ಪುನಃ ತಾಯಿಯಾಗಲಿದ್ದಾರೆಯೇ ಐಶ್ವರ್ಯ ರೈ? ಅಭಿಷೇಕ್ ಟ್ವೀಟ್ ನ ಗುಟ್ಟೇನು?

ಖ್ಯಾತ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಸದ್ಯ ಒಂದು ಟ್ವೀಟ್ ಮಾಡುವ ಮೂಲಕ  ಸುದ್ದಿ ಮಾಡಿದ್ದಾರೆ. ಅಭಿಷೇಕ್ ಮಾಡಿರುವ ಟ್ವೀಟ್ ನೋಡಿ ಐಶ್ವರ್ಯ ರೈ ಅವರ ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದಾರೆ.  

Updated: Jan 22, 2020 , 04:08 PM IST
ಪುನಃ ತಾಯಿಯಾಗಲಿದ್ದಾರೆಯೇ ಐಶ್ವರ್ಯ ರೈ? ಅಭಿಷೇಕ್ ಟ್ವೀಟ್ ನ ಗುಟ್ಟೇನು?

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗಳು ಕಳೆದ ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇವೆ. ಆದರೆ, ಇತ್ತೀಚೆಗಷ್ಟೇ ಅವರ ಪತಿ ಹಾಗೂ ಖ್ಯಾತ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಟ್ವೀಟ್ ವೊಂದನ್ನು ಮಾಡಿದ್ದು, ಇದು ಆರಾಧ್ಯಾ ಬಚ್ಚನ್ ಗೆ ಸಹೋದರ/ಸಹೋದರಿ ಸಿಗುವ ಮುನ್ಸೂಚನೆ ಎಂದು ಐಶ್ವರ್ಯಾ ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಇದಾದ ಬಳಿಕ ಐಶ್ವರ್ಯಾ ಮತ್ತೆ ತಾಯಿಯಾಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲಾರಂಭಿಸಿವೆ.

ಸ್ವತಃ ಅಭಿಷೇಕ್ ಬಚ್ಚನ್ ಅವರೇ ಈ ಕುರಿತು ಚಿಕ್ಕದೊಂದು ಲೈನ್ ಟ್ವೀಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿದ್ದರು. ಆದರೆ, ಅವರ ಟ್ವೀಟ್ ನಲ್ಲಿ ಈ ಕುರಿತು ಯಾವುದೇ ಸ್ಪಷ್ಟನೆ ಇರಲಿಲ್ಲ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದ ಅಭಿಷೇಕ್, "ಸ್ನೇಹಿತರೆ ! ನಿಮ್ಮೆಲ್ಲರಿಗೂ ಒಂದು ಸರ್ಪ್ರೈಸ್ ಕಾದಿದೆ.. ಸ್ಟೇ ಟ್ಯೂನ್ಡ್" ಎಂದಿದ್ದರು. ಇದನ್ನು ಅಭಿಮಾನಿಗಳು ಎರಡನೇ ಮಗುವಿನ ಸಂಕೇತ ಎಂದು ಭಾವಿಸಿದ್ದಾರೆ. 

ಅಭಿಷೇಕ್ ಅವರ ಈ ಟ್ವೀಟ್ ಮುಂದೆ ಬರುತ್ತಿದ್ದಂತೆ ಅಭಿಮಾನಿಗಳು ಅಭಿಷೇಕ್ ನೀಡಲು ಹೊರಟಿರುವ ಸರ್ಪ್ರೈಸ್ ತಿಳಿದುಕೊಳ್ಳಲು ಕಾಮೆಂಟ್ ಗಳ ಸರಣಿಯನ್ನು ಸೃಷ್ಟಿಸಿದ್ದಾರೆ. ಕೆಲವರು 'ಸೆಕೆಂಡ್ ಬೇಬಿ' ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು 'ಎರಡನೇ ಮಗು ', 'ನೀವು ಮತ್ತೆ ತಂದೆಯಾಗಿಲಿದ್ದೀರಿ', 'ಐಶ್ವರ್ಯಾಗೆ ಸಹೋದರ ಸಿಗಲಿದ್ದಾನೆ' ಎಂಬ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಷ್ಟೇ ಯಾಕೆ ನೋಡುತ್ತಲೇ ಸಾಮಾಜಿಕ ಮಾಧ್ಯಮಗಳಲ್ಲಿ ಐಶ್ವರ್ಯ ಮತ್ತೆ ತಾಯಿಯಾಗುವ ಸುದ್ದಿ ಹರಿದಾಡಲಾರಂಭಿಸಿದೆ.

ಆದರೆ, ಸ್ವಲ್ಪೇ ಸಮಯದ ಅಂತರದಲ್ಲಿ ಅಭಿಷೇಕ್ ತಮ್ಮ ತಂದೆ ಅಮಿತಾಭ್ ಬಚ್ಚನ್ ಅಭಿಯನಯ 'ಝುಂಡ್'  ಚಿತ್ರದ ಟೀಸರ್ ಬಿಡುಗಡೆಗೊಳಿಸಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ಸರ್ಪ್ರೈಸ್ ಎಂದು ಹೇಳಿ ಸಾಮಾಜಿಕ ಮಾಧ್ಯಮದಲ್ಲಿ ಹಂಗಾಮಾ ಸೃಷ್ಟಿಸಿದ ಅಭಿಷೇಕ್ ಅವರ ಟ್ವೀಟ್ ಗೆ ಅಭಿಮಾನಿಗಳು ಹೈರಾಣಾಗಿದ್ದಾರೆ. ಆದರೆ, ಎರಡನೇ ಬಾರಿಗೆ ಅಭಿಷೇಕ್ ತಂದೆಯಾಗುತ್ತಿರುವ ಕುರಿತು ಅಭಿಮಾನಿಗಳು ಮಾಡಿರುವ ಕಾಮೆಂಟ್ ಗಳಿಗೆ ಅಭಿಷೇಕ್ ಯಾವುದೇ ಉತ್ತರ ನೀಡಿಲ್ಲ.

ಅಭಿಷೇಕ್ ಅವರ ವರ್ಕ್ ಫ್ರಂಟ್ ಕುರಿತು ಮಾತನಾಡುವುದಾದರೆ, ಕೊನೆಯ ಬಾರಿಗೆ ಅಭಿಷೇಕ್ 'ಮನಮರ್ಜಿಯಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅಭಿಷೇಕ್, ಶಾರುಕ್ ಅವರ ರೆಡ್ ಚಿಲೀಸ್ ಎಂಟರ್ಟೈನ್ಮೆಂಟ್  ಅಡಿ 'ಬಾಬ್ ಬಿಸ್ಬಾಸ್' ಪ್ರಾಜೆಕ್ಟ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಅವರ ಮತ್ತೊಂದು ಚಿತ್ರ 'ಬಿಗ್ ಬುಲ್' ಪೋಸ್ಟರ್ ಕೂಡ ಬಿಡುಗಡೆಯಾಗಿದೆ.