‘45’ ಪ್ಯಾಂಟಸಿ ಲೋಕದ ಅನಾವರಣಕ್ಕೆ ಉಳಿದಿರೋದು 13 ದಿನ ಮಾತ್ರ..!

45 kannada movie update  : ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಸಿನಿಮಾ ಅಂದ್ರೆ ಅದು ‘45’.. ಈ ಅದ್ಧೂರಿ ಪ್ಯಾಂಟಸಿ ಸಿನಿಮಾ ರಿಲೀಸ್​ಗೆ ಇರೋದು ಕೇವಲ 13 ದಿನ ಮಾತ್ರ.. ಹಾಗಾದ್ರೆ ‘45’ ಸಿನಿಮಾದ ಕೆಲಸಗಳು ಹೇಗೆ ನಡೀತಾಯಿವೆ..? ಕರ್ನಾಟಕ ಸೇರಿ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ 45 ಸಿನಿಮಾದ ಹವಾ ಹೇಗಿದೆ..? ಅರ್ಜುನ್​ ಜನ್ಯ ಅವರ ಬತ್ತಳಿಕೆಯಿಂದ ಬರ್ತಾಯಿರೋ ‘45’ ಸಿನಿಮಾದ ಹೈ ಲೈಟ್ಸ್​ ಏನು ಹೇಳ್ತೀವಿ ಕೇಳಿ ಈ ಸ್ಟೋರಿಯಲ್ಲಿ 

Written by - Ramya R Gowda | Last Updated : Dec 12, 2025, 02:14 PM IST
  • ಇದೇ ಡಿಸೆಂಬರ್​ - 25ಕ್ಕೆ ‘45’ ಸಿನಿಮಾ ಅದ್ಧೂರಿ ರಿಲೀಸ್​..!
  • ಪ್ರೇಕ್ಷಕರಿಗೆ ಕಿಕ್​ ಕೊಟ್ಟ ‘45’ ಗ್ಲಿಂಪ್ಸ್​..! ಹಿಟ್ ಆದ ಆಫ್ರೋ ಸಾಂಗ್.
  • ಅರ್ಜುನ್​ ಜನ್ಯ ಬತ್ತಳಿಕೆಯಿಂದ ಮೂರು ಬಾಣಗಳ ಪ್ರಯೋಗ..!
‘45’ ಪ್ಯಾಂಟಸಿ ಲೋಕದ ಅನಾವರಣಕ್ಕೆ ಉಳಿದಿರೋದು 13 ದಿನ ಮಾತ್ರ..!

45 kannada movie update  : ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಭಾರತೀಯ ಸಿನಿಮಾಗಳಲ್ಲಿ ‘45’ ಸಿನಿಮಾ ಕೂಡ ಒಂದು..ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಷಯಕ್ಕೆ ‘45’ ವಿಶೇಷವಾಗಿದೆ.. ಅರ್ಜುನ್ ಜನ್ಯ ಡೈರೆಕ್ಷನ್​, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್,ಮತ್ತೊಂದು ಕಡೆ ರಿಯಲ್ ಸ್ಟಾರ್ ಉಪೇಂದ್ರ, ಇವರಿಬ್ಬರ ಮಧ್ಯೆ ವರ್ಸಟೈಲ್ ಆ್ಯಕ್ಟರ್​ ರಾಜ್ ಬಿ ಶೆಟ್ಟಿ..ಈ ಮೂವರನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡಿರುವ ಗಟ್ಟಿ ಗುಂಡಿಗೆಯ ನಿರ್ಮಾಪಕ ರಮೇಶ್ ರೆಡ್ಡಿ ಅವರ ಧೈರ್ಯವನ್ನು ಮೆಚ್ಚಲೇಬೇಕು..

Add Zee News as a Preferred Source

ಈಗಾಗಲೇ ರಿಲೀಸ್ ಆಗಿರುವ ಟೀಸರ್​, ಟ್ರೈಲರ್, ಗ್ಲಿಂಪ್ಸ್​ಗಳು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ..ಅದರಲ್ಲೂ ಇತ್ತೀಚೆಗೆರ ರಿಲೀಸ್ ಆದ ಆಫ್ರೋ ಟಪಾಂಗ್ ಸಾಂಗ್ ಆಡಿಯನ್ಸ್​ಗೆ ‘45’ ಸಿನಿಮಾದ ಕ್ರೇಜಿ ಇನ್ವಿಟೇಷನ್ ಇದ್ದಾಗೆ.. ಈ ಹಾಡಿನಲ್ಲಿ ಶಿವಣ್ಣ, ಉಪ್ಪಿ ಹಾಗೂ ರಾಜ್​ ಮೂವರು ಸಖತ್ ಸ್ಟೆಪ್ ಹಾಕಿದ್ದಾರೆ.. ಅದರಲ್ಲು ಶಿವಣ್ಣ ಕುಣಿದು ಕುಪ್ಪಳಿಸಿದ್ದಾರೆ..

ಇದನ್ನೂ ಓದಿ: ಕರಾವಳಿಯ ಹೆಣ್ಣು ಹುಲಿ ಸುಷ್ಮಾರಾಜ್‌ ಹೊಟ್ಟೆಯಲ್ಲಿ ಹುಲಿ ಮರಿ..!

ಅಂದ ಹಾಗೆ ಸಿನಿಮಾದಲ್ಲಿ ಈ ಹಾಡು ಇರೋದಿಲ್ಲವಂತೆ.. ಈ ಸಾಂಗ್ ಕೇವಲ ಪ್ರಮೋಷನ್ ಸಾಂಗ್​ ಅಷ್ಟೇ ಅಂತೆ.. ಕೇವಲ ಪ್ರಮೋಷನ್​ ಸಾಂಗ್ ಇಷ್ಟು ಖರ್ಚು ಮಾಡಿದ್ದಾರಾ ಅಂತ ಪ್ಯಾನ್ ಇಂಡಿಯಾ ಸಿನಿ ದುನಿಯಾ ಶೇಕ್ ಆಗಿದೆ. ಇದೇ ಡಿಸೆಂಬರ್​ 25ನೇ ತಾರೀಖು ‘45’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗ್ತಿದೆ. ಕನ್ನಡ ಸೇರಿ ಪಂಚಭಾಷೆಗಳಲ್ಲಿ ಸಿನಿಮಾ ತೆರೆಗೆ ಅಬ್ಬರಿಸಲಿದೆ.. ಸಿನಿಮಾದಲ್ಲಿ ಒಂದು ಪ್ಯಾಂಟಸಿ ಲೋಕವನ್ನೇ ಸೃಷ್ಟಿ ಮಾಡಿದ್ದಾರಂತೆ ನಿರ್ದೇಶಕ ಅರ್ಜುನ್ ಜನ್ಯ.. ರಾಮಾಯಣ..ಮಹಾಭಾರತ, ಭೀಮ, ದುರ್ಯೋಧನ, ಕಾಡು, ಬೆಟ್ಟ, ಸಿಂಹ, ಕೋಣ, ಹೀಗೇ ಏನೇನೋ ತೋರಿಸಲು ಹೊರಟಿದ್ದಾರೆ.. ಈ ಎಲ್ಲಾ ಕುತೂಹಲಳಿಗೆ ಇದೇ 25ಕ್ಕೆ ತೆರೆ ಬೇಳಲಿದೆ..  ಸ್ಟಾಂಡಲ್ವುಡ್‌ ದಿಗ್ಗಜರೇ ಇರುವ ಈ 45 ಲೋಕ ಹೇಗಿರಲಿದೆ ಅಂತ ಫ್ಯಾನ್ಸ್‌ ದಿನ ಲೆಕ್ಕ ಹಾಕ್ತಿದ್ದಾರೆ.

ಇದನ್ನೂ ಓದಿ: ಕೋಚ್‌ ಎಂಬ ಕಾರಣಕ್ಕೆ ಗೌತಮ್‌ ಗಂಭೀರ್‌ ಹೀಗೆನ್ನುವುದಾ?ಅರ್ಶ್​​ದೀಪ್​ ಸಿಂಗ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೇಕೆ?

About the Author

Ramya R Gowda

ರಮ್ಯಾ ಆರ್‌ ಗೌಡ 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

...Read More

Trending News