Darshan cry : ಪರಪ್ಪನ ಅಗ್ರಹಾರ ಜೈಲಿನ ಸೆರೆವಾಸದಲ್ಲಿರುವ ದರ್ಶನ್ ಫ್ಯಾನ್ಸ್‌ಗಳ ಸಂಭ್ರಮಾಚರಣೆಯನ್ನ ಕಂಡು ಭಾವುಕರಾಗಿದಾರೆ.
ಪರಪ್ಪನ ಅಗ್ರಹಾರ ಜೈಲಿನ ಸೆರೆವಾಸದಲ್ಲಿರುವ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಇಂದು ಡೆವಿಲ್ ಸಿನಿಮಾ ಬಿಡುಗಡೆಯಾಗಿದೆ..ನಿನ್ನೆ ದರ್ಶನ್ ಇರುವ ಕೊಠಡಿಗೆ ಟಿವಿ ಅಳವಡಿಸಲಾಗಿದೆ ನಿನ್ನೆ ರಾತ್ರಿ ಇಡೀ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿರೊದನ್ನ ಕಂಡು ಕಣ್ಣಿರಾಗಿದ್ದಾರೆ.. ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ಸಿನಿಮಾ ರಿಲೀಸ್ ಆಗಿದೆ ಜೈಲಿನಲ್ಲಿ ದರ್ಶನ್ ದೇಹಮಾತ್ರವಿದೆ..ಮನಸ್ಸೆಲ್ಲಾ ಫ್ಯಾನ್ಸ್‌ಗಳತ್ತ ಇದೆ. ಟಿವಿಯಲ್ಲಿ ಡೆವಿಲ್ ಹಬ್ಬ ನೋಡಿ ಜೈಲಿನಲ್ಲಿ ದರ್ಶನ್ ಚಡಪಡಿಸಿದ್ದಾರೆ..
ಸಿನಿಮಾ ರಿಲೀಸ್‌ನಿಂದಾಗಿ ಕಳೆದೆರಡು ದಿನಗಳಿಂದ ಟೆನ್ಷನ್‌ನಲ್ಲಿಯೇ ದರ್ಶನ್ ಇದ್ದರು. ಇದರ ನಡುವೆ ಟಿವಿ ಅಳವಡಿಗೆಗ ಮನವಿ ಮಾಡಿತ್ತು ಯಾವಾಗ ಅಟ್ಲೀಸ್ಟ್ ಟಿವಿಯಾದ್ರು ಕೊಡ್ತಾರೊ ಇಲ್ವೋ ಅಂತಾ ಟೆನ್ಷನ್‌ನಲ್ಲೆ ಇದ್ದರು. ನಿನ್ನೆ ರಾತ್ರಿ ದರ್ಶನ್‌ಗೆ ಟಿವಿ ಭಾಗ್ಯ ನೀಡಲಾಗಿದೆ.. ಟಿವಿಯಲ್ಲಿ ಫ್ಯಾನ್ಸ್‌ಗಳ ಹವಾ ಕಂಡು ಅಯ್ಯೋ ಹೊರಗೆ ಇಲ್ವಾ ಎಂಥಾ ತಪ್ಪಾಯ್ತು.. ನಾನು ಸಿನಿಮಾ ರಿಲೀಸ್ ಸಮಯದಲ್ಲಿ ಇರಬೇಕಿತ್ತು ಅಂತಾ ರಾತ್ರಿ ಇಡೀ ನಿದ್ದೆ ಮಾಡದೇ ಚಡಪಡಿಸಿದ್ದಾರಂತೆ. ಹೌದು, ಜೈಲಿನ ಕೊಠಡಿಯಲ್ಲಿ ಟಿವಿ ಅಳವಡಿಸಿದಕ್ಕೆ ದಾಸ ನಿರಾಳಯಾದ್ರು.. ನಿದ್ರೆ ಮಾಡದೆ ದರ್ಶನ್ ರಾತ್ರಿ ಇಡೀ ಟಿವಿ ನೋಡುತ್ತಾ ಜಾಗರಣೆ ಮಾಡಿದ್ದಾರೆ. ರಾತ್ರಿಯಿಡಿ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತುದ್ದುದ್ದನ್ನು ನೋಡಿ ದರ್ಶನ್ ಭಾವುಕರಾಗಿದ್ದಾರೆ. ಸೆಲೆಬ್ರಿಟಿ ಅಭಿಮಾನಿಗಳ ಜೊತೆ ಡೆವಿಲ್ ಸಂಭ್ರಮದಲ್ಲಿ ಭಾಗಿಯಾಗಲಾಗದೆ ಇರೋದಕ್ಕೆ ದಾಸ ಬೇಸರ ಹೊರಹಾಕಿದ್ದಾರೆ. ಚಡಪಡಿಕೆಯ ಮನಸ್ಸಿನಲ್ಲೆ ಎಲ್ಲಾ ಮಾದ್ಯಮಗಳನ್ನ ಆಚೆಂದೀಚೆಗೆ ತಿರುಗಿಸಿ ಡೆವಿಲ್ ಸುದ್ದಿಯನ್ನ ನೋಡ್ತಿದ್ದಾರೆ.
ಮೊನ್ನೆಯಷ್ಟೇ ನನ್ನ ಪ್ರೀತಿ ಸೆಲೆಬ್ರಿಟಿಗಳೇ ಅಂತಾ ದರ್ಶನ್ ಅಭಿಮಾನಿಗಳಿಗೆ ಪತ್ರದ ಮೂಲಕ ಸಂದೇಶ ಕಳುಹಿಸಿದರು..ಹಾಗೆಯೇ ಯಾವುದೇ ಗಾಳಿ ಸುದ್ದಿಗೆ ಕಿವಿಕೊಡದೆ ನನ್ನ ಮೇಲಿನ ಇರುವ ಪ್ರೀತಿ ಕಾಳಜಿ ಎಲ್ಲವೂ ಡಿವಿಲ್ ಸಿನಿಮಾದ ಮೇಲೆ ತೋರಿಸಿ ಅಂತಾ ಡೆವಿಲ್ ಸಿನಿಮಾಕ್ಕೆ ಸರ್ಪೋಟ್ ಮಾಡುವಂತೆ ತಮ್ಮ ಪ್ರೀತಿ ಅಭಿಮಾನಿಗಳಲ್ಲಿ ಪತ್ರದ ಮೂಲಕ ಮನವಿ ಮಾಡಿದ್ದರು..ನಾನು ನಿಮ್ಮ ಭೇಟಿಗಾಗಿ ದಿನ ಲೆಕ್ಕ ಹಾಕ್ತಿದ್ದೇನೆ ಅಂತಾ ತನ್ನ ನೆಚ್ಚಿನ ಫ್ಯಾನ್ಸ್‌ಗಳಿಗಾಗಿ ಭಾವುಕರಾಗಿ ಪತ್ರ ಬರೆದಿದರು. ತನ್ನ ಮಾತಿಗೆ ಬೆಲೆ ಕೊಟ್ಟು ಫ್ಯಾನ್ಸ್ ಡೆವಿಲ್ ಸಿನಿಮಾವನ್ನ ಕಂಡು ಕುಣಿದು ಕುಪ್ಪಳಿಸ್ತಿರೊದು ಕಂಡು ಕಣ್ಣೀರಾಗಿದ್ದಾರೆ..
ಇದನ್ನೂ ಓದಿ: ಡೆವಿಲ್ ಡಿವಿಲ್..ಎಲ್ಲೆಲೂ ಡೆವಿಲ್‌ದೆ ಸೌಂಡ್..ಫ್ಯಾನ್ಸ್‌ಗಳಿಂದ ಜನಸೇವೆ..ನಾಟಿ ಕೋಳಿ ಬಿರಿಯಾನಿ ವಿತರಣೆ









