ್ಲಿ ವಾಸಿಸುವ ಜನರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಹಾಗಾದರೆ ಬನ್ನಿ ಜಲಕ್ಕೆ ಸಂಬಧಿಸಿದಂತೆ ವಾಸ್ತುಶಾಸ್ತ್ರದ  ಯಾವ ಉಪಾಯಗಳು ಶುಭ ಫಲಗಳನ್ನು ನೀಡುತ್ತವೆ ಎಂಬುದನ್ನು ಅರಿಯೋಣ.


COMMERCIAL BREAK
SCROLL TO CONTINUE READING

1. ಜೀವ ಜಲ ನೀರಿಗೆ ಸಂಬಂಧಿಸಿದಂತೆ ವಿಶೇಷ ಗಮನಹರಿಸುವುದು ಆವಶ್ಯಕವಾಗಿದೆ.  ಅದು ಎಂದಿಗೂ ಕೂಡ ವ್ಯರ್ಥವಾಗಕೂಡದು. ನಿಮಗೆ ಅವಶ್ಯಕ ಎನಿಸುವಷ್ಟೇ ನೀರನ್ನು ನೀವು ನಿಮ್ಮ ಗ್ಲಾಸ್ ಗೆ ಹಾಕಿಕೊಳ್ಳಿ. ನೀರು ಕುಡಿದ ಬಳಿಕ ಗ್ಲಾಸ್ ನಲ್ಲಿ ಸ್ವಲ್ಪವೇ ನೀರನ್ನು ಬಿಡುವುದು ಒಂದು ರೀತಿಯ ದೋಷವಾಗಿದೆ.


ಇದನ್ನು ಓದಿ-  Vastu Shastraದ ನಿಯಮಗಳ ಅನುಸಾರ Kitchen ನಿರ್ಮಿಸಿ, ಕೌಟುಂಬಿಕ ಆರೋಗ್ಯ ಸೌಖ್ಯ ನಿಮ್ಮದಾಗಿಸಿಕೊಳ್ಳಿ


2. ಮನೆಯಲ್ಲಿ ಉಪಯೋಗಿಸಲ್ಪಟ್ಟ ನೀರು ಪಶ್ಚಿಮ ದಿಕ್ಕಿಗೆ ಹರಿಯುವುದು ವಾಸ್ತು ಶಾಸ್ತ್ರದ ಪ್ರಕಾರ ದೋಷ ಎಂದು ಪರಿಗಣಿಸಲಾಗಿದೆ. ಒಳಚರಂಡಿ ಇತ್ಯಾದಿಗಳ ಮೂಲಕ ದಕ್ಷಿಣ ದಿಕ್ಕಿನಲ್ಲಿ ನೀರಿನ ಹರಿವು ಧನಹಾನಿಗೆ ಕಾರಣ . ವಾಸ್ತು ಪ್ರಕಾರ, ಇದು ನೀರಿನ ಹರಿವಿಗೆ ಅತ್ಯಂತ ಶುಭವಾದವಾದ ದಿಕ್ಕು  ಉತ್ತರ ದಿಕ್ಕು ಎಂದು ಪರಿಗಣಿಸಲಾಗಿದೆ.


3. ಮನೆಯ ಗೋಡೆಯ ಪಕ್ಕದಲ್ಲಿ ಯಾವುದೇ ಚರಂಡಿ ಅಥವಾ ನದಿ ಇರಬಾರದು. ವಾಸ್ತು ಪ್ರಕಾರ, ನೀರಿನೊಂದಿಗೆ ಸಂಬಂಧಿಸಿದ ಅಂತಹ ವಾಸ್ತು ದೋಷವು ಮನೆಯ ಸದಸ್ಯರನ್ನು ಅನಾರೋಗ್ಯಕ್ಕೆ ಕಾರಣ  ಮತ್ತು ಮನೆಯಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.


ಇದನ್ನು ಓದಿ- ಮನೆಯಲಿ ಸುಖ-ಶಾಂತಿ ಹಾಗೂ ಧನ-ಧಾನ್ಯ ಅಭಿವೃದ್ಧಿಗೆ ಮನೆಯ ಮುಖ್ಯದ್ವಾರದ ಕಾಳಜಿ ವಹಿಸಿ


4. ಮನೆಯ ಮಧ್ಯಭಾಗದಲ್ಲಿ ನೀರಿನ ಸ್ಥಾನ ಅಂದರೆ ನೀರಿನ ಟ್ಯಾಂಕ್, ಹ್ಯಾಂಡ್ ಪಂಪ್, ನಳ ಇತ್ಯಾದಿಗಳನ್ನು ನಿರ್ಮಿಸಬಾರದು. ಮನೆಯ ಮೇಲ್ಚಾವಣಿ ಮೇಲೆ ನೈಋತ್ಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ವಾಸ್ತುಶಾಸ್ತ್ರದಲ್ಲಿ ಅನುಮತಿ ಇದೆ.


5.ಸನಾತನ ಸಂಸ್ಕೃತಿಯಲ್ಲಿ ನೀರು ದೇವಿ ಲಕುಮಿಯ ಸ್ವರೂಪ ಎಂದು ಹೇಳಲಾಗಿದೆ.  ಹೀಗಾಗಿ ಯಾವುದೇ ಒಂದು ಮನೆಯಲ್ಲಿ ನಲ್ಲಿಯಿಂದ ನೀರು ಸೋರಿಕೆ ಅಶುಭ ಎಂದು ಹೇಳಲಾಗಿದೆ. ಈ ವಾಸ್ತುದೋಷದ ಕಾರಣ ವ್ಯಕ್ತಿಯ ಹಣದ ತಿಜೋರಿ ಖಾಲಿಯಾಗುತ್ತದೆ.


ಇದನ್ನು ಓದಿ- ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕು ಸರಿಯಾದ ಕೊನದಲ್ಲಿದ್ದರೆ ಬದಲಾಗುತ್ತೆ ಭಾಗ್ಯ


6.ಮನೆಯ ಅಡುಗೆ ಮನೆಯಲ್ಲಿ ನೀರಿನ ವ್ಯವಸ್ಥೆ ಉತ್ತರ-ಪೂರ್ವ ದಿಕ್ಕು ಅಂದರೆ ಈಶಾನ್ಯ ದಿಕ್ಕಿನಲ್ಲಿರಿಸಬೇಕು. ಅಡುಗೆ ಅನಿಲ ಸಿಲಿಂಡರ್ ಬಳಿ ನೀರಿನ ಶೇಖರಣೆ ಉಚಿತವಲ್ಲ ಎಂಬುದನ್ನು ಗಮನದಲ್ಲಿಡಿ.


7.ಸನಾತನ ಸಂಸ್ಕೃತಿಯಲ್ಲಿ ಪವಿತ್ರ ಎಂದು ಹೇಳಲಾಗುವ ಗಂಗಾಜಲವನ್ನು ನಿತ್ಯ ಮನೆಯಲ್ಲಿ ಸಿಂಪಡನೆ ಮಾಡಬೇಕು.  ಇದರಿಂದ ವಾಸ್ತುದೋಷದ ಪ್ರಭಾವ ಕಡಿಮೆಯಾಗುತ್ತದೆ ಹಾಗೂ ಮನೆಯಲ್ಲೂ ಸುಖ-ಸಮೃದ್ಧಿ ನೆಲೆಸುತ್ತದೆ. ಗಂಗಾಜಲ ಸಿಮ್ಪದಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ತೊಲಗುತ್ತದೆ. ಜೊತೆಗೆ ಮನೆಯಲ್ಲಿ ಶುಭ ಹಾಗೂ ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ. ಗಂಗಾಜಲವನ್ನು ಮನೆಯಲ್ಲಿ ಪವಿತ್ರ ಜಾಗ ಮತ್ತು ಪವಿತ್ರ ಪಾತ್ರೆಯಲ್ಲಿಯೇ ಇರಿಸಬೇಕು.


8. ವೈವಾಹಿಕ ಜೀವನದಲ್ಲಿ ಒಂದು ವೇಳೆ ಸಮಸ್ಯೆ ಎದುರಗುತ್ತಿದ್ದರೆ ಅಥವಾ ಮನೆಯಲ್ಲಿ ನಿತ್ಯ ಕಲಹಗಳು ಸೃಷ್ಟಿಯಾಗುತ್ತಿದ್ದರೆ. ದಾಂಪತ್ಯ ಜೀವನದಲ್ಲಿ ಸಿಹಿ ತುಂಬಲು ಮಳೆ ನೀರನ್ನು ಒಂದು ಬಾಟಲಿಯಲ್ಲಿ ತುಂಬಿ ನಿಮ್ಮ ಬೆಡ್ ರೂಂ ನಲ್ಲಿ ಯಾರೂ ಕೂಡ ಕಾಣಿಸದ ಜಾಗದಲ್ಲಿ ಇರಿಸಿ.