)
Coolie movie : 'ಕೂಲಿ' ಚಿತ್ರಕ್ಕಾಗಿ ರಜನಿಕಾಂತ್ ಅವರು 200 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ಚಿತ್ರದಲ್ಲಿ ಆಮಿರ್ ಖಾನ್ ಕೇವಲ 15 ನಿಮಿಷಗಳ ಕಾಲ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತಿದೆ. ಪ್ರಸ್ತುತ ಅವರ ಸಂಭಾವನೆಯ ಬಗ್ಗೆ ಅಚ್ಚರಿ ಮಾಹಿತಿ ಹೊರ ಬಿದ್ದಿದೆ.
ಹೌದು.. ಆಮಿರ್ ಖಾನ್ ಕೂಲಿ ಚಿತ್ರಕ್ಕೆ 20 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ, ಅವರು ಈ ಸಿನಿಮಾದಲ್ಲಿ ನಟಿಸಲು ಒಂದೇ ಒಂದು ರೂಪಾಯಿ ಪಡೆದಿಲ್ಲ ಎಂಬ ಹೊಸ ವರದಿಯೊಂದು ಬಹಿರಂಗವಾಗಿ. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಥೆಯನ್ನು ಕೇಳದೆಯೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ ಎಂದು ಆಮಿರ್ ಸ್ವತಃ ಹೇಳಿದ್ದರು. ಅಷ್ಟೇ ಅಲ್ಲ, ಅವರು ರಜನಿಕಾಂತ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದರು..
ಆಮಿರ್ ಇಡೀ ಕಥೆಯನ್ನು ಕೇಳದೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರಂತೆ. ಅಲ್ಲದೆ, ಈ ಚಿತ್ರತಂಡದೊಂದಿಗಿನ ಅವರ ಉತ್ತಮ ಬಾಂಧವ್ಯದಿಂದಾಗಿ ಯಾವುದೇ ಸಂಭಾವನೆಯನ್ನು ಪಡೆದಿಲ್ಲ" ಎಂದು ಆಮಿರ್ ಖಾನ್ ಅವರ ಆಪ್ತ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಈ ಮಧ್ಯೆ, ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಾಗಾರ್ಜುನ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಮಾತಿದೆ. ಅದೇ ರೀತಿ, ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಸತ್ಯರಾಜ್ 5 ಕೋಟಿ ರೂ., ಉಪೇಂದ್ರ 4 ಕೋಟಿ ರೂ., ಶ್ರುತಿ ಹಾಸನ್ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ನಿರ್ದೇಶಕ ಲೋಕೇಶ್ ಕನಕರಾಜ್ 50 ಕೋಟಿ ರೂ. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಅನಿರುದ್ಧ್ ರವಿಚಂದರ್ 15 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡು ಈ ಕುರಿತು ಯಾವುದೇ ಅಧಿಕೃತ ವರದಿ ನೀಡಿಲ್ಲ. ಇದು ಕೇವಲ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ.