ನಗುವಿನ ಕಚುಗುಳಿ ಇಡಲು ಮತ್ತೇ ಬರ್ತಿದ್ದಾರೆ "3 ಈಡಿಯಟ್ಸ್"! ಸಂತಸದ ಕಡಲಲ್ಲಿ ಮಿಂದೇಳೋಕೆ ನೀವ್‌ ರೆಡೀನಾ?

3 Idiots part 2 Confirmed : ಮತ್ತೆ ನಗುವಿನ ಸಿಡಿಲು ಸಿಡಿಸಲು ಬರುತ್ತಿದೆ ‘3 ಈಡಿಯಟ್ಸ್ ಪಾರ್ಟ್‌ 2’! ಹದಿನೈದು ವರ್ಷಗಳ ನಂತರ ಮೂಲ ತಂಡವೇ ಮರು ಪ್ರವೇಶ  

Written by - Zee Kannada News Desk | Last Updated : Dec 10, 2025, 01:19 PM IST
  • ಕಥೆಯ ಕಲ್ಪನೆ ಹಲವು ವರ್ಷಗಳಿಂದ ಇದ್ದರೂ, ಅದನ್ನು ಸಂಪೂರ್ಣವಾದ ರೂಪಕ್ಕೆ ತರಲು ಈಗಾಗಲೇ ಸಮಯ ತೆಗೆದುಕೊಂಡಿದ್ದಾರೆ.
  • ಹದಿನೈದು ವರ್ಷಗಳ ನಂತರ ಮೂಲ ತಂಡವೇ ಮರು ಪ್ರವೇಶ
ನಗುವಿನ ಕಚುಗುಳಿ ಇಡಲು ಮತ್ತೇ ಬರ್ತಿದ್ದಾರೆ "3 ಈಡಿಯಟ್ಸ್"! ಸಂತಸದ ಕಡಲಲ್ಲಿ ಮಿಂದೇಳೋಕೆ ನೀವ್‌ ರೆಡೀನಾ?

3 Idiots part 2 Confirmed: 2009ರಲ್ಲಿ ಬಿಡುಗಡೆಯಾಗಿ ದೇಶವನ್ನೇ ನಗಿಸಿ-ನೋಡಿಸಿ ಪ್ರಭಾವ ಬೀರಿದ '3 ಈಡಿಯಟ್ಸ್' ಚಿತ್ರ ಇನ್ನೂ ಅಭಿಮಾನಿಗಳ ನೆನಪಿನಲ್ಲಿ ಜೀವಂತವಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯ ಒತ್ತಡ, ವಿದ್ಯಾರ್ಥಿಗಳ ಕನಸುಗಳು ಮತ್ತು ಜೀವನದ ಅನಿಸಿಕೆಗಳನ್ನು ಹಾಸ್ಯದಿಂದ ಹಾಗೂ ಭಾವನಾತ್ಮಕವಾಗಿ ತೋರಿಸಿದ್ದ ಈ ಸಿನಿಮಾ ಈಗ ತನ್ನ ಮುಂದುವರಿದ ಭಾಗದೊಂದಿಗೆ ಮತ್ತೆ ಬರಲು ಸಜ್ಜಾಗಿದೆ. ಚಿತ್ರ ಬಿಡುಗಡೆಯಾದ ಹದಿನೈದು ವರ್ಷಗಳ ನಂತರ ಅಭಿಮಾನಿಗಳಿಗೆ ಇದು ದೊಡ್ಡ ಗಿಫ್ಟ್‌ ಆಗಿದೆ.

Add Zee News as a Preferred Source

ಇತ್ತೀಚಿನ ವರದಿಗಳ ಪ್ರಕಾರ, ‘3 ಈಡಿಯಟ್ಸ್’ ಚಿತ್ರದ ಸೀಕ್ವೆಲ್ ಅಧಿಕೃತವಾಗಿ ದೃಢಪಟ್ಟಿದೆ. ಅಭಿಮಾನಿಗಳನ್ನು ಇನ್ನಷ್ಟು ಉತ್ಸಾಹಗೊಳಿಸುವ ವಿಷಯ ಎಂದರೆ — ಮೂಲ ಚಿತ್ರದ ಮುಖ್ಯ ತಂಡವೇ ಮತ್ತೆ ಒಂದಾಗುತ್ತಿದೆ. ಅಮೀರ್ ಖಾನ್, ಆರ್. ಮಾಧವನ್, ಶರ್ಮಾನ್ ಜೋಶಿ ಮತ್ತು ಕರೀನಾ ಕಪೂರ್ ಖಾನ್ ಮರು ಪ್ರವೇಶ ಮಾಡಲಿದ್ದಾರೆ. ಹಾಗೆಯೇ ಮೊದಲ ಭಾಗವನ್ನು ನಿರ್ದೇಶಿಸಿದ ರಾಜ್‌ಕುಮಾರ್ ಹಿರಾನಿಯೇ ಈ ಮುಂದುವರಿದ ಭಾಗವನ್ನು ನಿರ್ದೇಶಿಸಲಿದ್ದಾರೆ.

ಇದನ್ನೂ ಓದಿ: ಗಂಭೀರ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದ ಖ್ಯಾತ ನಟ! ಎದ್ದು ನಿಲ್ಲಲೂ ಆಗದ ಸ್ಥಿತಿಯಲ್ಲಿ ಸ್ಟಾರ್‌ ಹೀರೋ

ಚಿತ್ರದ ಸ್ಕ್ರಿಪ್ಟ್ ಈಗಾಗಲೇ ಬಹುತೇಕ ಲಾಕ್ ಆಗಿದ್ದು, ಹಿರಾನಿ ಇದನ್ನು ಮೊದಲ ಭಾಗದ ಮಟ್ಟಕ್ಕಿಂತ ಕಡಿಮೆಯಿಲ್ಲದಂತೆ ಅತ್ಯಂತ ಸುಂದರವಾಗಿ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. 2026ರ ಎರಡನೇಾರ್ಧದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. 3 ಈಡಿಯಟ್ಸ್ ಕ್ಲೈಮ್ಯಾಕ್ಸ್ ಬಳಿಕ 15 ವರ್ಷಗಳಲ್ಲಿ ಇವರ ಜೀವನದಲ್ಲಿ ಏನು ಬದಲಾವಣೆಯಾಯಿತು? ಮತ್ತೆ ಹೇಗೆ ಒಟ್ಟಿಗೆ ಸೇರಿದ್ರು? — ಇದರ ಸುತ್ತ ಹೊಸ ಕಥೆ ಸಾಗಲಿದೆ.

ನಾಲ್ವರು ಸ್ನೇಹಿತರು ಮತ್ತೆ ಒಂದು ಸಾಹಸಕ್ಕೆ ಒಟ್ಟಾಗಿ ಸೇರುವ ಕಥಾವಸ್ತು ಈ ಬಾರಿ ಯಾವ ರೀತಿಯ ಹೊಸ ಅನುಭವ ಕೊಡುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಮೊದಲ ಭಾಗದಂತಹ ಮನರಂಜನೆ ಮತ್ತು ಜೀವನಪಾಠಗಳನ್ನು ನೀಡುವ ಪ್ರಯತ್ನ ಈ ಮುಂದುವರಿದ ಭಾಗದಲ್ಲೂ ಇರಲಿದೆ ಎಂದು ತಂಡದಿಂದ ಸೂಚನೆ ಸಿಕ್ಕಿದೆ.

ಮೊದಲು ದಾದಾಸಾಹೇಬ್ ಫಾಲ್ಕೆ ಅವರ ಜೀವನಚರಿತ್ರೆ ಮಾಡಲು ಅಮೀರ್ ಮತ್ತು ಹಿರಾನಿ ಯೋಜನೆ ಹಾಕಿಕೊಂಡಿದ್ದರೂ, ಕಥೆ ತೃಪ್ತಿಕರವಾಗದ ಕಾರಣ  ಯೋಜನೆ ಕೈ ಬಿಡಲಾಯಿತು. ಬಳಿಕ ಹಿರಾನಿ ಸಂಪೂರ್ಣ ಗಮನವನ್ನು ‘3 ಈಡಿಯಟ್ಸ್ 2’ ಚಿತ್ರಕಥೆಗೆ ತಿರುಗಿಸಿದರು. ಕಥೆಯ ಕಲ್ಪನೆ ಹಲವು ವರ್ಷಗಳಿಂದ ಇದ್ದರೂ, ಅದನ್ನು ಸಂಪೂರ್ಣವಾದ ರೂಪಕ್ಕೆ ತರಲು ಈಗಾಗಲೇ ಸಮಯ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:  ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ 'ತತ್ವಮಸಿಯೇʼ ಹಾಡು ಹಾಡಿದ ನಟ ಡಾ. ಶಿವರಾಜ್‌ಕುಮಾರ್‌

ಹದಿನೈದು ವರ್ಷಗಳ ನಂತರ ಅಮೀರ್, ಕರೀನಾ, ಮಾಧವನ್, ಶರ್ಮಾನ್ ಹಾಗೂ ಹಿರಾನಿಯಂತಹ ಬಲಿಷ್ಠ ತಂಡ ಮತ್ತೆ ಒಂದಾಗುತ್ತಿರುವುದರಿಂದ, ‘3 ಈಡಿಯಟ್ಸ್ 2’ ಈ ದಶಕದ ಅತ್ಯಂತ ನಿರೀಕ್ಷಿತ ಬಾಲಿವುಡ್ ಚಿತ್ರಗಳಲ್ಲಿ ಒಂದಾಗಿದೆ. ಹೊಸ ಕಥೆ ಯಾವ ರೀತಿಯ ಮೆಸೇಜ್‌ ನೀಡುತ್ತದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಈಗಾಗಲೇ ಆತುರದಿಂದ ಕಾದಿದ್ದಾರೆ.

Trending News