)
Aamir Khan : ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಜನಪ್ರಿಯರಾಗಿರುವ ನಟ ಅಮಿರ್ ಖಾನ್ ತಮ್ಮ ಮುಂಬರುವ ಚಿತ್ರ 'ಸಿತಾರೆ ಜಮೀನ್ ಪರ್' ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಚಿತ್ರವು ಜೂನ್ 20, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 'ಲಾಲ್ ಸಿಂಗ್ ಚಡ್ಡಾ' ಚಿತ್ರದ ನಂತರ, ಅಭಿಮಾನಿಗಳು ಅಮಿರ್ ಖಾನ್ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ಅಮಿರ್ ಖಾನ್ ನಟನೆಗೆ ವಿದಾಯ ಹೇಳುವ ಬಗ್ಗೆ ಮಾತನಾಡಿದ್ದಾರೆ. ಇದು ಅವರು ಶೀಘ್ರದಲ್ಲೇ ಚಿತ್ರೋದ್ಯಮಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಸೂಚನೆ ನೀಡುವಂತಿದೆ.
ಅಮಿರ್ ಖಾನ್ ತಮ್ಮ ಕೊನೆಯ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಅಮಿರ್ ಖಾನ್ ಬಹಳ ದಿನಗಳಿಂದ 'ಮಹಾಭಾರತ' ಸಿನಿಮಾ ಮಾಡುವ ಬಯಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಅವರು ಈ ಮಹಾಕಾವ್ಯ ಆಧಾರಿತ ಸಿನಿಮಾ ಅವರ ಕೊನೆಯ ಚಿತ್ರವಾಗಬಹುದು ಎಂದು ಹೇಳಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುತ್ತಾ, "ಸದ್ಯಕ್ಕೆ, ನನ್ನ ಸಂಪೂರ್ಣ ಗಮನ 'ಸೀತಾರೆ ಜಮೀನ್ ಪರ್' ಚಿತ್ರದ ಮೇಲಿದೆ. ಮಹಾಭಾರತವನ್ನು ಆಧರಿಸಿದ ದೊಡ್ಡ ಪ್ರಾಜೆಕ್ಟ್ ಮಾಡುವುದು ನನ್ನ ಆಸೆ. ಸೀತಾರೆ ಜಮೀನ್ ಪರ್ ಬಿಡುಗಡೆಯಾದ ನಂತರ ನಾನು ನನ್ನ ಕನಸಿನ ಪ್ರಾಜೆಕ್ಟ್ ಮೇಲೆ ಕೇಂದ್ರೀಕರಿಸುತ್ತೇನೆ. ನಾನು ಅದನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಬಯಸುತ್ತೇನೆ. ನಾವು ಜಗತ್ತಿನಲ್ಲಿ ನೋಡುವ ಎಲ್ಲವೂ ಮಹಾಭಾರತದ ಭಾಗವಾಗಿದೆ. ಅದರಲ್ಲಿ ಹಲವು ಕೋನಗಳು ಮತ್ತು ಭಾವನೆಗಳಿವೆ" ಎಂದು ಅಮಿರ್ ಖಾನ್ ಹೇಳಿದ್ದಾರೆ.
"ಇಂದಿನ ಪ್ರೇಕ್ಷಕರಿಗೆ ಇದನ್ನು ಪ್ರಸ್ತುತಪಡಿಸಲು ನಾವು ದೊಡ್ಡ ಪ್ರಮಾಣದಲ್ಲಿ ತಯಾರಿ ನಡೆಸಬೇಕು. ನಾನು ಈ ಕಥೆಯೊಂದಿಗೆ ಹಲವು ವರ್ಷಗಳಿಂದ ಪ್ರಯಾಣಿಸುತ್ತಿದ್ದೇನೆ. ನಾನು ಅದನ್ನು ಅದ್ಭುತ ರೀತಿಯಲ್ಲಿ ಪ್ರೇಕ್ಷಕರಿಗೆ ಬೆಳ್ಳಿ ಪರದೆಯ ಮೇಲೆ ತೋರಿಸುವ ಕನಸು ಕಾಣುತ್ತಿದ್ದೇನೆ. ಆದರೆ ಈ ಚಿತ್ರದ ನಂತರ, ಉದ್ಯಮದಲ್ಲಿ ನಟನಾಗಿ ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೆ" ಎಂದು ಅಮಿರ್ ಖಾನ್ ಹೇಳಿದರು.
ಅಮಿರ್ ಖಾನ್ ಅವರ ಈ ಮಾತುಗಳು ಅವರ ಅಭಿಮಾನಿಗಳಿಗೆ ಶಾಕ್ ನೀಡಿವೆ. ತಮ್ಮ ನೆಚ್ಚಿನ ನಟ ನಟನೆಗೆ ವಿದಾಯ ಹೇಳುವ ಸೂಚನೆ ಸಿಕ್ಕಿದ್ದು, ಇದರಿಂದ ಬೇಸರಗೊಂಡಿದ್ದಾರೆ. ಅಮಿರ್ ಖಾನ್ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ನ ಸ್ಟಾರ್ ನಟ. ಇವರ ವಿದಾಯದ ಮುನ್ಸೂಚನೆ ಚಿತ್ರರಂಗದಲ್ಲಿ ಬಹುದೊಡ್ಡ ಚರ್ಚೆ ಹುಟ್ಟುಹಾಕಿದೆ.
ಈ ಹಿಂದೆ, ಹಾಲಿವುಡ್ ರಿಪೋರ್ಟರ್ ಜೊತೆಗಿನ ಸಂಭಾಷಣೆಯಲ್ಲಿ, ಅಮೀರ್ ಖಾನ್ 'ಮಹಾಭಾರತ'ದ ಬಗ್ಗೆ ಮಾತನಾಡಿದ್ದರು. 'ಇದು ನನ್ನ ದೊಡ್ಡ ಮಹತ್ವಾಕಾಂಕ್ಷೆಗಳಲ್ಲಿ ಒಂದಾಗಿದೆ. ಯಾವ ಪಾತ್ರಕ್ಕೆ ನಾವು ಯಾರು ಸರಿ ಎಂದು ಹುಡುಕುತ್ತಿದ್ದೇವೆ. 'ಮಹಾಭಾರತ'ವನ್ನು ಒಂದೇ ಚಿತ್ರದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಅದು ಹಲವು ಭಾಗಗಳನ್ನು ಹೊಂದಬಹುದು' ಎಂದು ತಿಳಿಸಿದ್ದರು.
ಆಮೀರ್ ಪ್ರಸ್ತುತ 'ಸಿತಾರೆ ಜಮೀನ್ ಪರ್' ರಿಲೀಸ್ಗಾಗಿ ತಯಾರಿ ನಡೆಸುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ರಜನಿಕಾಂತ್ ಅವರ 'ಕೂಲಿ' ಚಿತ್ರದಲ್ಲೂ ಆಮೀರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ರಾಜ್ಕುಮಾರ್ ಸಂತೋಷಿ ನಿರ್ದೇಶನದ ಸನ್ನಿ ಡಿಯೋಲ್ ಅವರ 'ಲಾಹೋರ್ 1947' ಚಿತ್ರವನ್ನು ಸಹ ಆಮೀರ್ ಖಾನ್ ನಿರ್ಮಿಸುತ್ತಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.