ನವದೆಹಲಿ: ಹಿಂದೂ ಧರ್ಮದಲ್ಲಿ ಶಾರದೀಯ ನವರಾತ್ರಿಗೆ ಹೆಚ್ಚಿನ ಮಹತ್ವವಿದೆ. ಈ ವರ್ಷದ ನವರಾತ್ರಿಯು ಅಕ್ಟೋಬರ್ 15ರಿಂದ ಪ್ರಾರಂಭವಾಗಿ, ಅ. 23ರವರೆಗೂ ನಡೆಯುತ್ತದೆ. ನಂತರ ಅ. 24ರಂದು ನಾಡಹಬ್ಬ ದಸರಾವನ್ನು ಆಚರಿಸಲಾಗುತ್ತದೆ. ನವರಾತ್ರಿಯ ಈ 9 ದಿನಗಳಲ್ಲಿ ತಾಯಿ ದುರ್ಗಾದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಅಶ್ವಿನ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ಆರಂಭವಾಗುವ ನವರಾತ್ರಿ ನವಮಿ ತಿಥಿಯವರೆಗೂ ನಡೆಯುತ್ತದೆ. ನವರಾತ್ರಿಯ 9 ದಿನಗಳಲ್ಲಿ ಕೆಲವು ವಿಶೇಷ ಕಾರ್ಯಗಳನ್ನು ಮಾಡಿದರೆ, ಜಗದಮಾತೆಯಾದ ಜಗದಂಬಾ ಖುಷಿ ಪಡುತ್ತಾಳೆ. ನಿಮಗೆ ಸುಖ-ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾಳೆ.  ಹೀಗಾಗಿ ನವರಾತ್ರಿಯಲ್ಲಿ ಕೆಲವು ವಿಶೇಷ ವಿಷಯಗಳ ಬಗ್ಗೆ ನೀವು ಗಮನಹರಿಸಬೇಕು.  


ಇದನ್ನೂ ಓದಿ: ಹೇರ್‌ ಡೈ ಬೇಕಿಲ್ಲ.. ತೆಂಗಿನೆಣ್ಣೆಗೆ ಈ ಒಂದು ವಸ್ತು ಸೇರಿಸಿ ಹಚ್ಚಿ ಬಿಳಿ ಕೂದಲು ಶಾಶ್ವತ ಕಪ್ಪಾಗುವುದು!


ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಿ  


- ನವರಾತ್ರಿಯ 9 ದಿನಗಳಲ್ಲಿ ಮನೆಯಲ್ಲಿ ಸ್ವಚ್ಛತೆ ಮತ್ತು ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ನವರಾತ್ರಿಯ ಮೊದಲು ಸ್ವಚ್ಛವಾಗಿಡಿ. ಇದಲ್ಲದೆ 9 ದಿನಗಳ ಕಾಲ ಪ್ರತಿದಿನ ಪ್ರವೇಶದ್ವಾರದಲ್ಲಿ ಕುಂಕುಮ ಮತ್ತು ಅರಿಶಿನದೊಂದಿಗೆ ತಾಯಿ ದುರ್ಗಾದೇವಿಯ ಸಂಕೇತವನ್ನು ಮಾಡಿ.


- ನವರಾತ್ರಿಯಲ್ಲಿ ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮತ್ತು ಧ್ಯಾನ ಮಾಡಿದ ನಂತರ ದುರ್ಗಾ ದೇವಿಯನ್ನು ಪೂಜಿಸಿ. ಪ್ರತಿದಿನ ಸಂಜೆ ಆರತಿ ಮಾಡಿ. ದುರ್ಗಾ ಮಾತೆಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿ. ಇದರಿಂದ ತಾಯಿ ದುರ್ಗಾದೇವಿ ಸಂತಸಗೊಳ್ಳುತ್ತಾಳೆ.


- ನವರಾತ್ರಿಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗಿಸುವುದರಿಂದ ವ್ಯಕ್ತಿಯ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಆದರಿಂದ ನವರಾತ್ರಿಯ ಸಮಯದಲ್ಲಿ ವಿಧಿವಿಧಾನಗಳ ಪ್ರಕಾರ ಅಖಂಡ ಜ್ಯೋತಿಯನ್ನು ಬೆಳಗಿಸಿ. ಅಲ್ಲದೆ ಕೊನೆಯ ದಿನ ಹವನ ಮತ್ತು ಕನ್ಯಾ ಪೂಜೆಯನ್ನು ಮಾಡಿ. ನವರಾತ್ರಿಯ ಸಮಯದಲ್ಲಿ ಹೆಣ್ಣುಮಕ್ಕಳನ್ನು ಜಗನ್ಮಾತೆಗೆ ಸಮಾನವೆಂದು ಪರಿಗಣಿಸಲಾಗುತ್ತದೆ.


ಈ ತಪ್ಪನ್ನು ಮಾಡಬೇಡಿ


ನವರಾತ್ರಿಯ ಸಮಯದಲ್ಲಿ ಶುದ್ಧತೆ ಮತ್ತು ಪವಿತ್ರತೆಯ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಈ ಅವಧಿಯಲ್ಲಿ ಅಂತಹ ವಸ್ತುಗಳನ್ನು ಮನೆಯಲ್ಲಿ ತರಬೇಡಿ, ಇಲ್ಲದಿದ್ದರೆ ಅದು ದುರ್ಗಾದೇವಿಯ ಅಸಮಾಧಾನಕ್ಕೆ ಕಾರಣವಾಗಬಹುದು. ಆದ್ದರಿಂದ ನವರಾತ್ರಿಯ ಸಮಯದಲ್ಲಿ ಮಾಂಸಾಹಾರಿ, ಅಮಲು ಪದಾರ್ಥಗಳು, ಮದ್ಯ ಇತ್ಯಾದಿಗಳನ್ನು ಸೇವಿಸಬೇಡಿ ಅಥವಾ ಮನೆಗೆ ತರಬೇಡಿ. ನವರಾತ್ರಿಯಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.


ಇದನ್ನೂ ಓದಿ: ತೆಂಗಿನೆಣ್ಣೆ ಜೊತೆ ಈ ಗಿಡದ ಎಲೆಯನ್ನು ಬೆರೆಸಿ ತಲೆಗೆ ಹಚ್ಚಿ… ನಿಮಿಷಗಳಲ್ಲಿ ಶಾಶ್ವತವಾಗಿ ಕಪ್ಪಾಗುವುದು ಬಿಳಿಕೂದಲು!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.