)
2024 ರ ಹಿಂದಿ ಬಿಗ್ ಬಾಸ್ ಶೋ ಸೀಸನ್ 17 ರ ವಿಜೇತರಾಗಿದ್ದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರನ್ನು ಕೊಲ್ಲಲು ಒಂದು ಗ್ಯಾಂಗ್ ಸಂಚು ರೂಪಿಸಿತ್ತು. ಅವರ ಪ್ರಯತ್ನಗಳನ್ನು ದೆಹಲಿ ಪೊಲೀಸರು ವಿಫಲಗೊಳಿಸಿದ್ದಾರೆ. ರೋಹಿತ್ ಗೋದಾರಾ ಅವರ ಗ್ಯಾಂಗ್ನ ಇಬ್ಬರು ಸದಸ್ಯರಾದ ಗೋಲ್ಡಿ ಬ್ರಾರ್ ಮತ್ತು ವೀರೇಂದ್ರ ಚರಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮುನಾವರ್ ಫಾರೂಕಿ 2024 ರಲ್ಲಿ ಬಿಗ್ ಬಾಸ್ ಹಿಂದಿ ಶೋ ಗೆದ್ದರು. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 14.2 ಮಿಲಿಯನ್ ಫಾಲೋವರ್ಗಳಿದ್ದಾರೆ. ಕಳೆದ ವರ್ಷದಿಂದ ಅವರ ಜೀವಕ್ಕೆ ಬೆದರಿಕೆ ಇದೆ ಎಂದು ಗುಪ್ತಚರ ಅಧಿಕಾರಿಗಳು ಗುರುತಿಸಿದ್ದರು. ಅಂದಹಾಗ ಫಾರೂಕಿ ಅವರ ಹೆಸರು ಲಾರೆನ್ಸ್ ಬಿಷ್ಣೋಯ್ ಅವರ ಹಿಟ್ಲಿಸ್ಟ್ನಲ್ಲಿದೆ.
ಫಾರೂಕಿ ತಮ್ಮ ಕಾರ್ಯಕ್ರಮಗಳಲ್ಲಿ ಮಾಡುವ ಕಾಮೆಂಟ್ಗಳಿಂದಾಗಿ ಯಾವಾಗಲೂ ವಿವಾದಗಳಿಂದ ಸುತ್ತುವರೆದಿದ್ದಾರೆ. ನಾಲ್ಕು ವರ್ಷಗಳ ಹಿಂದೆ, ಅವರು ಒಂದು ಪ್ರಕರಣದಲ್ಲಿ 35 ದಿನಗಳ ಕಾಲ ಜೈಲಿನಲ್ಲಿದ್ದರು. ಇದಕ್ಕೂ ಮೊದಲು, ಫಾರೂಕಿ ಹೈದರಾಬಾದ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಬಯಸಿದ್ದರು. ಫಾರೂಕಿ ಇಲ್ಲಿ ಪ್ರದರ್ಶನ ನೀಡಿದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ರಾಜಾ ಸಿಂಗ್ ಎಚ್ಚರಿಸಿದ್ದರು.
ಜೈತುಪುರ್-ಕಾಳಿಂದಿ ಕುಂಜ್ ರಸ್ತೆಯಲ್ಲಿ ಕೊಲೆಗೆ ಸ್ಕೆಚ್ ರೂಪಿಸಿದ್ದ ಗ್ಯಾಂಗ್ ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಹರಿಯಾಣದ ಪಾಣಿಪತ್ ಮತ್ತು ಭಿವಾನಿ ಪ್ರದೇಶಗಳ ರಾಹುಲ್ ಮತ್ತು ಸಾಹಿಲ್ ಎಂದು ಪೊಲೀಸರು ಗುರುತಿಸಿದ್ದಾರೆ. ಗುಂಡಿನ ದಾಳಿಯಲ್ಲಿ ರಾಹುಲ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಡಿಸೆಂಬರ್ 2024 ರಲ್ಲಿ ಹರಿಯಾಣದ ಯಮುನಾನಗರದಲ್ಲಿ ನಡೆದ ತ್ರಿವಳಿ ಕೊಲೆಗೆ ಸಂಬಂಧಿಸಿದಂತೆ ಅವರು ವಾಂಟೆಡ್ ಪಟ್ಟಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶದಲ್ಲಿದ್ದ ಈ ಇಬ್ಬರು ವ್ಯಕ್ತಿಗಳು, ಗೋಲ್ಡಿ ಬ್ರಾರ್ ಮತ್ತು ವೀರೇಂದ್ರ ಚರಣ್ ಅವರೊಂದಿಗೆ ಫಾರೂಕಿಯನ್ನು ಕೊಲ್ಲಲು ಸಂಚು ರೂಪಿಸಿದ್ದರು. ಈ ಗ್ಯಾಂಗ್ನ ಸದಸ್ಯರು ಮುಂಬೈ ಮತ್ತು ಬೆಂಗಳೂರಿನಲ್ಲಿ ಫಾರೂಕಿಯ ಚಲನವಲನಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ.
ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಸದಸ್ಯರು ಮುನಾವರ್ ಫಾರೂಕಿಯನ್ನು ಗುರಿಯಾಗಿಸಿಕೊಂಡಿದ್ದು ಏಕೆಂದರೆ ಹಿಂದೂ ದೇವತೆಗಳ ಬಗ್ಗೆ ಫಾರೂಕಿ ಈ ಹಿಂದೆ ಮಾಡಿದ್ದ ಹಾಸ್ಯ. ಅವೆಲ್ಲವೂ ಆ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಆರೋಪಿಸಿದ್ದಾರೆ.