)
ameesha patel: ಬಾಲಿವುಡ್ ನಲ್ಲಿ ಬ್ಯಾಚುಲರ್ ಆಗಿ ಉಳಿದಿರುವ ಖ್ಯಾತ ನಟರಲ್ಲಿ ಸಲ್ಮಾನ್ ಖಾನ್ ಮೊದಲ ಸ್ಥಾನದಲ್ಲಿ ಇದ್ದಾರೆ. 59 ನೇ ವಯಸ್ಸಿನಲ್ಲಿಯೂ ಅವರು ಇನ್ನೂ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಚಿತ್ರೋದ್ಯಮಕ್ಕೆ ಬಾದ್ ಷಾ ಕಾಲಿಟ್ಟಾಗಿನಿಂದ, ಸಿನಿಮಾಗಳಿಗಿಂತ ನಟಿಯರೊಂದಿಗಿನ ಡೇಟಿಂಗ್ ರೂಮರ್ಸ್ನಿಂದಲೇ ಅವರು ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಇಂತಹ ವದಂತಿಗಳು ಆಗಾಗ ಹೊರಗೆ ಬಂದಾಗಲೆಲ್ಲಾ ಅವರ ಅಭಿಮಾನಿಗಳು ಇನ್ನೇನು ತಮ್ಮ ಹೀರೋ ಮದುವೆಯಾಗುತ್ತಾರೆ. ಎಂದು ಕಾತುರದಿಂದ ಕಾಯುತ್ತಿದ್ದರು. ಆದರೆ ನಟ ಇತ್ತೀಚೆಗೆ ಸಂದರ್ಶನಗಳಲ್ಲಿ ನೀಡಿದ ಕೆಲವು ಹೇಳಿಕೆಗಳಿಂದ ಫ್ಯಾನ್ಸ್ ಆಸೆಯೆಲ್ಲ ಹುಸಿಯಾದಂತೆ ಕಾಣಿಸುತ್ತದೆ.
ಚಿತ್ರೋದ್ಯಮದಲ್ಲಿ ಸಲ್ಮಾನ್ ಅವರು ಸೆನ್ಸೇಷನ್ ಆಗಿದ್ದ ಸಮಯದಲ್ಲಿ ಅವರನ್ನು ಮದುವೆಯಾಗಲು ಸಾಕಷ್ಟು ನಟಿಯರು ಕ್ಯೂನಲ್ಲಿ ನಿಲ್ಲುತ್ತಿದ್ದರು. ಈಗಲೂ ಅಷ್ಟೇ, ಅವರ ಕ್ರೇಜ್ ಕಡಿಮೆಯಾಗಿಲ್ಲ. ಸಲ್ಮಾನ್ ಅವರ ಬಾಳಸಂಗಾತಿಯಾಗಲು ನಾ ಮುಂದು.. ತಾ ಮುಂದು ಎನ್ನುವವರ ನಡುವೆ ಇಲ್ಲೊಬ್ಬ ಖ್ಯಾತ ನಟಿ ಅವರು ಮದುವೆಯಾಗದೇ ಹಾಗೆಯೇ ಉಳಿದಿದ್ದೇ ಒಳ್ಳೆಯದಾಯಿತು ಎಂದು ಹೇಳಿದ್ದಾರೆ. ಈ ರೀತಿ ಸೆನ್ಸೇಷನ್ ಹೇಳಿಕೆ ಕೊಟ್ಟವರು ಯಾರು..? ಯಾವ ಕಾರಣಕ್ಕೆ...? ಇಲ್ಲಿದೆ ನೋಡಿ ಉತ್ತರ.
ಇನ್ನು ಈ ರೀತಿ ಮಾತನಾಡಿದ ನಟಿಯ ವಯಸ್ಸು ಐವತ್ತಾಗಿದ್ದರೂ ಕೂಡ ಆಕೆ ಒಂಟಿ.. ಅವರಿಗೂ ಕೂಡ ಮದುವೆಯಾಗಿಲ್ಲ. ಆದ್ದರಿಂದಲೇ ಈ ರೀತಿ ಅವರು ಮಾತನಾಡಿದ್ದಾರೆ. ಅಷ್ಟಕ್ಕೂ ಸಲ್ಲು ಬಗ್ಗೆ ಈ ರೀತಿ ಶಾಕಿಂಗ್ ಕಾಮೆಂಟ್ ಮಾಡಿದವರು ಬೇರೆ ಯಾರು ಅಲ್ಲ. ಅವರು ಸಲ್ಮಾನ್ನೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ ಮತ್ತು ಪ್ರೀತಿಯ ಸ್ನೇಹಿತೆಯಾದ ಅಮಿಷಾ ಪಟೇಲ್. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅಮಿಷಾ ಪಟೇಲ್ ಸಲ್ಮಾನ್ ಅವರನ್ನು ಹೊಗಳಿದರು. "ಸಲ್ಮಾನ್ ತುಂಬಾ ಕೂಲ್ ಮತ್ತು ಅವರು ಎಂದಿಗೂ ಮದುವೆಯಾಗುವುದು ನನಗೆ ಇಷ್ಟವಿಲ್ಲ. ಅವರು ಕಾಳಜಿಯುಳ್ಳ ವ್ಯಕ್ತಿ ಮತ್ತು ಎಲ್ಲರೊಂದಿಗೆ ಚೆನ್ನಾಗಿರುತ್ತಾರೆ" ಎಂದು ನಟಿ ಹೇಳಿದರು.
ಸಂದರ್ಶನದಲ್ಲಿ, ಸಲ್ಮಾನ್ ಖಾನ್ ಅವರನ್ನು ಮದುವೆಯಾಗುವ ಬಗ್ಗೆಯೂ ಅಮಿಷಾ ಪಟೇಲ್ ಅವರನ್ನು ಕೇಳಲಾಯಿತು. ಇದರ ಬಗ್ಗೆ ನಟಿ, ನಾನು ಸಲ್ಮಾನ್ ಅವರ ಸಂಪೂರ್ಣ ಸಂದರ್ಶನವನ್ನು ತೆಗೆದುಕೊಂಡು ಅವರು ಸುಧಾರಿಸಿದ್ದಾರೋ ಇಲ್ಲವೋ ಎಂದು ನೋಡಬೇಕು ಎಂದು ಹೇಳಿದರು. ನಟಿ ಮತ್ತಷ್ಟು ಹೇಳಿದರು, "ಸಲ್ಮಾನ್ ಒಬ್ಬ ಒಳ್ಳೆಯ ಸ್ನೇಹಿತ, ನಾನು ಅವರನ್ನು ಆ ದೃಷ್ಟಿಕೋನದಿಂದ ಎಂದಿಗೂ ನೋಡಿಲ್ಲ, ಏಕೆಂದರೆ ಅವರು ಯಾವಾಗಲೂ ನನಗೆ ಆಪ್ತ ಸ್ನೇಹಿತ". ಎಂದು ಹೇಳುವ ಮೂಲಕ ಅವರಿಬ್ಬರ ನಡುವಿನ ಒಳ್ಳೆಯ ಸ್ನೇಹ ಸಂಬಂಧದ ಬಗ್ಗೆ ಹೇಳಿದರು.