Sugar free sweets : ಹಬ್ಬಗಳಲ್ಲಿ ಸಿಹಿ ತಿನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಆದ್ರೆ ಸಕ್ಕರೆ ಕಾಯಿಲೆ ಮಧುಮೇಹಿಗಳಿಗೆ ನಿರಾಸೆ ಉಂಟುಮಾಡುತ್ತದೆ. ಆದರೆ ನಿಮ್ಮ ಕುಟುಂಬದೊಂದಿಗೆ ಆರೋಗ್ಯಯುತ ಸಿಹಿ ತಿಂದು ಉತ್ತಮ ಸಮಯವನ್ನು ಕಳೆಯುವ ಕೆಲವೊಂದಿಷ್ಟು ಟಿಪ್ಸ್‌ಗಳು ಇಲ್ಲಿವೆ ಗಮನಿಸಿ.


COMMERCIAL BREAK
SCROLL TO CONTINUE READING

ಹೌದು.. ಕೆಲವು ಸ್ಮಾರ್ಟ್ ಮತ್ತು ಸರಳ ಸಲಹೆಗಳೊಂದಿಗೆ ನಿಮ್ಮ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ನೀವು ಹಬ್ಬವನ್ನು ಆನಂದಿಸಬಹುದು. ಹಾಗಾದರೆ ಆ ಸಲಹೆಗಳು ಯಾವುವು.. ಈಗ ನೀವು ನಿಮ್ಮ ಕುಟುಂಬದೊಂದಿಗೆ ಹೇಗೆ ಸಿಹಿ ಸಮಯವನ್ನು ಕಳೆಯಬಹುದು ಎಂದು ತಿಳಿಯೋಣ. 


ಇದನ್ನೂ ಓದಿ:7 ಗಂಟೆಗಳ ಕಾಲ ಮಲಗಿದ್ದರೂ ನೀವು ದಿನವಿಡೀ ಸುಸ್ತಾಗಿರುತ್ತೀರಾ? ನಿಮ್ಮಲ್ಲಿ ಈ ಕೊರತೆ ಇರೋದು ಗ್ಯಾರಂಟಿ?


ದೀಪಾವಳಿ ಎಂದರೆ ಸಿಹಿತಿಂಡಿಗಳು. ಒಂದಾ, ಎರಡಾ, ಹಲವು ಬಗೆಯ ಸಿಹಿತಿಂಡಿಗಳು ಕಣ್ಣ ಮುಂದಿರುತ್ತವೆ. ಈ ಸಮಯದಲ್ಲಿ ನಿಮ್ಮ ತಿನ್ನುವ ಆಸೆಯನ್ನು ಕೊಲ್ಲಬೇಡಿ.. ರುಚಿಯಾಗಿವೆ ಅಂತ ಹೆಚ್ಚಾಗಿ ತಿನ್ನಲು ಹೋಗಬೇಡಿ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ, ಕಡಿಮೆ ತಿನ್ನುವತ್ತ ಗಮನ ಹರಿಸಿ.


ಹಾಗೆಯೇ.. ನಿಮ್ಮ ಊಟದ ಸಮಯದ ನಡುವೆ ಸ್ವಲ್ಪ ಅಂತರವನ್ನು ತೆಗೆದುಕೊಳ್ಳಿ. ನೀವು ತೆಗೆದುಕೊಂಡ ಆಹಾರವನ್ನು ಜೀರ್ಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಆಹಾರ ತೆಗೆದುಕೊಂಡ ನಂತರ.. ಮಲಗಬೇಡಿ.. ಎದ್ದು ತಿರುಗಾಡಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತನಾಡಿ. ಈ ಸಣ್ಣ ಕೆಲಸಗಳು ಸಹ ನಿಮ್ಮ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. 


ಇದನ್ನೂ ಓದಿ: ಐಸ್ ಕ್ರೀಂ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..? ತಿಳಿದ್ರೆ ಶಾಕ್ ಆಗ್ತೀರಾ


ಹಬ್ಬದ ದಿನ ಪೂಜೆ ಪುನಸ್ಕಾರಗಳು ನಡೆಯುವುದರಿಂದ ಊಟದ ಸಮಯದಲ್ಲಿ ವಿಳಂಬವಾಗುತ್ತದೆ. ಅದಕ್ಕಾಗಿ ನಡುವೆ ನಿಮಗೆ ಹಸಿವಾಗುತ್ತಿದ್ದರೆ, ಡ್ರೈ ಫ್ರೂಟ್ಸ್‌ ಗಳಂತಹ ಆರೋಗ್ಯಕರ ತಿಂಡಿಗಳನ್ನು ಸೇವಿಸಿ. ಸಕ್ಕರೆಯಿಂದ ಮಾಡಿದ ಸಿಹಿ ಮತ್ತು ಪಾನೀಯಗಳಿಂದ ದೂರವಿರಿ. ಬಾದಾಮಿ ಮತ್ತು ವಾಲ್ ನಟ್ ಗಳನ್ನು ತಿಂಡಿಯಾಗಿ ತೆಗೆದುಕೊಳ್ಳಬಹುದು. 


ಹಬ್ಬದ ಸಮಯದಲ್ಲಿ ಮಾಡಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು. ಹೀಗೆ ಮಾಡುವುದರಿಂದ ಅರಿವಿಲ್ಲದೆ ನೀವು ತಿನ್ನುವ ಆಹಾರದ ಮೇಲೆ ನಿಯಂತ್ರಣ ಸಾಧಿಸುತ್ತೀರಿ. ಇದಲ್ಲದೆ, ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಸರಿಹೊಂದಿಸುವ ಸಾಧ್ಯತೆಯಿದೆ. 


ಇದನ್ನೂ ಓದಿ: ಮಧುಮೇಹ ತಕ್ಷಣಕ್ಕೆ ನಿಯಂತ್ರಿಸಬೇಕೆ? ಬೆಳಗ್ಗೆ ಖಾಲಿ ಹೊಟ್ಟೆ ಈ ಒಂದು ಕೆಲಸ ಮಾಡಿ!


ಸಿಹಿ ಕಡುಬಯಕೆಗಳನ್ನು ನಿಗ್ರಹಿಸುವುದು ಕಷ್ಟ. ಅದರಲ್ಲೂ ಮಧುಮೇಹ ಇರುವವರು ಸಿಹಿತಿಂಡಿಗಳಿಂದ ದೂರವಿರಬೇಕು. ಹಬ್ಬ ಹರಿದಿನಗಳಲ್ಲಿ ಸಿಹಿತಿಂಡಿಗಳು ಹೆಚ್ಚು ಮನಸೂರೆಗೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ನೀವು ಮನೆಯಲ್ಲಿ ಸಿಹಿತಿಂಡಿಗಳನ್ನು ಮಾಡಬಹುದು. ಸಿಹಿಯ ಪ್ರಮಾಣವನ್ನು ಕಡಿಮೆ ಮಾಡಿ ಅಥವಾ ಸಿಹಿಗೆ ಪರ್ಯಾಯವಾದ ಸಿಹಿಕಾರಕಗಳನ್ನು ಬಳಸಿ ನೀವು ಹಬ್ಬವನ್ನು ಆನಂದಿಸಬಹುದು. ಇದಲ್ಲದೆ ನೀವು ಮನೆಯಲ್ಲಿ ಅಡುಗೆ ಮಾಡಿದರೆ.. ನಿಮಗೆ ಸಕ್ಕರೆ, ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಗಳ ಸಂಖ್ಯೆ ತಿಳಿಯುತ್ತದೆ. ಈ ಸಿಂಪಲ್ ಟಿಪ್ಸ್ ಪಾಲಿಸಿದರೆ... ನೀವೂ ಈ ಹಬ್ಬವನ್ನು ಸಿಹಿಯಾಗಿ ಆಚರಿಸಬಹುದು. 


ಸೂಚನೆ : ಇಲ್ಲಿ ನೀಡಿರುವ ಮಾಹಿತಿ ಕೇವಲ ಮನೆಮದ್ದು ಆಧರಿಸಿದ್ದಾಗಿದ್ದು, ಇದನ್ನು ಅಳವಡಿಸಿಕೊಳ್ಳುವ ಮುನ್ನ ವೈಧ್ಯರ ಸಲಹೆಯನ್ನು ಪಡೆಯುವುದು ಉತ್ತಮ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.