ಧಂತೇರಸ್‌ನಲ್ಲಿ ಯಾವ ರಾಶಿಯವರು ಏನನ್ನು ಖರೀದಿಸಿದರೆ ಅದೃಷ್ಟ

Yashaswini V
Nov 10,2023

ಮೇಷ ರಾಶಿ

ಮೇಷ ರಾಶಿಯವರು ಪಾತ್ರೆ, ಚಿನ್ನದ ಆಭರಣಗಳಂತಹ ವಸ್ತುಗಳನ್ನು ಖರೀದಿಸಬಹುದು.

ವೃಷಭ ರಾಶಿ

ವೃಷಭ ರಾಶಿಯವರಿಗೆ ಬೆಳ್ಳಿ ಲಕ್ಷ್ಮಿ ಗಣೇಶನ ವಿಗ್ರಹ ಖರೀದಿಯಿಂದ ಮನೆಯಲ್ಲಿ ಸಂತೋಷ-ಸಂಪತ್ತು ವೃದ್ಧಿಯಾಗುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯವರು ಧನತ್ರಯೋದಶಿಯಲ್ಲಿ ಬೆಳ್ಳಿ ವಸ್ತುಗಳನ್ನು ಖರೀದಿಸುವುದು ಅನುಕೂಲಕರವಾಗಿರುತ್ತದೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಧಂತೇರಸ್‌ನಲ್ಲಿ ಬೆಳ್ಳಿ ಪಾತ್ರೆ, ಇಲ್ಲವೇ ಹೊಸ ವಾಹನ ಖರೀದಿಸುವುದು ಮಂಗಳಕರವಾಗಿರುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಧನತ್ರಯೋದಶಿಯಲ್ಲಿ ಬೆಳ್ಳಿ ದೀಪ ಖರೀದಿಸುವುದರಿಂದ ಶುಭವಾಗಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವಾರು ಇಂದು ಲಕ್ಷ್ಮಿ ದೇವಿಯ ಬೆಳ್ಳಿ ವಿಗ್ರಹ/ನಾಣ್ಯ ಖರೀದಿಯಿಂದ ಒಳಿತಾಗಲಿದೆ.

ತುಲಾ ರಾಶಿ

ತುಲಾ ರಾಶಿಯವರು ಧಂತೇರಸ್‌ನಲ್ಲಿ ಗೋಲ್ಡ್ ಪೆಂಡೆಂಟ್ ಅಥವಾ ಬೆಳ್ಳಿ ಕಾಯಿನ್ ಖರೀದಿ ಮಾಡುವುದರಿಂದ ಶುಭ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಇಂದು ಲಕ್ಷ್ಮಿ, ಗಣೇಶನಿಗಾಗಿ ಬೆಳ್ಳಿ ಚಮಚ ಖರೀದಿಸುವುದು ಅತ್ಯಂತ ಮಂಗಳಕರ.

ಧನು ರಾಶಿ

ಧನು ರಾಶಿಯವರು ಧಂತೇರಸ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ನಾಣ್ಯ ಖರೀದಿಯಿಂದ ಶುಭವಾಗಲಿದೆ.

ಮಕರ ರಾಶಿ

ಮಕರ ರಾಶಿಯವರು ಧಂತೇರಸ್‌ ದಿನ ಬೆಳ್ಳಿ ವಸ್ತುಗಳನ್ನು ಖರೀದಿಸುವುದರಿಂದ ಸಂಪತ್ತು ಸಮೃದ್ಧಿ ವೃದ್ಧಿಯಾಗುತ್ತದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಬೆಳ್ಳಿ ಪದಾರ್ಥ ಖರೀದಿಯಿಂದ ಅದೃಷ್ಟವೇ ಬದಲಾಗುತ್ತದೆ.

ಮೀನ ರಾಶಿ

ಮೀನ ರಾಶಿಯವರಿಗೆ ಬಿಳಿ ಮುತ್ತಿನಿಂದ ತಯಾರಿಸಿದ ಆಭರಣಗಳನ್ನು ಖರೀದಿಸುವುದರಿಂದ ಶುಭ.

ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story