Aaradhya Bachchan Social Media: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್‌ಗೆ ಇದೀಗ 16 ವರ್ಷ ವಯಸ್ಸು. ಬಾಲಿವುಡ್ ಕಿಡ್‌ಗಳು ಎಂದರೆ ಕಲ್ಪನೆಯೇ ಬೇರೆ ರೀತಿ ಇರುವ ಕಾಲದಲ್ಲಿ, ಆರಾಧ್ಯ ವಿಭಿನ್ನ. ತನ್ನ ತಾಯಿಯೊಂದಿಗೆ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಅವರು ತುಂಬಾ ವಿನಯದಿಂದ, ಸರಳವಾಗಿ ಜೀವನ ನಡೆಸುತ್ತಿರುವವರು.
ಕೆಲವರು ಐಶ್ವರ್ಯಾ ತಾಯಿಯಾಗಿ ಮಗಳನ್ನು ನೋಡಿಕೊಳ್ಳುವ ಪರಿಯನ್ನು ಮೆಚ್ಚುತ್ತಾರೆ. ಇನ್ನೂ ಕೆಲವರು ನಟಿ ತನ್ನ ಮಗಳ ಕೈ ಹಿಡಿದಿದ್ದಕ್ಕಾಗಿ ಆಗಾಗ್ಗೆ ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ಇವೆಲ್ಲದಕ್ಕೆ ಕ್ಯಾರೇ ಅನ್ನದ ಐಶ್ವರ್ಯಾ ಆರಾಧ್ಯಳನ್ನು ತನ್ನದೇ ಆದ ರೀತಿಯಲ್ಲಿ ಬೆಳೆಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ, ಅಭಿಷೇಕ್ ಕೂಡ ಸಪೋರ್ಟ್ ಮಾಡುತ್ತಿದ್ದು ಇದರ ಎಲ್ಲಾ ಕ್ರೆಡಿಟ್ ಅನ್ನು ತನ್ನ ಹೆಂಡತಿಗೆ ನೀಡುತ್ತಾರೆ.
ಅಂದಹಾಗೆ ಆರಾಧ್ಯ ಬಳಿ ಫೋನ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಯೂ ಇಲ್ಲ ಎಂದು ನಿಮಗೆ ತಿಳಿದಿದೆಯೇ? ಆಕೆಯ ಪೋಷಕರು ಆಕೆಯ ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರವಿಡಲು ಪ್ರಯತ್ನಿಸುತ್ತಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಅಭಿಷೇಕ್ ಬಚ್ಚನ್ ಆರಾಧ್ಯ ಬಗ್ಗೆ ಮಾತನಾಡಿದ್ದರು. "ಆರಾಧ್ಯಳನ್ನು ಬೆಳೆಸಿದ ರೀತಿಯ ಎಲ್ಲಾ ಕ್ರೆಡಿಟ್ ಅನ್ನು ಐಶ್ವರ್ಯಾಗೆ ನೀಡುತ್ತೇನೆ" ಎಂದು ಅವರು ಹೇಳಿದ್ದರು. "ನನಗೆ ಹೊರಗೆ ಹೋಗಿ ಚಲನಚಿತ್ರಗಳನ್ನು ಮಾಡಲು ಸ್ವಾತಂತ್ರ್ಯವಿದೆ, ಆದರೆ ಆರಾಧ್ಯ ಅವಳೊಂದಿಗೆ ಇರಬೇಕೆ ಎಂಬುದು ಐಶ್ವರ್ಯಾ ಅವರ ನಿರ್ಧಾರ. ಇದು ಅದ್ಭುತ" ಎಂದಿದ್ದರು.
ಇಂದಿನ ಯುವಕರು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಿದ್ದರೂ, ಆರಾಧ್ಯ ಬಳಿ ಫೋನ್ ಆಗಲಿ ಅಥವಾ ಸೋಶಿಯಲ್ ಮೀಡಿಯಾ ಅಕೌಂಟ್ ಆಗಲಿ ಇಲ್ಲ. ಇನ್ನು ಇದೇ ವಿಚಾರದ ಬಗ್ಗೆ ಅಭಿಷೇಕ್ ಅವರು ಸ್ನ್ಯಾಪ್‌ಚಾಟ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಿಂದ ದೂರವಿರುವುದಾಗಿ ವಿವರಿಸಿದ್ದರು. "ಅವಳು ಅದ್ಭುತವಾದ ಪುಟ್ಟ ಮಹಿಳೆಯಾಗುತ್ತಿದ್ದಾಳೆ. ನನಗೆ ಅವಳ ಬಗ್ಗೆ ಹೆಮ್ಮೆ ಇದೆ" ಎಂದು ಹೇಳಿದರು.
ಸಿನಿಮಾ ಮತ್ತು ಇತರ ವೃತ್ತಿಜೀವನದ ನಡುವೆಯೂ, ಅವರು ಆರಾಧ್ಯಗಾಗಿ ಸಮಯವನ್ನು ಕಂಡುಕೊಳ್ಳುತ್ತಾರೆ. ಅವರ ಪಾಲನೆಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದಾರೆ ಎಂದು ಪತ್ನಿಯ ಆರೈಕೆ ಮನೋಭಾವವನ್ನು ಅಭಿಷೇಕ್ ಕೊಂಡಾಡಿದ್ದಾರೆ. "ನಾನು ಚಲನಚಿತ್ರಗಳನ್ನು ಮಾಡಲು ಹೋಗುತ್ತೇನೆ, ಆದರೆ ಐಶ್ವರ್ಯ ಮನೆಯಲ್ಲಿ ಬಹಳಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ತಾಯಿಯ ಪ್ರೀತಿ ಮತ್ತು ಸಮರ್ಪಣೆಗೆ ಸಾಟಿಯಿಲ್ಲ" ಎಂದು ಹೇಳಿದರು.









