Abhishek Ambaresh in Interview: ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಅಂಬರೀಶ್ ಇಬ್ಬರೂ ತುಂಬಾನೇ ಆತ್ಮೀಯರು ಎಂಬ ವಿಷಯ ಇಡೀ ಇಂಡಸ್ಟ್ರಿಗೆ, ಅವರ ಅಭಿಮಾನಿ ಬಳಗಕ್ಕೆ ಗೊತ್ತೇ ಇದೆ. ಅದರಲ್ಲೂ ದರ್ಶನ್ ಹಾಗೂ ಅಂಬರೀಶ್ ಕುಟುಂಬದ ನಡುವಿನ ಸಂಬಂಧ ಚೆನ್ನಾಗಿಯೇ ಇರುವುದರಿಂದ, ದರ್ಶನ್ ಸಿನಿಮಾಗೆ ಅಭಿಷೇಕ್, ಅಭಿ ಸಿನಿಮಾಗೆ ದರ್ಶನ್ ಸದಾ ಬೆಂಬಲವಾಗಿ ನಿಂತಿರುತ್ತಾರೆ. 


COMMERCIAL BREAK
SCROLL TO CONTINUE READING

ದರ್ಶನ್ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಹಲವರ ಆಸೆಯಾಗಿದ್ದು, ಅದೇ ಮತ್ತೆ ಕೆಲವು ನಟರಿಗೆ ಅವರ ಚಿತ್ರದಲ್ಲಿ ದರ್ಶನ್ ಚಿಕ್ಕ ಪಾತ್ರದಲ್ಲಿ ನಟಿಸಬೇಕು ಅನ್ನೋ ಹಂಬಲ. ಅಭಿಷೇಕ್ ಅಂಬರೀಶ್ ಮೊದಲ ಸಿನಿಮಾದಲ್ಲೇ ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಈಗ ದರ್ಶನ್ ಸಿನಿಮಾದಲ್ಲಿ ಅಭಿಷೇಕ್ ವಿಲನ್ ಆಗಿ ಕಾಣಿಸಿಕೊಳ್ಳಬೇಕು ಅನ್ನೋ ಬಯಕೆ ಅಭಿಮಾನಿಗಳಾಗಿದ್ದು, ಇತ್ತೀಚೆಗೆ ನಟ ಅಭಿಷೇಕ್ ಅಂಬರೀಶ್  ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ, ದರ್ಶನ್ ಸಿನಿಮಾ ವಿಲನ್ ಆಗಿ ನಟಿಸುತ್ತೀರಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.  ಅದಕ್ಕೆ ಅಭಿಷೇಕ್ ಅಂಬರೀಶ್ ಕೊಟ್ಟ ಉತ್ತರ ಕೂಡ ಕ್ಲಾಸಿಕ್ ಆಗಿದೆ. 


ಇದನ್ನು ಓದಿ: ಸಂಗೀತಾ ಶೃಂಗೇರಿ ಜೊತೆ ಸ್ನೇಹಿತ್ ಮದುವೆ‌ ಫಿಕ್ಸ್‌.. ಇದು ಕುಟುಂಬದವರ ನಿರ್ಧಾರವಂತೆ!


ಹೌದು... ಅಭಿಷೇಕ್ ಅಂಬರೀಶ್ ಯಾವಾಗಲೂ ದರ್ಶನ್‌ರನ್ನು ನಮ್ಮಣ್ಣ ಅಂತಲೇ ಹೇಳುತ್ತಿದ್ದು, ವೃತ್ತಿ ಇರಲಿ ವೈಯಕ್ತಿಕ ವಿಷಯಗಳಿರಲಿ, ಅವರೊಂದಿಗೆ ಚರ್ಚೆ ಮಾಡುವಷ್ಟು ಸಲಿಗೆ ಇಬ್ಬರ ಮಧ್ಯೆಯಿದೆ. ಇನ್ನು ಒಂದೇ ಸಿನಿಮಾದಲ್ಲಿ ನಟಿಸೋ ವಿಚಾರ ಬಂದಾಗ ಅಭಿಷೇಕ್ "ದರ್ಶನ್ ಸಿನಿಮಾ ವಿಲನ್ ಆಗಿ ನಟಿಸುವುದಕ್ಕೆ ಅವಕಾಶ ಬಂದರೆ ಖಂಡಿತಾ ಮಾಡುತ್ತೇನೆ. ಅವರೊಂದಿಗೆ ನಟಿಸುವುದಕ್ಕೆ ನನಗೆ ಇಷ್ಟ. ಅದು ಯಾವುದೇ ರೋಲ್ ಇರಲಿ. ನಾನು ನಟನೆ ಮಾಡುತ್ತೇನೆ." ಎಂದು ಹೇಳಿದ್ದಾರೆ. 


ಈಗಾಗಲೇ ಅಭಿಷೇಕ್ ಅಂಬರೀಶ್ ಚಾಲೆಂಜಿಂಗ್ ಸ್ಟಾರ್ ಬಳಿ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆನೂ ಮಾತಾಡಿದ್ದಾಗಿ ಹೇಳಿಕೊಂಡಿದ್ದು, "ಕೇಳಿದ್ದೀನಿ ಯಾವಾಗ ಮಾಡೋಣ ಅಂತ. ಕಥೆ ಚೆನ್ನಾಗಿದ್ದರೆ ಖಂಡಿತಾ ಮಾಡೋಣ ಅಂತ ಹೇಳಿದ್ದಾರೆ. ಅದು ಒಳ್ಳೆ ಪಾತ್ರನೋ ಇನ್ನೊಂದು. ಆ ಸಿನಿಮಾಗೆ ನನ್ನಿಂದ ಒಳ್ಳೆಯದಾಗುತ್ತೆ ಅಂದರೆ ಖಂಡಿತಾ ಮಾಡುತ್ತೇನೆ. ಇಂತಹ ಸಮಾಗಮ ಆಗಬೇಕು. ಹಾಗಂತ ಮಾರ್ಕೆಟಿಂಗ್ ಹಾಗೂ ಹಣದ ದೃಷ್ಟಿಯಿಂದ ಅಂತಲ್ಲ. ಕಥೆಗೆ ಡಿಮ್ಯಾಂಡ್ ಇದ್ದರೆ ಖಂಡಿತಾ ಒಂದೇ ಸಿನಿಮಾದಲ್ಲಿ ನಟಿಸಬಹುದು. ಅವರು ಇಲ್ಲ ಅನ್ನೋದಿಲ್ಲ. ನಾನು ಇಲ್ಲ ಅನ್ನೋದಿಲ್ಲ. " ಎಂದು ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುವ ಬಗ್ಗೆ ಓಪನ್ ಆಗಿ ಸಂದರ್ಶನದಲ್ಲಿ ಮಾತಾಡಿದ್ದಾರೆ.



 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.