ಮುಂಬೈ: ಆಮಿರ್ ಖಾನ್ ತಮ್ಮ ಹುಟ್ಟುಹಬ್ಬದಂದು ಬೆಂಗಳೂರು ಮೂಲದ ಗೌರಿ ಎನ್ನುವ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾರೆ. ಇಬ್ಬರು ಕಳೆದ 25 ವರ್ಷಗಳಿಂದ ಪರಸ್ಪರ ಪರಿಚಯವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳ ಎದುರು ಈ ವಿಷಯವನ್ನು ನಟ ಅಮೀರ್ ಖಾನ್ ಬಹಿರಂಗಪಡಿಸಿದಾಗ ಗೌರಿ ಅವರೊಂದಿಗೆ ಇದ್ದರು, ಆದರೆ ಅವರು ಮಾಧ್ಯಮದವರು ತಮ್ಮ ಚಿತ್ರಗಳನ್ನು ಕ್ಲಿಕ್ ಮಾಡದಂತೆ ವಿನಂತಿಸಿದರು. ಈ ಸಮಯದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೂ ಗೌರಿ ಉತ್ತರಿಸಿದರು.
ಮಾಧ್ಯಮದ ವರದಿಯ ಪ್ರಕಾರ, ಆಮಿರ್ ಅವರಲ್ಲಿ ಹೆಚ್ಚು ರೋಮ್ಯಾಂಟಿಕ್ ಆಗಿ ಇರುವುದೇನು? ಎಂದು ಮಾಧ್ಯಮವರು ಗೌರಿಯನ್ನು ಕೇಳಿದಾಗ ಇದಕ್ಕೆ ಉತ್ತರಿಸಿದ ಅವರು, ಪ್ರತಿದಿನ ಅವರು ತನಗೋಸ್ಕರ ಏನನ್ನಾದರೂ ವಿಶೇಷವಾಗಿ ಮಾಡುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.ಆಮಿರ್ ಖಾನ್ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರಾದ ಸಲ್ಮಾನ್ ಮತ್ತು ಶಾರುಖ್ ಅವರಿಗೆ ಗೌರಿಯನ್ನು ಪರಿಚಯಿಸಿರುವುದಾಗಿ ಹೇಳಿದರು.
ಯಾರು ಈ ಗೌರಿ ಸ್ಪ್ರಾಟ್..?
ಮೂಲತಃ ಬೆಂಗಳೂರಿನವರಾದ ಗೌರಿ ಬೆಂಗಳೂರಿನಲ್ಲಿ ಸಲೂನ್ ಶಾಪ್ ವೊಂದನ್ನು ಹೊಂದಿದ್ದಾರೆ.ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಗೌರಿ ಬ್ಲೂ ಮೌಂಟೇನ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ ಮತ್ತು 2004 ರಲ್ಲಿ ಲಂಡನ್‌ನ ಕಲಾ ವಿಶ್ವವಿದ್ಯಾಲಯದಿಂದ ಎಫ್‌ಡಿಎ ಸ್ಟೈಲಿಂಗ್ ಮತ್ತು ಛಾಯಾಗ್ರಹಣ ಎಂಬ ಫ್ಯಾಷನ್ ಕೋರ್ಸ್ ಅನ್ನು ಸಹ ಮುಗಿಸಿದ್ದಾರೆ.ಸದ್ಯ ಮುಂಬೈನಲ್ಲಿ ಬಿಬ್ಲಂಟ್ ಸಲೂನ್ ಅನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.ಗುರುವಾರ ಮಾಧ್ಯಮಗಳೊಂದಿಗಿನ ಸಂವಾದದ ಸಂದರ್ಭದಲ್ಲಿ, ಗೌರಿ ಅವರು ಈಗ ಆಮಿರ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಗೌರಿಗೆ ಆರು ವರ್ಷದ ಮಗುವಿದೆ ಮತ್ತು ಆಮಿರ್ ಅವರನ್ನು 25 ವರ್ಷಗಳಿಂದ ತಿಳಿದಿದ್ದಾರೆ. ಅವರು 18 ತಿಂಗಳ ಹಿಂದೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









