)
Actor ranveer singh apologise : ಇತ್ತೀಚೆಗೆ ನಡೆದ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಕಾಂತಾರಾ: ಚಾಪ್ಟರ್ 1 ಚಿತ್ರದ ದೃಶ್ಯಗಳನ್ನು ಕೆಟ್ಟದಾಗಿ ಅಭಿನಯಿಸಿ ಬಾಲಿವುಡ್ ನಟ ರಣವೀರ್ ಸಿಂಗ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೋರಿದ್ದಾರೆ.
ನವೆಂಬರ್ 28ರಂದು ಸಂಜೆ ಗೋವಾದ ಪಣಜಿಯಲ್ಲಿ ನಡೆದಿದ್ದ ಐಎಫ್ಎಫ್ಐ ಸಮಾರೋಪ ಸಮಾರಂಭದಲ್ಲಿ ಸದ ರಣವೀರ್ ಸಿಂಗ್ 'ಕಾಂತಾರ' ಚಿತ್ರದ ನಾಯಕ ರಿಷಬ್ ಶೆಟ್ಟಿ ಅವರ ಎದುರೇ ವೇದಿಕೆಯ ಮೇಲೆ ಹೋಗಿ ಚಿತ್ರದಲ್ಲಿ ರಿಷಬ್ ಅವರ ಅಭಿನಯವನ್ನು ಹೊಗಳಲು ಆರಂಭಿಸಿದ್ದರು. ಆದರೆ, ಹೊಗಳುವ ಭರದಲ್ಲಿ ಅವರು ತೆರೆಯ ಮೇಲೆ ತೋರಿಸಲಾಗಿದ್ದ ದೈವಗಳನ್ನು ಅನುಕರಿಸವಾಗ ವ್ಯಂಗ್ಯವಾಗಿ ಅಭಿನಯಿಸಿದ್ದರು. ಅಲ್ಲದೆ, ದೈವಗಳನ್ನು ದೆವ್ವ ಎಂದು ಉಲ್ಲೇಖಿಸಿದ್ದರು.
ಕರಾವಳಿಯ ಮಗಳಾಗಿರುವ ನಟಿ ದೀಪಿಕಾ ಪಡುಕೋಣೆ ಪತಿಯಾಗಿರೋ ರಣವೀರ್ ದೈವಗಳ ನಾಡು ಕರಾವಳಿಯ ಅಳಿಯ ಆಗಿದ್ದಾರೆ. ಅಳಿಯನಿಂದಲೇ ತುಳುನಾಡು ದೈವದ ಬಗ್ಗೆ ಅವಮಾನ ಆಗಿದ್ದು ಕರಾವಳಿಗರ ಕಣ್ಣು ಕೆರಳಿಸಿದೆ. ರಣವೀರ್ ಸಿಂಗ್ಗೆ ದೆವ್ವಕ್ಕೂ, ದೈವಕ್ಕೂ ಇರುವ ವ್ಯತ್ಯಾಸವೇ ಗೊತ್ತಿಲ್ಲ ಅಂತ ಕೆಲವರು ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.. ಚಾವುಂಡಿ ದೇವಿಯೇ ಹೊರತು ದೆವ್ವ ಅಲ್ಲ ದೊಡ್ಡ ವೇದಿಕೆಯಲ್ಲಿ ಹೀಗೆ ಅಪಹಾಸ್ಯ ಮಾಡುವುದು ಎಷ್ಟು ಸರಿ ಅಂತ ನೆಟ್ಟಿಗರು ಪ್ರಶ್ನಿಸಿದರು. ಇತ್ತ ಅತಿ ಮುಖ್ಯವಾಗಿ ವೇದಿಕೆಯಲ್ಲಿ ನಟ ರಣವೀರ್ ಸಿಂಗ್ ದೈವದ ಬಗ್ಗೆ ಅಣಕಿಸುವಾಗ ವೀಕ್ಷಕರಾಗಿ ಕುಳಿತಿದ್ದ ನಟ ರಿಷಭ್ ಶೆಟ್ಟಿ ನಗುತ್ತಿರುತ್ತಾರೆ. ಈ ವಿಚಾರ ಕೂಡ ಫ್ಯಾನ್ಸ್ ಆಕ್ರೋಶ ಕಾರಣವಾಗಿದೆ. ಇದರರ್ಥ ಏನು ಅನ್ನೋದು ಸ್ವತಃ ರಿಷಬ್ ಶೆಟ್ಟಿಯೇ ಪ್ರತಿಕ್ರಿಯೆ ಕೊಟ್ಟಾಗ ಕ್ಲಾರಿಟಿ ಸಿಗಲಿದೆ. ಅದೇನೇ ಇರಲಿ ಮಾತನಾಡುವ ಬರದಲ್ಲಿ ಹೀಗೆ ಮಡೋದು ಸರಿಯಲ್ಲ ಅಂತಾ ರಣವೀರ್ ಸಿಂಗ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿವಾದಕ್ಕೆ ರಣವೀರ್ ಸಿಂಗ್ ಅವರು ನಿನ್ನೆ ತಮ್ಮ ಇನ್ಸ್ಟಾದಲ್ಲಿ "ಗೋವಾ ಸಮಾರೋಪ ಸಮಾರಂಭದಲ್ಲಿ ಮಾತನಾಡುವಾಗ ನನಗೆ ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ. ನನ್ನ ಉದ್ದೇಶ ರಿಷಬ್ ಅವರ ಅದ್ಭುತ ನಟನೆಯನ್ನು ಎತ್ತಿ ತೋರಿಸುವುದಾಗಿತ್ತು. ಒಬ್ಬ ನಟನಾಗಿ, ಆ ನಿರ್ದಿಷ್ಟ ದೃಶ್ಯವನ್ನು ಅವರು ನಿರ್ವಹಿಸಲು ಎಷ್ಟು ಶ್ರಮ ಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ಅದಕ್ಕಾಗಿ ಅವರಿಗೆ ನನ್ನ ಸಂಪೂರ್ಣ ಮೆಚ್ಚುಗೆ ಇದೆ" ಎಂದು ಅವರು ಬರೆದುಕೊಂಡಿದ್ದಾರೆ. "ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಗಳಿಗೆ ನಾನು ಯಾವಾಗಲೂ ಆಳವಾದ ಗೌರವ ನೀಡಿದ್ದೇನೆ. ಯಾರ ಭಾವನೆಗಳಿಗಾದರೂ ನಾನು ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ರಣವೀರ್ ಸಿಂಗ್ ಹೇಳಿದ್ದಾರೆ.